ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಅಂಗನವಾಡಿ ವಿದ್ಯಾರ್ಥಿಗೆ ಮೋದಿ ಹೋಲಿಕೆ

Mainashree
Updated On : 19 Mar 2014, 11:31 am

ಫಾರುಕಾಬಾದ್: ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನು ಅಂಗನವಾಡಿ ವಿದ್ಯಾರ್ಥಿಗೆ ಹೋಲಿಸುವ ಮೂಲಕ ಕೇಂದ್ರ ವಿದೇಶಾಂಗ ಸಚಿವ ಸಲ್ಮಾನ್ ಖುರ್ಷಿದ್ ಮತ್ತೊಂದು ವಿವಾದ ಸೃಷ್ಟಿಸಿದ್ದಾರೆ. 2002ರ ಗಲಭೆಗೆ ಸಂಬಂಧಿಸಿ ನ್ಯಾಯಾಲಯ ಮೋದಿ ಅವರಿಗೆ ಕ್ಲೀನ್‌ಚಿಟ್ ನೀಡಿದೆ ಎನ್ನುವ ಬಿಜೆಪಿ ಸಮರ್ಥನೆಯನ್ನು ಖುರ್ಷಿದ್ ಪ್ರಶ್ನಿಸಿದ್ದಾರೆ. 'ಮೋದಿಗೆ ಸುಪ್ರೀಂಕೋರ್ಟ್ ಕ್ಲೀನ್‌ಚಿಟ್ ನೀಡಿದ್ದು ಗೊತ್ತಿಲ್ಲ. ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಸಮನ್ಸ್ ನೀಡಲು ನಿರಾಕರಿಸಿದ್ದು ನಿಜ. ಹಾಗಂದ ಮಾತ್ರಕ್ಕೆ ಕ್ಲೀನ್‌ಚಿಟ್ ಸಿಕ್ಕಿದೆ ಎಂದು ಹೇಳಿಕೊಳ್ಳುವುದು ಅಂಗನವಾಡಿ ವಿದ್ಯಾರ್ಥಿಯೊಬ್ಬ ಉತ್ತಮ ಅಂಕ ಸಿಕ್ಕಿದಾಕ್ಷಣ ತಾನು ವೈದ್ಯನಾದೆನೆಂದು ಬೀಗುವುದು ಹಾಗೂ ಪಿಎಚ್.ಡಿ ಪದವಿ ಪಡೆದಿದ್ದೇನೆ ಎಂದು ಹೇಳಿಕೊಂಡಂತೆ. ಈ ರೀತಿ ಆಗಲು ಸಾಧ್ಯವೇ' ಎಂದು ಖುರ್ಷಿದ್ ಟಾಂಗ್ ನೀಡಿದ್ದಾರೆ. ಖುರ್ಷಿದ್ ಹೇಳಿಕೆಗೆ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement