ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಕ್ರಿಮಿಯಾಗೆ ಸ್ವಾತಂತ್ರ್ಯ

Mainashree
Updated On : 17 Mar 2014, 11:22 am

ಸಿಂಫೆರೊಪೊಲ್/ನ್ಯೂಯಾರ್ಕ್:  ಕ್ರಿಮಿಯಾ ಗಣರಾಜ್ಯ ರಷ್ಯಾಕ್ಕೆ ಸೇರ್ಪಡೆಯಾಗಬೇಕು ಎಂದು ಅಲ್ಲಿನ ಜನತೆ ಅಭಿಪ್ರಾಯಪಟ್ಟಿದ್ದಾರೆ. ಅದಕ್ಕೆ ಸಂಬಂಧಿಸಿದಂತೆ ಭಾನುವಾರ ಅಲ್ಲಿ ಜನಮತ ಗಣನೆ ನಡೆದಿದೆ. ಅದರ ಪ್ರಕಾರ ಶೇ.93ರಷ್ಟು ಮಂದಿ ಜನರು ರಷ್ಯಾ ಜತೆ ಸೇರ್ಪಡೆಗೊಳ್ಳಲು ಒಪ್ಪಿಗೆ ಸೂಚಿಸಿದ್ದಾರೆ. ಆದರೆ, ಜನಾಭಿಪ್ರಾಯ ಸಂಗ್ರಹಕ್ಕೆ ಅಮೆರಿಕ, ಬ್ರಿಟನ್ ಸೇರಿದಂತೆ ಪಾಶ್ಚಿಮಾತ್ಯ ರಾಷ್ಟ್ರಗಳು ಹಾಗೂ ಐರೋಪ್ಯ ರಾಷ್ಟ್ರಗಳು ತೀವ್ರ ಪ್ರತಿರೋಧ ವ್ಯಕ್ತಪಡಿಸಿವೆ. ಜತೆಗೆ ರಷ್ಯಾ ವಿರುದ್ಧ ಆರ್ಥಿಕ ದಿಗ್ಬಂಧನ ವಿಧಿಸುವ ಬೆದರಿಕೆ ಹಾಕಿವೆ. ಹೀಗಾಗಿ, ಪರಿಸ್ಥಿತಿ ತೀವ್ರ ಬಿಗುವಿನಿಂದ ಕೂಡಿದೆ. ಶೀತಲ ಸಮರ ಯುಗದ ಬಳಿಕ ಪೂರ್ವ ಮತ್ತು ಪಾಶ್ಚಿಮಾತ್ಯ ರಾಷ್ಟ್ರಗಳ ನಡುವಿನ ಅತ್ಯಂತ ಬಿಗುವಿನ ಪರಿಸ್ಥಿತಿ ಇದಾಗಲಿದೆ. ಇದೇ ವೇಳೆ ರಷ್ಯಾದ 7 ಅಧಿಕಾರಿಗಳ ಮೇಲೆ ಅಮೆರಿಕ ದಿಗ್ಬಂಧನ ಏರಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement