ಕೊಚ್ಚಿಹೋಗಿದ್ದ ಮಹಿಳೆ ಶವ ಪತ್ತೆ
ಮುಳಗುಂದ: ಗದಗ, ಶಿರಹಟ್ಟಿ ತಾಲೂಕಿನಲ್ಲಿ ಶನಿವಾರ ಸಂಜೆ ಗುಡುಗು- ಸಿಡಿಲು, ಬಿರುಗಾಳಿ ಸಹಿತ ಸುರಿದ ಮಳೆಗೆ ಕೊಚ್ಚಿಹೋಗಿದ್ದ ಮಹಿಳೆಯ ಮೃತದೇಹ ಪತ್ತೆಯಾಗಿದೆ.
ಕೃಷಿ ಕೆಲಸಕ್ಕೆಂದು ಹೊಲಕ್ಕೆ ತೆರಳಿದ್ದ ಮುಳಗುಂದ ನಿವಾಸಿ ಭರಮವ್ವ ಗದಗಿನ (55) ರೈತ ಮಹಿಳೆ ಮನೆಗೆ ವಾಪಸ್ ಬರುವ ದಾರಿಯಲ್ಲಿ ದೊಡ್ಡಹಳ್ಳ ದಾಟುವಾಗ ನೀರಿನ ರಭಸಕ್ಕೆ ಕೊಚ್ಚಿಹೋಗಿದ್ದು, ಭಾನುವಾರ ಬೆಳಗ್ಗೆ ಶವ ಪತ್ತೆಯಾಗಿದೆ. ಶನಿವಾರ ಸಂಜೆ ಗಂಟೆಗೂ ಹೆಚ್ಚು ಕಾಲ ಜೋರು ಮಳೆ ಸುರಿದಿದ್ದು, ಪತಿ ಹಾಗೂ ಮೊಮ್ಮಗಳೊಂದಿಗೆ ಹೊಲಕ್ಕೆ ತೆರಳಿದ್ದ ಭರಮವ್ವ ಮಳೆ ಪ್ರಾರಂಭವಾಗುತ್ತಿದ್ದಂತೆ ಮನೆಯತ್ತ ಧಾವಿಸಿದ್ದಾರೆ.
ಮುಳಗುಂದ ಹಾಗೂ ನೀಲಗುಂದ ಮಧ್ಯೆ ಹರಿವ ದೊಡ್ಡ ಹಳ್ಳ ದಾಟುವಾಗ ನೀರಿನ ಪ್ರಮಾಣ ಜಾಸ್ತಿಯಾಗಿ ಆಕೆ ಕೊಚ್ಚಿಹೋಗಿದ್ದರು.