ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

Much More than ಮಚ್ಚೆ

ಯಾರಿಟ್ಟರೀ ಚುಕ್ಕಿ ಎಂದು ಕೇಳುವಂತಿಲ್ಲ. ಯಾಕಿಟ್ಟರು ಎನ್ನುವಂತೆಯೂ ಇಲ್ಲ.

Lingaraj Badiger
Updated On : 17 Mar 2014, 12:23 pm

ಯಾರಿಟ್ಟರೀ ಚುಕ್ಕಿ ಎಂದು ಕೇಳುವಂತಿಲ್ಲ. ಯಾಕಿಟ್ಟರು ಎನ್ನುವಂತೆಯೂ ಇಲ್ಲ. ಮಚ್ಚೆ ನಮ್ಮ ಜೊತೆಗೇ ಹುಟ್ಟುತ್ತದೆ. ಸಾಯುವವರೆಗೂ ಜೊತೆಗಿರುತ್ತದೆ. ನಮ್ಮ ದೇಹದಲ್ಲಿ ನಮಗಿರುವ ಪರ್ಮನೆಂಟ್ ಐಡೆಂಟಿಟಿ ಅಂದರೆ ಒಂದು ಬೆರಳಚ್ಚು, ಇನ್ನೊಂದು ಮಚ್ಚೆ. ವಿಮೆ ಮಾಡಿಸುವಾಗ ಏಜೆಂಟರು 'ನಿಮ್ಮ ಮೈಯಲ್ಲಿ ಮಚ್ಚೆಯೆಲ್ಲಿದೆ?' ಎಂದು ಕೇಳಿ ಬರೆದುಕೊಳ್ಳುವುದನ್ನು ನೋಡಿದ್ದೀರಲ್ಲ.

ಮಚ್ಚೆಯಿಲ್ಲದ ಮನುಷ್ಯರಿಲ್ಲ. ಪ್ರತಿಯೊಬ್ಬರ ದೇಹದಲ್ಲೂ ಎಲ್ಲಾದರೂ ಒಂದು ಕಪ್ಪು ಚುಕ್ಕಿ ಇದ್ದೇ ಇರುತ್ತದಂತೆ. 'ಇದು ನಿನ್ನ ಬದುಕಿಗೊಂದು ಕಪ್ಪು ಚುಕ್ಕಿ' ಎನ್ನುವಂತಿಲ್ಲ ಕೆಲವರ ಬದುಕಿನಲ್ಲಿ ಇಂತಹ ಹಲವಾರು ಕಪ್ಪು ಚುಕ್ಕಿಗಳಿರುತ್ತವೆ.

ಆದರೆ ಈ ಮಚ್ಚೆಯ ಬಗ್ಗೆ ನಿಮಗೊಂದು ಮಜಕೂರು ಗೊತ್ತಾ? ಇದು ಯಾವ ಜಾಗದಲ್ಲಿದೆ ಎಂಬುದನ್ನು ನೋಡಿಕೊಂಡು ನಿಮ್ಮ ಭವಿಷ್ಯ ಹೇಳಲಾಗುತ್ತದೆ. ಇದನ್ನು ಬೇಕಾದರೆ ಮಚ್ಚೆ ಭವಿಷ್ಯ ಎನ್ನಿ. ಜಾತಕ ನೋಡಿ ಭವಿಷ್ಯ ಹೇಳುವುದು, ಕೈ ನೋಡುವುದು, ಮುಖ ನೋಡುವುದು, ಕಣ್ಣು ನೋಡುವುದು ಇವುಗಳ ಸಾಲಿಗೆ ಮಚ್ಚೆ ನೋಡುವುದನ್ನೂ ಸೇರಿಸಿಕೊಳ್ಳಬಹುದು.

ಈ ಸಂಚಿಕೆಯಲ್ಲಿ ಮಚ್ಚೆ ನೋಡಿ ನಿಮ್ಮ ಗುಣ ತಿಳಿದುಕೊಳ್ಳಿ. ಭವಿಷ್ಯ ಆಮೇಲೆ.


(ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಸಮೂಹದ 'ಸಖಿ' ಪಾಕ್ಷಿಕದಿಂದ ಆಯ್ದ ಬರಹ)ಸಖಿ ಚಂದಾದಾರರಾಗಲು ಸಂಪರ್ಕಿಸಿ: 9742400220, 9886143555 ಸಖಿ ಖರೀದಿಗಾಗಿ http://www.magzter.com/IN/Express-Network-Private-Limited/Sakhi ಗೆ ಭೇಟಿನೀಡಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement