ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಮಂತ್ರಾಲಯ ಕಿರಿಯ ಶ್ರೀಗಳಿಗೆ ಅಧಿಕಾರ

Vishwanath S
Updated On : 12 Mar 2014, 1:00 am

ರಾಯಚೂರು: ಮಂತ್ರಾಲಯದ ಶ್ರೀ ರಾಘವೇಂದ್ರಸ್ವಾಮಿಗಳ ಮಠದ ಪೀಠಾಧಿಪತಿಗಳಾದ ಶ್ರೀ ಸುಯತೀಂದ್ರತೀರ್ಥರು ಸೋಮವಾರ ರಾತ್ರಿ ಶ್ರೀಮಠದ ಆಡಳಿತ ವ್ಯವಸ್ಥೆಯ ಸಂಪೂರ್ಣ ಅಧಿಕಾರವನ್ನು ಉತ್ತರಾಧಿಕಾರಿಗಳಾದ ಶ್ರೀ ಸುಬುಧೇಂದ್ರತೀರ್ಥರಿಗೆ ಹಸ್ತಾಂತರಿಸಿದ್ದಾರೆ. ಶ್ರೀಮಠಕ್ಕೆ ಸೇರಿದ ಶಾಖಾ ಮಠಗಳು, ಕಲ್ಯಾಣ ಮಂಟಪಗಳು, ಶೈಕ್ಷಣಿಕ ಸಂಸ್ಥೆಗಳು ಹಾಗೂ ಶ್ರೀಮಠಕ್ಕೆ ಸಂಬಂಧಪಟ್ಟ ಸಮಿತಿಗಳ ಆಡಳಿತ ವ್ಯವಸ್ಥೆಯನ್ನು ಶ್ರೀಮಠದ ಉತ್ತರಾಧಿಕಾರಿ ಶ್ರೀಸುಬುಧೇಂದ್ರ ತೀರ್ಥರಿಗೆ ವಹಿಸಿದ್ದಾರೆ. ಪೀಠಾಧಿಪತಿಗಳು ಮುಂದಿನ ದಿನಗಳಲ್ಲಿ ಜಪತಪಾನುಷ್ಠಾನ, ಶ್ರೀ ಮನ್ಮೂಲ ರಾಮದೇವರ ಏಕಾಂತ ಸೇವೆಯಲ್ಲಿರಲು ಬಯಸಿರುವ ಹಿನ್ನೆಲೆಯಲ್ಲಿ ಅಧಿಕಾರ ಹಸ್ತಾಂತರಿಸಿದ್ದು, ಶ್ರೀಮಠದ ಶ್ರೇಯೋಭಿವೃದ್ಧಿಗೆ ಉತ್ತರಾಧಿಕಾರಿಗೆ ಸಹಕಾರ ನೀಡುವಂತೆ ಶ್ರೀಗಳ ಹೆಚ್ಚುವರಿ ಆಪ್ತ ಕಾರ್ಯದರ್ಶಿ ಎಸ್.ಎನ್. ಸುಯಮೀಂದ್ರಾಚಾರ್ ಕೋರಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement