ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಆಚಾರ, ವಿಚಾರ, ವ್ಯವಹಾರ ಶುದ್ಧವಾಗಿರಲಿ

'ಆಚಾರ, ವಿಚಾರ, ವ್ಯವಹಾರಗಳನ್ನು ಶುದ್ಧವಾಗಿಟ್ಟುಕೊಳ್ಳಿ. ಭ್ರಷ್ಟಾಚಾರ, ಸ್ವಜನಪಕ್ಷ..

Vishwanath S
Updated On : 29 Jun 2014, 2:18 am

ಸೂರಜ್‌ಕುಂಡ್: 'ಆಚಾರ, ವಿಚಾರ, ವ್ಯವಹಾರಗಳನ್ನು ಶುದ್ಧವಾಗಿಟ್ಟುಕೊಳ್ಳಿ. ಭ್ರಷ್ಟಾಚಾರ, ಸ್ವಜನಪಕ್ಷಪಾತಗಳಿಂದ ದೂರವಿರಿ' ಲೋಕಸಭೆಗೆ ಮೊದಲ ಸಲ ಆಯ್ಕೆಯಾಗಿರುವ ಪಕ್ಷದ ಸಂಸದರಿಗೆ ಪ್ರಧಾನಿ ನರೇಂದ್ರ ಮೋದಿ ಉಪದೇಶವಿದು. ಹೊಸ ಸರ್ಕಾರದ ಚೊಚ್ಚಲ ಅಧಿವೇಶನಕ್ಕೆ (ಜು.7ರಿಂದ ಆರಂಭ) ಹೊಸ ಸಂಸದರನ್ನು ಸಜ್ಜುಗೊಳಿಸಲು ಪಕ್ಷ ಏರ್ಪಡಿಸಿರುವ ಎರಡು ದಿನಗಳ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು ಪ್ರಧಾನಿ.
-    ನಾನೂ ಮೊದಲ ಸಲ ಲೋಕಸಭೆಗೆ ಆಯ್ಕೆಯಾಗಿದ್ದೇನೆ. ಉತ್ತಮ ಸಂಸದೀಯಪಟುವಾಗಲು ನಾನೂ ಹಿರಿಯರಿಂದ ಮಾರ್ಗದರ್ಶನ ಪಡೆಯುತ್ತಿದ್ದೇನೆ.
-    ನಿಮಗೆ ಗೊಂದಲ ಕಾಡಿದರೆ ಹಿರಿಯರಿಂದ ತಿಳಿದುಕೊಳ್ಳಲು ಮುಜುಗರ ಬೇಡ. ನಾನು ಅಥವಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷರನ್ನೂ ಯಾವುದೇ ಸಮಯದಲ್ಲಿ ಸಂಪರ್ಕಿಸಬಹುದು.
- ನಾವೆಲ್ಲರೂ ಒಂದೇ ಕುಟುಂಬದ ಸದಸ್ಯರು. ನಮ್ಮೆಲ್ಲರ ಗುರಿಯೂ ಒಂದೇ. ಹೊಸ ಗೆಳೆಯರನ್ನು ಮಾಡಿಕೊಳ್ಳಲು, ಅವರಿಂದ ಹೊಸದನ್ನು ಕಲಿಯಲು ಪ್ರಯತ್ನಿಸಿ.
- ಯಾವುದಾದರೂ ನಿರ್ದಿಷ್ಟ ವಿಷಯದಲ್ಲಿ ಹೆಚ್ಚಿನ ಜ್ಞಾನ ಹೊಂದಲು ಪ್ರಯತ್ನಿಸಿ. ಸದನದಲ್ಲಿನ ನಿಮ್ಮ ಮಾತಿನಲ್ಲಿ ಅಧ್ಯಯನಶೀಲತೆ ತುಳುಕಾಡುತ್ತಿರಲಿ.
- ಮಾಧ್ಯಮಗಳೊಂದಿಗೆ ಹೆಚ್ಚು ಮಾತನಾಡಬೇಡಿ. ಆದರೆ ನಿಮ್ಮ ಸಾಧನೆಯನ್ನು ಜನರ ಮುಂದಿಡಲು, ಜನಸಂಪರ್ಕ ಸಾಧಿಸಲು ಸಾಮಾಜಿಕ ಮಾಧ್ಯಮಗಳನ್ನು ಸಮರ್ಥವಾಗಿ ಬಳಸಿಕೊಳ್ಳಲು ಹಿಂದೆ ಬೀಳಬೇಡಿ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement