ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಹಾಸ್ಯ ಸಾಹಿತಿ ಹಾರಾ ನಿಧನ

Mainashree
Updated On : 19 Mar 2014, 11:08 am

ಬೆಂಗಳೂರು: ಖ್ಯಾತ ವಕೀಲ ಹಾಗೂ ಹಾಸ್ಯ ಸಾಹಿತಿ ಎಚ್.ಆರ್.ಶಂಕರನಾರಾಯಣ(87) ಅವರು ನಗರದಲ್ಲಿ ಬುಧವಾರ ನಿಧರಾಗಿದ್ದಾರೆ.
ಹಾರಾ ಕಾವ್ಯನಾಮದಲ್ಲಿ ಹಾಸ್ಯ ಲೇಖನಗಳನ್ನು ಬರೆಯುತ್ತಿದ್ದ ಶಂಕರನಾರಾಯಣ ಅವರು ವೃತ್ತಿಯಲ್ಲಿ ವಕೀಲರಾಗಿದ್ದರು. ಕೊರವಂಜಿ, ನಗುವನಂದ, ಅಪರಂಜಿ, ವಿಕಟ ವಿನೋದ ಹಾಗೂ ಇತರ ಪತ್ರಿಕೆಗಳಲ್ಲಿ ಹಾರಾ ಅವರ ಹಾಸ್ಯ ಲೇಖನಗಳು ಪ್ರಕಟವಾಗಿದ್ದವು. ಪ್ರಾಧ್ಯಾಪಕರಾಗಿ ವೃತ್ತಿ ಜೀವನ ಆರಂಭಿಸಿ, ವಕೀಲರಾಗಿ ಹೆಸರು ಮಾಡಿದ್ದರು. ಕಬ್ಬು ಕುಡಗೋಲು, ನಗ ನಾಣ್ಯ, ಸುಬ್ಬನ ಬುರುಡೆಗಳು, ಹಿಂದೇನ-ಮುಂದೇನ-ಎಂದೆಂದೂ-ಹೇಗೇನ, ವಕ್ರೇಶ ವಚನ, ನಗೆಯು ಬರುತಿದೆ.
ಮಂದಸ್ಮಿತ, ವಕೀಲಿ ದಿನಗಳು, ಯಾರಿಗೆ ತಲೆ ಸರಿಯಾಗಿದೆ ಹಾಸ್ಯ ಸಂಕಲನಗಳನ್ನು ಶಂಕರನಾರಾಯಣ ಅವರು ಬರೆದಿದ್ದಾರೆ. ಇವರ ಸಾಹಿತ್ಯ ಸೇವೆಯನ್ನು ಪರಿಗಣಿಸಿ ಅತ್ತಿಮಬ್ಬೆ ಪ್ರಶತ್ತಿ, ಗೊರೂರು ಪ್ರಶಸ್ತಿ, ಪಡುಕೋಣೆ ರಮಾನಂದ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement