'ಸುವರ್ಣ ಮಹಿಳೆ ಪ್ರಶಸ್ತಿ'ಗೆ ನಿಮ್ಮ ಆಯ್ಕೆ
ಬೆಂಗಳೂರು: ಸುವರ್ಣ ವಾಹಿನಿ ಹಾಗೂ 'ಕನ್ನಡಪ್ರಭ'ದ ವತಿಯಿಂದ ನೀಡಲಾಗುವ 'ಸುವರ್ಣ ಮಹಿಳೆ ಪ್ರಶಸ್ತಿ'ಗೆ ವಿವಿಧ ವಿಭಾಗಗಳಲ್ಲಿ ಸಾಧಕರನ್ನು ನಾಮ ನಿರ್ದೇಶನ ಮಾಡಲಾಗಿದ್ದು, ಅವರನ್ನು ಅರ್ಹ ವ್ಯಕ್ತಿಯನ್ನು ಅಂತಿಮಗೊಳಿಸಲು ಓದುಗರಿಗೆ ಅವಕಾಶ ಕಲ್ಪಿಸಲಾಗಿದೆ.
ಓದುಗರು ಆಯ್ಕೆ ಮಾಡಿದ ಅಭ್ಯರ್ಥಿಗೆ ಮಾರ್ಚ್ 29ರಂದು ಮಲ್ಲೇಶ್ವರ ಮೈದಾನದಲ್ಲಿ ಪ್ರಶಸ್ತಿ ನೀಡಲಾಗುವುದು. ಎಸ್ಎಂಎಸ್ ಮಾಡಬೇಕಾದ ಸಂಖ್ಯೆ-9241012211.
ಅಭ್ಯರ್ಥಿಗಳು
ಸಮಾಜ ಸೇವೆ...
ಹೆಸರು ಸಾಧನೆ ಸ್ಥಳ ಎಸ್ಎಂಎಸ್ ಕೋಡ್.
1. ಪವಿತ್ರ-ತಮ್ಮ ಎನ್ಜಿಓದಲ್ಲಿ ಕೇವಲ ವಿಕಲಚೇತನ ಮಹಿಳೆಯರಿಗೆ ಉದ್ಯೋಗ-ಬೆಂಗಳೂರು-ಡಡ1.
2. ಆದೆಮ್ಮಾ-70 ವರ್ಷದ ಯಾವುದೇ ತರಬೇತಿ ಪಡೆಯದ ನರ್ಸ್,5000ಕ್ಕೂ ಹೆಚ್ಚು ಯಶಸ್ವಿ ಪ್ರಸೂತಿ ಮಾಡಿಸಿದ್ದಾರೆ-ಬಳ್ಳಾರಿ-ಡಡ2.
3.ಸಾಲುಮರದ ದೇವಮ್ಮ-30 ಸಾವಿರಕ್ಕೂ ಹೆಚ್ಚು ಮರಗಳನ್ನು ನೆಟ್ಟು ಬೆಳೆಸಿದ್ದಾರೆ-ಕೊಪ್ಪಳ-ಡಡ3.
4.ಲೂಸಿ ಸಲ್ಡಾನಾ-ಬಡ ಮಕ್ಕಳಿಗೆ ಶಿಕ್ಷಣ ನೀಡುತ್ತಿರುವ ನಿವೃತ್ತ ಶಿಕ್ಷಕಿ-ಧಾರವಾಡ-ಡಡ4.
5. ಪುಟ್ಟ ವೀರಮ್ಮ-ಶಾಲೆ ಹಾಗೂ ಅನಾಥಾಶ್ರಮ ನಡೆಸುತ್ತಿದ್ದಾರೆ-ಮೈಸೂರು-ಡಡ5.
ಉದ್ಯಮ
1. ಮಂಜುಳಾ ಬಿರಾದಾರ್-ಜ್ಯೋತಿ ಫುಡ್ ಪ್ರಾಡಕ್ಸ್ ಎಂಬ ಉತ್ತರ ಕರ್ನಾಟಕ ಆಹಾರ ಪದಾರ್ಥದ ಸಂಸ್ಥೆಯ ಮಾಲಕಿ-ಬಿಜಾಪುರ-್ಖಂ1
2. ಸೀತಮ್ಮ- ಗೊಂಬೆ ತಯಾರಕಿ, ದೇಶಾದ್ಯಂತ ಬೇಡಿಕೆ-ಚಿಕ್ಕಬಳ್ಳಾಪುರ-್ಖಂ2
3. ತಾರಾಮತಿ-ಗುಲ್ಬರ್ಗ-ಅಗರಬತ್ತಿ ಕಾರ್ಖಾನೆ ಸ್ಥಾಪಿಸಿ ನೂರಾರು ಮಹಿಳೆಯರಿಗೆ ಉದ್ಯೋಗ ನೀಡಿದ್ದಾರೆ-್ಖಂ3
4. ಹೋಳಿಗೆ ಗೌರಮ್ಮ-ದಕ್ಷಿಣ ಭಾರತದ ಸಿಹಿ ತಿಂಡಿ, ಹೋಳಿಗೆ ತಯಾರಿಯಲ್ಲಿ ಪರಿಣತೆ, ವಿದೇಶಗಳಿಗೂ ರಫ್ತು-ಶಿವಮೊಗ್ಗ-್ಖಂ4
5. ಆಶಾ ಶೇಷಾದ್ರಿ-ಗ್ರಾಮೀಣ ಪುಷ್ಪೋದ್ಯಮ, ವಿದೇಶಗಳಿಗೂ ರಫ್ತು-ತೀರ್ಥಹಳ್ಳಿ, ಶಿವಮೊಗ್ಗ-್ಖಂ5.
ಸಾಹಸಿ ಜೀವನ
1. ಭಗೀರಥಿ ಭಾಗ್ಯಮ್ಮ-ಸ್ಮಶಾನದಲ್ಲಿ ವಾಸ, ಅಲ್ಲಿನ ಸೇವೆಗಳ ನಿರ್ವಹಣೆ-ಚಿಕ್ಕಮಗಳೂರು-ಖಒ1
2. ಸುವರ್ಣಾ-ಎಚ್ಐವಿ ಪೀಡಿತ ಮಹಿಳೆ, ಇತರ ಪೀಡಿತರಿಗೆ ನೆರವಾಗುತ್ತಿದ್ದಾರೆ-ಗುಲ್ಬರ್ಗಾ-ಖಒ2
3. ಸಿದ್ದಮ್ಮ-ಈಗಲೂ ಹೊಲದಲ್ಲಿ ಕೆಲಸ ಮಾಡುವ 103 ವರ್ಷದ ವೃದ್ಧ ಮಹಿಳೆ.-ಹಾವೇರಿ-ಖಒ3
4. ಸಂಶಾದ್- ಜಿಲ್ಲೆಯ ಏಕೈಕ ಮಹಿಳಾ ಆಟೋ ರಿಕ್ಷಾ ಚಾಲಕಿ-ಹಾಸನ-ಖಒ4
5. ಶಾಂತಮ್ಮಜ್ಜಿ- ತನ್ನ ಪಂಕ್ಚರ್ ಅಂಗಡಿಯಲ್ಲಿ ಕೆಲಸ ನಿರ್ವಹಿಸಿಯೇ ಜೀವನ ಸಾಗಿಸುತ್ತಿರುವ 70 ವರ್ಷದ ಮಹಿಳೆ-ಹಾನಗಲ್, ಹಾವೇರಿ.-ಖಒ5