ತೆರಿಗೆ ವಿನಾಯಿತಿ ದುಪ್ಪಟ್ಟು?
ನವದೆಹಲಿ: ಉಳಿತಾಯ ಪ್ರವೃತ್ತಿ ಉತ್ತೇಜಿಸಲು ಹೂಡಿಕೆ ಮೇಲಿನ ತೆರಿಗೆ ವಿನಾಯಿತಿ ಮಿತಿಯನ್ನು ಕೇಂದ್ರ ಸರ್ಕಾರ ದುಪ್ಪಟ್ಟುಗೊಳಿಸುವ ನಿರೀಕ್ಷೆ ಇದೆ.
ಹಾಲಿ ಆದಾಯ ತೆರಿಗೆ ಕಾಯ್ದೆಯ ಅಡಿ ಒಟ್ಟು ಒಂದು ಲಕ್ಷ ರುಪಾಯಿವರೆಗಿನ ಹೂಡಿಕೆಗೆ ತೆರಿಗೆ ವಿನಾಯಿತಿ ಇದೆ. ಅದನ್ನು ಎರಡು ಲಕ್ಷಕ್ಕೆ ಏರಿಸುವ ಪ್ರಸ್ತಾವವನ್ನು ಹಣಕಾಸು ಇಲಾಖೆ ಗಂಭೀರವಾಗಿ ಪರಿಶೀಲಿಸುತ್ತಿದೆ. ಹಣಕಾಸು ಸಚಿವ ಅರುಣ್ ಜೇಟ್ಲಿ ಜು.10ರಂದು ಮಂಡಿಸುವ ಚೊಚ್ಚಲ ಬಜೆಟ್ನಲ್ಲಿ ಈ ಘೋಷಣೆ ಹೊರಬೀಳುವ ಸಾಧ್ಯತೆ ಇದೆ.