ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ನಿಯಮದ ಪ್ರಕಾರವೇ ಆಯ್ಕೆ: ಮಹೇಶ್ವರ

Mainashree
Updated On : 30 Jun 2014, 10:16 am

ಬಾಗಲಕೋಟೆ: ಕುಲಪತಿ ನೇಮಕಕ್ಕೆ ಸಂಬಂಧಿಸಿ ರಾಜ್ಯಪಾಲರು ಮಾಡಿರುವ ಆದೇಶ ಸರ್ಕಾರದ ನೀತಿ ನಿಯಮಗಳ ಅಡಿಯಲ್ಲೇ ನಡೆದಿದ್ದು ಕಾನೂನು ಬಾಹಿರ ಎಂಬ ಆರೋಪದಲ್ಲಿ ಸತ್ಯಾಂಶಗಳಿಲ್ಲ ಎಂದು ಬಾಗಲಕೋಟೆ ತೋಟಗಾರಿಕೆ ಕೃಷಿ ವಿಜ್ಞಾನ ವಿವಿ ನೂತನ ಕುಲಪತಿ ಡಾ.ಡಿ.ಎಲ್. ಮಹೇಶ್ವರ ಸ್ಪಷ್ಟನೆ ನೀಡಿದ್ದಾರೆ. ಸೋಮವಾರ ಕುಲಪತಿಯಾಗಿ ಅಧಿಕಾರ ಸ್ವೀಕರಿಸಿದ ನಂತರ 'ಕನ್ನಡಪ್ರಭ' ದೊಂದಿಗೆ ಮಾತನಾಡಿದ ಅವರು, ಈ 'ಹುದ್ದೆಗೆ ಅಗತ್ಯವಾದ ಸಾಮರ್ಥ್ಯ ಹಾಗೂ ಅನುಭವದ ಅರ್ಹತೆಯನ್ನು ಮಾನದಂಡವಾಗಿಸಿ ಅವಕಾಶ ನೀಡಲಾಗಿದೆ. ಕಾನೂನು ವ್ಯಾಪ್ತಿಯಲ್ಲಿ ವಿಮರ್ಶೆ ಮಾಡಿ ಸರ್ಕಾರ ತೀರ್ಮಾನ ಕೈಗೊಂಡಿದೆ. ಸರ್ಕಾರ ಕಳಿಸಿದ ಪಟ್ಟಿ ಪರಿಶೀಲನೆ ಮಾಡಿ ರಾಜ್ಯಪಾಲರು ನನ್ನ ಹೆಸರು ಅಂತಿಮಗೊಳಿಸಿ ಆದೇಶ ನೀಡಿದ್ದಾರೆ. ಅವರ ಆದೇಶದ ಅನುಸಾರವೇ ತಾವು ಅಧಿಕಾರ ವಹಿಸಿಕೊಂಡಿದ್ದೇನೆ' ಎಂದರು. ಕುಲಪತಿ ಹುದ್ದೆಗೆ ಯುಜಿಸಿ ನಿಯಮಾವಳಿ, ಐಸಿಆರ್ ನಾರ್ಮ್ಸ್ ಎಲ್ಲವನ್ನೂ ಅವಲೋಕಿಸಿಯೇ ಸರ್ಕಾರ ತಮ್ಮ ಹೆಸರು ಶಿಫಾರಸು ಮಾಡಿದೆ. ತೋಟಗಾರಿಕೆ ಇಲಾಖೆ ನಿರ್ದೇಶಕನಾಗಿ ಕಾರ್ಯನಿರ್ವಹಿಸುತ್ತಿದ್ದ ವೇಳೆ ತಮ್ಮ ಸೇವಾವಧಿ 8 ತಿಂಗಳು ಮಾತ್ರವಿತ್ತು. ಇದೀಗ ನಾಲ್ಕು ವರ್ಷಗಳವರೆಗೆ ಕುಲಪತಿಯಾಗಿ ಕಾರ್ಯನಿರ್ವಹಿಸಬೇಕಾಗಿದೆ ಎಂದರು.
-

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement