ಬಸವಲಿಂಗ ಸ್ವಾಮಿ ಬಂಧನ ವಿಸ್ತರಣೆ
ಬೆಳಗಾವಿ: ಅಡುಗೆ ಕೆಲಸದಾಕೆ ಮೇಲೆ ಅತ್ಯಾಚಾರ ಎಸಗಿದ ಆರೋಪ ಎದುರಿಸುತ್ತಿರುವ ಬೆಳಗಾವಿ ಲಿಂಗಾಯತ ಧರ್ಮಪೀಠದ ಬಸವಲಿಂಗ ಪ್ರಭು ಸ್ವಾಮೀಜಿ ನ್ಯಾಯಾಂಗ ಬಂಧನವನ್ನು ನ್ಯಾಯಾಲಯ ಜು.11ರವರೆಗೆ ನ್ಯಾಯಾಲಯ ವಿಸ್ತರಿಸಿದೆ. ಬೆಳಗ್ಗೆ 11.30ಕ್ಕೆ ಮಾಳಮಾರುತಿ ಪೊಲೀಸರು ಬಸವಲಿಂಗ ಪ್ರಭು ಸ್ವಾಮೀಜಿಯನ್ನು ಹಿಂಡಲಗಾ ಕೇಂದ್ರ ಕಾರಾಗೃಹದಿಂದ ಬೆಳಗಾವಿಯ ಎರಡನೇ ಜೆಎಂಎಫ್ಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದರು. ಈ ವೇಳೆ ಕೋರ್ಟ್ ಆವರಣದಲ್ಲಿ ನೂರಾರು ಮಂದಿ ಜಮಾಯಿಸಿದ್ದರಿಂದ ನೂಕು ನುಗ್ಗಲು ಉಂಟಾಯಿತು.