ರಾಡಾರ್ನಿಂದ ಮಿಸ್
ನವದೆಹಲಿ/ಕೌಲಾಲಂಪುರ/ನ್ಯೂಯಾರ್ಕ್: ನಾಪತ್ತೆಯಾಗಿರುವ ಮಲೇಷ್ಯಾ ವಿಮಾನ ರಾಡಾರ್ನಿಂದ ತಪ್ಪಿಸಿಕೊಳ್ಳಲು ಮುಂದಾಗಿತ್ತೇ ಎಂಬ ಅಂಶ ಈಗ ತನಿಖಾ ಸಂಸ್ಥೆಗಳಿಗೆ ಕಾಡತೊಡಗಿದೆ.
ಈ ಉದ್ದೇಶಕ್ಕಾಗಿಯೇ ಹಾರುವ ಸಂದರ್ಭದಲ್ಲಿ ಕನಿಷ್ಠ ಐದು ಸಾವಿರ ಅಡಿ ಅಥವಾ ಅದಕ್ಕಿಂತ ಕೆಳಗಿನ ಮಟ್ಟದಲ್ಲಿ ಹಾರಾಟ ನಡೆಸಿರಬಹುದು ಎನ್ನುವುದನ್ನು ಮಲೇಷ್ಯಾ ಅಧಿಕಾರಿಗಳು ಊಹಿಸಿದ್ದಾರೆ. ಈ ಸಾಧ್ಯತೆ ಬಗ್ಗೆ ಅವರು ಶೋಧ ನಡೆಸಲಾರಂಭಿಸಿದ್ದಾರೆ. ಇಂಥಾ ಸಾಧ್ಯತೆಯ ಮೂಲಕ ಮೂರು ರಾಷ್ಟ್ರಗಳ ರಾಡಾರ್ ವ್ಯಾಪ್ತಿಯಿಂದ ವಿಮಾನ ತಪ್ಪಿಸಿಕೊಂಡಿರುವ ಸಾಧ್ಯತೆ ಇದೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ. ವೈಮಾನಿಕ ಕ್ಷೇತ್ರದ ತಂತ್ರಜ್ಞಾನದಲ್ಲಿ ಅತ್ಯಂತ ಪರಿಣತಿ ಹೊಂದಿರುವ ವ್ಯಕ್ತಿಯೇ ಇಂಥ ಕೃತ್ಯ ಎಸಗಿರಬೇಕೆಂದು ಶಂಕಿಸಲಾಗಿದೆ.