ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ನೀರಜ್ ಬಿಜೆಪಿಗೆ

Mainashree
Updated On : 17 Mar 2014, 11:23 am

ಬೆಂಗಳೂರು: ಲಂಡನ್‌ನ ಲ್ಯಾಂಬೆಥ್ ನಗರದ ಮಾಜಿ ಮೇಯರ್ ನೀರಜ್ ಪಾಟೀಲ್ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. 'ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವಕ್ಕೆ ನರೇಂದ್ರ ಮೋದಿಯಂತಹ ಯಶಸ್ವಿ ನಾಯಕನ ಅಗತ್ಯವಿದೆ. ಬದಲಾಗಿ ಅಧಿಕಾರ ನಡೆಸಲಾಗದೆ ಪ್ರತಿಭಟನೆ ಮಾಡುವವರಿಂದ ಅಪಾಯ ಎದುರಿಸಬೇಕಾಗುತ್ತದೆ' ಎಂದು ಬಿಜೆಪಿಯ ಪ್ರಾಥಮಿಕ ಸದಸ್ಯತ್ವವನ್ನು ಅನಂತ್‌ಕುಮಾರ್ ಅವರಿಂದ ಸ್ವೀಕರಿಸಿ ನಗರದಲ್ಲಿ ಸೋಮವಾರ ಅಭಿಪ್ರಾಯಪಟ್ಟರು. ಬಿಜೆಪಿಯ ಆದರ್ಶವನ್ನು ನಂಬಿ ಯಾವುದೆ ಹುದ್ದೆ ಅಥವಾ ಟಿಕೆಟ್ ನಿರೀಕ್ಷೆಯಿಲ್ಲದೆ ಪ್ರಚಾರದಲ್ಲಿ ಭಾಗವಹಿಸಲು ಬಂದಿದ್ದೇನೆ. ಕಳೆದ 10 ವರ್ಷದ ಯುಪಿಎ ಆಡಳಿತದಿಂದ ಜನರಲ್ಲಿ ಪ್ರಜಾಪ್ರಭುತ್ವದ ಮೇಲೆ ವಿಶ್ವಾಸ ಹೋಗುತ್ತಿದೆ. ಮೋದಿಯಿಂದ ಮಾತ್ರ ಈ ವಿಶ್ವಾಸ ಮರಳಿ ತರಲು ಸಾಧ್ಯ ಎಂದು ನಂಬಿದ್ದೇನೆ ಎಂದು ಪಾಟೀಲ್ ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement