ಶಿಕ್ಷಕನಾದ ಬಾಲ ಕೌಟಿಲ್ಯ!
ಸಮಾನ ವಯಸ್ಕರಿಗೆ ಪಾಠ ಮಾಡಲಿದ್ದಾನೆ ಗೂಗಲ್ ಬಾಯ್, 6 ವರ್ಷದ ಬಾಲ 'ಕೌಟಿಲ್ಯ...
ಹರ್ಯಾಣ: 6 ವರ್ಷದ ಬಾಲ 'ಕೌಟಿಲ್ಯ' ಈಗ ತನ್ನ ವಯಸ್ಸಿನ ಮಕ್ಕಳಿಗೆ ಪಾಠ ಮಾಡುವ 'ಚಾಣಕ್ಯ'! ಭೌಗೋಳಿಕ, ಸೌರವ್ಯೂಹ, ಖನಿಜ ಸಂಪನ್ಮೂಲಕ್ಕೆ ಸಂಬಂಧಿಸಿದ ಪ್ರಶ್ನೆಗಳಿಗೆ ಫಟಾಫಟ್ ಅಂತ ಉತ್ತರ ನೀಡಿ ಗೂಗಲ್ ಬಾಯ್ ಎಂದೇ ಖ್ಯಾತಿ ಪಡೆದ ಹರ್ಯಾಣದ ಕೌಟಿಲ್ಯ ಈಗ ತನ್ನದೇ ಆದ ಶೈಕ್ಷಣಿಕ ಸಂಸ್ಥೆಯೊಂದನ್ನು ಹುಟ್ಟುಹಾಕಿದ್ದಾನೆ.
ಈ ಸಂಸ್ಥೆಯಲ್ಲಿ 6 ವರ್ಷದ ಕೌಟಿಲ್ಯನೇ ಶಿಕ್ಷಕ. ತನ್ನ ವಯಸ್ಸಿನ ೆ ಮಕ್ಕಳಿಗೆ ಪಾಠ ಮಾಡಲಿದ್ದಾನೆ 'ಗೂಗಲ್ ಬಾಯ್'.
ಶಾರ್ಟ್ಕಟ್ ಕಲಿಸ್ತಾನೆ: ತನ್ನ ಮಗನ ಸಾಮರ್ಥ್ಯವನ್ನು ಅರಿತುಕೊಂಡ ಕೌಟಿಲ್ಯನ ತಂದೆ ಸತೀಶ್ ಶರ್ಮಾ ಪಂಚಕುಲ ಎಂಬಲ್ಲಿ 'ಗೂಗಲ್ ಬಾಯ್ ಅಕಾಡೆಮಿ ಆಫ್ ಎಕ್ಸಲೆನ್ಸ್' ಎಂಬ ಸಂಸ್ಥೆ ಆರಂಭಿಸಿದ್ದಾರೆ. ಸಂಸ್ಥೆಯ ಆಡಳಿತ ಇವರೇ ನೋಡಿಕೊಳ್ಳಲಿದ್ದಾರೆ.