ಅತ್ಯಾಚಾರ ಆರೋಪ ಬಸವಲಿಂಗ ಶ್ರೀ ಬಂಧನ
ಬೆಳಗಾವಿ: ಅಡುಗೆ ಕೆಲಸದಾಕೆಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇರೆಗೆ ಬೆಳಗಾವಿಯ ಲಿಂಗಾಯತ ಧರ್ಮಪೀಠದ ಸ್ವಾಮೀಜಿ ಬಸವಲಿಂಗ ಪ್ರಭು ಸ್ವಾಮೀಜಿ ಅವರನ್ನು ಪೊಲೀಸರು ಶನಿವಾರ ರಾತ್ರಿ ಬಂಧಿಸಿದ್ದಾರೆ. ಶನಿವಾರ ಮಧ್ಯಾಹ್ನ ಮಠಕ್ಕೆ ಕರೆದೊಯ್ದ ಸ್ವಾಮೀಜಿ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಮಹಿಳೆ ಮಾಳಮಾರುತಿ ಪೊಲೀಸ್ ಠಾಣೆಗೆ ದೂರು ನೀಡಿದ್ದಳು. ಅದರಂತೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸ್ವಾಮೀಜಿಯನ್ನು ಬಂಧಿಸಿದ್ದಾರೆ. ಹುಬ್ಬಳ್ಳಿ ಮೂಲದ ಈ ಮಹಿಳೆ ಆಂಜನೇಯ ನಗರದಲ್ಲಿರುವ ಲಿಂಗಾಯತ ಧರ್ಮ ಪೀಠದಲ್ಲಿ ಶುಕ್ರವಾರವಷ್ಟೇ ಅಡುಗೆ ಕೆಲಸಕ್ಕೆ ಸೇರಿದ್ದಳು.