ಶಹಬ್ಬಾಸ್ ಇಸ್ರೋ
ಇಸ್ರೋ ಮುಡಿಗೆ ಮತ್ತೊಂದು ಸಾಧನೆಯ ಗರಿ. ಸೋಮವಾರ, 5 ವಿದೇಶಿ ಉಪಗ್ರಹಗಳನ್ನು...
ಶ್ರೀಹರಿಕೋಟಾ(ಆಂಧ್ರಪ್ರದೇಶ): ಇಸ್ರೋ ಮುಡಿಗೆ ಮತ್ತೊಂದು ಸಾಧನೆಯ ಗರಿ.
ಸೋಮವಾರ, 5 ವಿದೇಶಿ ಉಪಗ್ರಹಗಳನ್ನು ಹೊತ್ತ ಪಿಎಸ್‌ಎಲ್‌ವಿ-ಸಿ23 ರಾಕೆಟ್‌ನ ಉಡಾವಣೆ ಯಶಸ್ವಿಯಾಗಿದೆ. ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಬೆಳಗ್ಗೆ ಸರಿಯಾಗಿ 9.52ಕ್ಕೆ ನಾಲ್ಕು ರಾಷ್ಟ್ರಗಳ 5 ಉಪ ಗ್ರಹಗಳನ್ನು ಹೊತ್ತ ನೌಕೆ ನಭಕ್ಕೆ ಚಿಮ್ಮಿತು. ಪಿಎಸ್‌ಎಲ್‌ವಿ ಸಿ23 ಉಡಾವಣೆಯಾದ 17 ಮತ್ತು 19 ನಿಮಿಷಗಳಲ್ಲಿ ಎಲ್ಲ 5 ಉಪಗ್ರಹಗಳನ್ನು ಒಂದರ ಬಳಿಕ ಒಂದ ರಂತೆ ಕಕ್ಷೆಗೆ ಸೇರಿಸಿತು. ಈ ಐತಿಹಾಸಿಕ ಕ್ಷಣವನ್ನು ಪ್ರಧಾನಿ ಮೋದಿ ಸೇರಿದಂತೆ ಅನೇಕ ಗಣ್ಯರು ಕಣ್ತುಂಬಿಸಿಕೊಂಡರು. ಯಶಸ್ವಿ ಉಡಾವಣೆಯಲ್ಲಿ ಪಾತ್ರ ವಹಿಸಿದ ಎಲ್ಲ ವಿಜ್ಞಾನಿಗಳನ್ನೂ ಶ್ಲಾಘಿಸಿದ ಮೋದಿ, ಈ ಯಶಸ್ಸು ಭಾರತದ ಸಾಮರ್ಥ್ಯವನ್ನು ಜಗತ್ತಿಗೇ ತೋರಿಸಿದೆ ಎಂದರು. ಜತೆಗೆ, ನಮ್ಮ ನೆರೆರಾಷ್ಟ್ರಗಳಿಗೆ ಉಡು ಗೊರೆ ಕೊಡುವ ಸಲುವಾಗಿ 'ಸಾರ್ಕ್' ಉಪಗ್ರಹವೊಂದನ್ನು ಅಭಿವೃದ್ಧಿಪಡಿಸುವಂತೆ ಇಸ್ರೋ ವಿಜ್ಞಾನಿಗಳಿಗೆ ಸಲಹೆ ನೀಡಿದರು. ಮೋದಿ ಮೊತ್ತಮೊದಲ ಬಾರಿಗೆ ಇಂಗ್ಲಿಷ್‌ನಲ್ಲಿ ಭಾಷಣ ಮಾಡಿದ್ದು ವಿಶೇಷವಾಗಿತ್ತು.
ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ರಾಜ್ಯಪಾಲ ಇ.ಎಸ್.ಎಲ್. ನರಸಿಂಹನ್, ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಮತ್ತಿತರು ಸಾಕ್ಷಿಯಾದರು.
ಹಾಲಿವುಡ್ ಸಿನಿಮಾ 'ಗ್ರಾವಿಟಿ'ಯ ನಿರ್ಮಾಣ ವೆಚ್ಚ ನಮ್ಮ ಮಂಗಳಯಾನ ಯೋಜನೆಗಿಂತಲೂ ಅಧಿಕ ಎಂದು ಕೇಳಿದ್ದೇನೆ. ನಿಜಕ್ಕೂ ಇದು ದೊಡ್ಡ ಸಾಧನೆ. ನಾವು ಸಾಕಷ್ಟು ಸಾಧಿಸಿದ್ದೇವೆ. ಆದರೂ ಯೇ ದಿಲ್ ಮಾಂಗೇ ಮೋರ್ .
- ನರೇಂದ್ರ ಮೋದಿ, ಪ್ರಧಾನಿ