ಖುಷ್ವಂತ್ ಸಿಂಗ್ ಕುರಿತಾದ ಟ್ವೀಟ್ಗಳು
ಖುಷ್ವಂತ್ ಸಿಂಗ್ ಭಾರತದ ಅತ್ಯುತ್ತಮ ಪತ್ರಕರ್ತ, ಅಂತಾರಾಷ್ಟ್ರೀಯ ತಾರೆ, ಲೇಖಕ. ಅವರು ಎಲ್ಲ ತಲೆಮಾರಿನ ಪತ್ರಕರ್ತರಿಗೂ ಸ್ಫೂರ್ತಿಯ ಸೆಲೆ. ನಿಮ್ಮ ಆತ್ಮಕ್ಕೆ ಚಿರಶಾಂತಿ ಸಿಗಲಿ ಸರ್.
- ರಾಜೀವ್ ಚಂದ್ರಶೇಖರ್
ಖುಷ್ವಂತ್ ಸಿಂಗ್ ಇನ್ನಿಲ್ಲ. ಅವರು ತಮ್ಮ ಸಾಹಿತ್ಯಿಕ ಕೊಡುಗೆಗಳಿಂದ ನಮ್ಮ ಬದುಕನ್ನು ಶ್ರೀಮಂತಗೊಳಿಸಿದ್ದರು.
- ಶಾರುಖ್ ಖಾನ್
ಖುಷ್ವಂತ್ ಸಿಂಗ್. ಒಂದು ಯುಗದ ಅಂತ್ಯ. 'ಪೆನ್ಗೆ ಯಾವುದೇ ಕಾಂಡೋಮ್ ಇಲ್ಲ' ಎಂಬುದನ್ನು ಹೇಳಲು ಮತ್ತು ಸಾಬೀತುಪಡಿಸಲು ಸಾಧ್ಯವಾಗಿದ್ದು ಖುಷ್ವಂತ್ಗೆ ಮಾತ್ರ.
- ಶೋಭಾ ಡೇ
ಖುಷ್ವಂತ್ ಸಿಂಗ್ರ ನಿಧನ ವಾರ್ತೆ ಕೇಳಿ ದುಃಖವಾಯಿತು- ಶ್ರೇಷ್ಠ ಇತಿಹಾಸಕಾರ, ಕಾದಂಬರಿಕಾರ, ಸಂಪಾದಕ, ಅಂಕಣಕಾರ ಹಾಗೂ ಸ್ವಭಾವತಃ ದಯಾಮಯಿ ಮತ್ತು ವಿಶಾಲ ಹೃದಯವುಳ್ಳ ವ್ಯಕ್ತಿ.
- ಅಮಿತಾವ್ ಘೋಷ್
ಸಿಖ್ಖರ ಶ್ರೇಷ್ಠ ಇತಿಹಾಸಕ್ಕಾಗಿ ಖುಷ್ವಂತ್ರನ್ನು ನೆನಪು ಮಾಡಿಕೊಳ್ಳಲೇಬೇಕು. ಅವರೊಬ್ಬ ಸ್ನೇಹಮಯ, ಉದಾತ್ತ ವ್ಯಕ್ತಿ. ಭಿಂದ್ರಾನ್ವಾಲೆ ವಿರುದ್ಧದ ಅವರ ನಿಲುವು ನಿಜಕ್ಕೂ ಅವರ ಧೈರ್ಯವನ್ನು ಪ್ರತಿಬಿಂಬಿಸುತ್ತದೆ.
- ರಾಮಚಂದ್ರ ಗುಹಾ
ಖುಷ್ವಂತ್ ಸಿಂಗ್ ಅಪೂರ್ವ ವಿಮರ್ಶಕ, ಅದ್ಭುತ ಲೇಖಕರಷ್ಟೇ ಅಲ್ಲ, ನನ್ನ ಆಪ್ತ ಮಿತ್ರನೂ ಹೌದು. ಅವರದು ನಿಜಕ್ಕೂ ಕ್ರಿಯಾಶೀಲ ಬದುಕು
- ಡಾ. ಮನಮೋಹನ್ಸಿಂಗ್
ಅವರಿಗೆ ತೀಕ್ಷ ಅಂತರ್ದೃಷ್ಟಿ, ವಿಶಿಷ್ಟ ಪರಿಜ್ಞಾನವಲ್ಲದೇ, ವಿನೋದ ಪ್ರವೃತ್ತಿಯೂ ಇತ್ತು. ಸಿಂಗ್ ಭಾರತದ ಖ್ಯಾತ ಆಂಗ್ಲ ಲೇಖಕರಲ್ಲೊಬ್ಬರು.
- ಪ್ರಣಬ್ ಮುಖರ್ಜಿ
ಅವರ ಅತೀವ ಜ್ಞಾನ, ಅವರ ಪ್ರತಿಭೆ, ಆಸಕ್ತಿ ಹಾಗೂ ಅಪ್ಯಾಯಮಾನ ಹಾಸ್ಯ ಎಲ್ಲವನ್ನೂ ನಾವು ಮಿಸ್ ಮಾಡಿಕೊಳ್ಳುತ್ತಿದ್ದೇವೆ.
- ಲಾರ್ಡ್ ಸ್ವರಾಜ್ ಪಾಲ್
ಖ್ಯಾತ ಲೇಖಕ, ಪತ್ರಕರ್ತ ಖುಷ್ವಂತ್ ಸಿಂಗ್ರ ನಿಧನಕ್ಕೆ ನಾನು ಸಂತಾಪ ಸೂಚಿಸುತ್ತೇನೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ.
- ಶಶಿ ತರೂರ್
ಅವರ ನಿಧನ ವಾರ್ತೆ ಕೇಳಿ ದುಃಖವಾಯಿತು. ಖುಷ್ವಂತ್ ಸಾವು ಚಿಂತನೆಗಳು ಹಾಗೂ ಪತ್ರಗಳ ಜಗತ್ತಿಗೆ ತುಂಬಲಾರದ ನಷ್ಟ.
- ಕಿರಣ್ ಬೇಡಿ
ಖುಷ್ವಂತ್ ಅವರೇ ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ. ಎಂತಹ ಅದ್ಭುತ ಬದುಕನ್ನು ನೀವು ಬಾಳಿದಿರಿ, ಎಂತಹ ಕಥೆಗಳನ್ನು ನೀವು ಹೇಳಿದಿರಿ.
- ವೀರ್ ದಾಸ್