ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಬಿಸಿಯೂಟದಲ್ಲಿ ಫಿನಾಯಿಲ್: ಮಕ್ಕಳು ಅಸ್ವಸ್ಥ

Mainashree
Updated On : 27 Jun 2014, 11:37 am

ಜಗಳೂರು: ಫಿನಾಯಿಲ್ ಮಿಶ್ರಿತ ಬಿಸಿಯೂಟ ಸೇವಿಸಿದ ಲಕ್ಕಂಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂರಾರು ಮಕ್ಕಳು ಅಸ್ವಸ್ಥರಾಗಿ ಆಸ್ಪತ್ರೆ ಸೇರಿದ್ದಾರೆ. ಮೂವರು ತೀವ್ರ ನಿತ್ರಾಣರಾಗಿದ್ದಾರೆ. ಅಡುಗೆ ಸಿಬ್ಬಂದಿಯ ನಿರ್ಲಕ್ಷ್ಯದಿಂದ ಊಟದಲ್ಲಿ ಫಿನಾಯಿಲ್ ಬೆರೆತಿದ್ದೇ ಇದಕ್ಕೆ ಕಾರಣ ಎನ್ನಲಾಗಿದೆ.  ಶುಕ್ರವಾರ ಮಧ್ಯಾಹ್ನದ ಬಿಸಿಯೂಟ ಸೇವಿಸಿದ ಶಾಲೆಯ 4ನೇ ತರಗತಿಯ ಪವನ್‌ಕುಮಾರ, ಅಂಜಿನಪ್ಪ, 3ನೇ ತರಗತಿಯ ಅಜಯಕುಮಾರ್ ವಾಂತಿ, ಭೇದಿ, ಹೊಟ್ಟೆನೋವಿನಿಂದ ಬಳಲಿದ್ದಾರೆ. ತಕ್ಷಣವೇ ಶಿಕ್ಷಕರು ಆ ಮಕ್ಕಳನ್ನು ಜಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಕರಣ ಸಂಬಂಧ ಅಡುಗೆ ಸಿಬ್ಬಂದಿ ಸುಶೀಲಮ್ಮ, ಸಿದ್ದಮ್ಮ, ತಿಪ್ಪಕ್ಕ ಮೂವರನ್ನು ತಕ್ಷಣವೇ ಕೆಲಸದಿಂದ ತೆಗೆದು ಹಾಕಬೇಕು, ಅಕ್ಷರ ದಾಸೋಹ ಸಹಾಯಕ ನಿರ್ದೇಶಕರನ್ನು ವರ್ಗಾಯಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement