ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಬಿಡದಿ ಟೊಯೋಟಾ ಘಟಕಕ್ಕೆ ಹೊರಗೀಲಿ

ಬಿಡದಿಯಲ್ಲಿರುವ ಟೊಯೋಟಾ ಕಿರ್ಲೊಸ್ಕರ್ ಮೋಟರ್ ಘಟಕದಲ್ಲಿ ಲಾಕೌಟ್‌ನಲ್ಲಿ ಘೋಷಿಸಲಾಗಿದೆ. ವೇತನ ಪರಿಷ್ಕರಣೆ ವಿಚಾರದಲ್ಲಿ ಆಡಳಿತ ಮಂಡಳಿ ಮತ್ತು...

Vishwanath S
Updated On : 17 Mar 2014, 1:43 am

ಮುಂಬೈ/ರಾಮನಗರ: ಬಿಡದಿಯಲ್ಲಿರುವ ಟೊಯೋಟಾ ಕಿರ್ಲೊಸ್ಕರ್ ಮೋಟರ್ ಘಟಕದಲ್ಲಿ ಲಾಕೌಟ್‌ನಲ್ಲಿ ಘೋಷಿಸಲಾಗಿದೆ. ವೇತನ ಪರಿಷ್ಕರಣೆ ವಿಚಾರದಲ್ಲಿ ಆಡಳಿತ ಮಂಡಳಿ ಮತ್ತು ನೌಕರರ ನಡುವಿನ ಮಾತುಕತೆ ಮುರಿದು ಬಿದ್ದಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಮಾಡಲಾಗಿದೆ.
ಟೊಯೋಟಾ ಕಿರ್ಲೋಸ್ಕರ್‌ನ ಎರಡು ಘಟಕಗಳು ಬಿಡದಿಯಲ್ಲಿ ಕಾರ್ಯವೆಸಗುತ್ತಿದ್ದು,  ಪ್ರತಿ ವರ್ಷ 3,10,000 ವಾಹನಗಳನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.
ಹೇಳಿಕೆಯಲ್ಲಿ ಸ್ಪಷ್ಟನೆ: ಪ್ರಸಕ್ತ ಹಣಕಾಸು ವರ್ಷದಲ್ಲಿ ವೇತನ ಪರಿಷ್ಕರಣೆ ಬಗ್ಗೆ ಹತ್ತು ತಿಂಗಳಿನಿಂದ ನೌಕರರು ಮತ್ತು ಆಡಳಿತ ಮಂಡಳಿ ನಡುವೆ ಮಾತುಕತೆ ನಡೆಯುತ್ತಿತ್ತು. ಎರಡೂ ಪಕ್ಷಗಳ ನಡುವೆ ಈ ಬಗ್ಗೆ ಯಾವುದೇ ರೀತಿಯ ಒಪ್ಪಂದಕ್ಕೆ ಬರಲು ಸಾಧ್ಯವಾಗಿಲ್ಲ. ಕಾರ್ಮಿಕ ಇಲಾಖೆ ಕೂಡ ಏಳು ತ್ರಿಪಕ್ಷೀಯ ಮಾತುಕತೆ ನಡೆಸಿತ್ತು. ಅದೂ ಯಶಸ್ವಿಯಾಗಲಿಲ್ಲ. ಹೀಗಾಗಿ ಲಾಕೌಟ್‌ಗೆ ನಿರ್ಧರಿಸಲಾಗಿದೆ ಎಂದು ಆಡಳಿತ ಮಂಡಳಿ ಭಾನುವಾರ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದೆ.
ಮಾತುಕತೆ ನಡೆಯುತ್ತಿದೆ: ಲಾಕೌಟ್ ಘೋಷಣೆ ಮಾಡಲಾಗಿದ್ದರೂ, ಸೌಹಾರ್ದಯುತವಾಗಿ ಪರಿಸ್ಥಿತಿ ತಿಳಿಗೊಳಿಸಲು ಮಾತುಕತೆ ಮುಂದುವರಿಯುತ್ತಿದೆ. ಆದರೂ ನೌಕರರ ಒಂದು ವರ್ಗ ಉತ್ಪಾದನೆ ತಡೆಯಲು ಯತ್ನಿಸುತ್ತಿದೆ ಎಂದು ಆಡಳಿತ ಮಂಡಳಿ ಹೇಳಿಕೆಯಲ್ಲಿ ದೂರಿದೆ.
ವೇತನ ಪರಿಷ್ಕರಣೆ ಮಾಡಿಲ್ಲ: ಈ ನಡುವೆ ರಾಮನಗರದಲ್ಲಿ ಮಾತನಾಡಿದ ಕಾರ್ಮಿಕ ಸಂಘಟನೆಗಳ ಮುಖಂಡರು ಹದಿನಾಲ್ಕು ವರ್ಷಗಳಿಂದ ವೇತನ ಪರಿಷ್ಕರಣೆ ಮಾಡಿಲ್ಲ. ಇದರಿಂದಾಗಿ ಜೀವನ ನಿರ್ವಹಣೆಗೆ ತೊಂದರೆಯಾಗಿದೆ. ಸುಮಾರು 4 ಸಾವಿರಕ್ಕೂ ಅಧಿಕ ಮಂದಿ ಟೊಯೋಟಾ ಘಟಕದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸದ್ಯ ನಷ್ಟವಿಲ್ಲದೆ ಕಂಪನಿ ನಡೆಯುತ್ತಿದೆ. ಹೀಗಿದ್ದರೂ ನೌಕರರಿಗೆ ನೋಟಿಸ್ ನೀಡದೆ ಲಾಕೌಟ್‌ಗೆ ಮುಂದಾಗಿರುವ ಆಡಳಿತ ಮಂಡಳಿಯ ನಿರ್ಣಯ ಕಾನೂನು ಬಾಹಿರ ಎಂದು ಪ್ರತಿಪಾದಿಸಿದ್ದಾರೆ. ನಿರ್ಧಾರ ಹಿಂಪಡೆಯದಿದ್ದರೆ ಕಂಪನಿ ಆವರಣದಲ್ಲಿ ಕುಟುಂಬ ಸದಸ್ಯರ ಸಮೇತ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದ್ದಾರೆ.
ಬಿಡದಿ ಘಟಕದ ಬಗ್ಗೆ
- 1997ರ ಅಕ್ಟೋಬರ್‌ನಲ್ಲಿ ಘಟಕ ಸ್ಥಾಪನೆ
- ಟಯೋಟಾ ಮತ್ತು ಪುಣೆ ಮೂಲದ ಕಿರ್ಲೊಸ್ಕರ್ ಸಂಸ್ಥೆ ನಡುವೆ 89:11 ಮಾದರಿಯಲ್ಲಿ 2 ಘಟಕಗಳ ಆರಂಭ
- 6,400 ಮಂದಿಗೆ ಉದ್ಯೋಗ
- ಮೊದಲ ಕಾರು ಉತ್ಪಾದನೆಯಾದ ವರ್ಷ- 1999 ಡಿಸೆಂಬರ್
- 432 ಎಕರೆ ಪ್ರದೇಶದಲ್ಲಿ ಸ್ಥಾಪನೆಯಾಗಿರುವ 2 ಘಟಕಗಳು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement