ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

'ಅಂಬಿ'ಗಾಗಿ ಅಂಬರೀಷ್ ಸೈಕಲ್ ಯಾತ್ರೆ!

Vishwanath S
Updated On : 14 Mar 2014, 1:01 am

ಬಳ್ಳಾರಿ: ಅನಾರೋಗ್ಯದಿಂದ ಬಳಲುತ್ತಿರುವ ಕನ್ನಡ ಚಿತ್ರರಂಗದ ಖ್ಯಾತ ನಟ, ಸಚಿವ ಅಂಬರೀಷ್ ಬೇಗನೆ ಗುಣಮುಖರಾಗಲಿ ಎಂದು ಹಾರೈಸಿ, ಸಿರುಗುಪ್ಪ ತಾಲೂಕಿನ ಬಗ್ಗೂರು ಗ್ರಾಮದ ಯುವಕ ಅಂಬರೀಷ್ ಬಳ್ಳಾರಿಯ ಕನಕದುರ್ಗಮ್ಮ ದೇವಸ್ಥಾನದಿಂದ ಬೆಂಗಳೂರಿನ ಅಣ್ಣಮ್ಮ ದೇವಸ್ಥಾನದವರೆಗೆ ಸೈಕಲ್ ಯಾತ್ರೆ ಆರಂಭಿಸಿದ್ದಾರೆ.
ಕನಕದುರ್ಗಮ್ಮ ಸಿಡಿಬಂಡಿ ಉತ್ಸವದ ನಿಮಿತ್ತ ಮಂಗಳವಾರ ಸಿರುಗುಪ್ಪದಿಂದ ಬಳ್ಳಾರಿಗೆ ಆಗಮಿಸಿದ ಅಂಬರೀಷ್, ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಸೈಕಲ್ ಯಾತ್ರೆ ಕೈಗೊಂಡಿದ್ದಾರೆ. ಸಿನಿಮಾ ನಟ ಅಂಬರೀಷ್ ಕಟ್ಟಾ ಅಭಿಮಾನಿಯಾದ ನನಗೆ ಅವರು ಅನಾರೋಗ್ಯಕ್ಕೀಡಾಗಿರುವುದು ತುಂಬ ನೋವು ತಂದಿದೆ. ಹಲವು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಂಬರೀಷ್ ಕೂಡಲೇ ಗುಣಮುಖರಾಗಲೆಂದು ದೇವರಲ್ಲಿ ಪ್ರಾರ್ಥಿಸಿದ್ದೇನೆ. ಈ ನಿಟ್ಟಿನಲ್ಲಿ ಬಳ್ಳಾರಿ ಕನಕದುರ್ಗಮ್ಮ ದೇವಸ್ಥಾನದಿಂದ ಬೆಂಗಳೂರಿನ ಅಣ್ಣಮ್ಮ ದೇವಸ್ಥಾನಕ್ಕೆ ತೆರಳಿ 101 ತೆಂಗಿನಕಾಯಿ ಒಡೆದು ಹರಕೆ ತೀರಿಸಲಾಗುವುದು ಎಂದರು. ಇವರ ಸೈಕಲ್ ಜಾಥಾಕ್ಕೆ ಸ್ಥಳೀಯ ನವ ಕರ್ನಾಟಕ ನಿರ್ಮಾಣ ವೇದಿಕೆ ಸಹಕಾರ ನೀಡಿದ್ದು, ವೇದಿಕೆಯ ಜಿಲ್ಲಾಧ್ಯಕ್ಷ ಪಿ. ಶೇಖರ್, ಪಾಲಿಕೆ ಸದಸ್ಯ ನಾಗರಾಜ್, ಕೆ. ರಾಮಾಂಜಿನಿ, ನಾಗೇಂದ್ರ, ವೀರನಗೌಡ ಶುಭ ಹಾರೈಸಿ, ಬೀಳ್ಕೊಟ್ಟರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement