ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಗಾಂಧಿಗಳ ಗಾದಿಗೆ ಉತ್ತರವೇ ಹಾದಿ

ಉತ್ತರಪ್ರದೇಶ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ, ರಾಜನಾಥ್‌ಸಿಂಗ್, ಮುಲಾಯಂ..

Vishwanath S
Updated On : 22 Mar 2014, 1:34 am

ನವದೆಹಲಿ: ಉತ್ತರಪ್ರದೇಶ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ, ರಾಜನಾಥ್‌ಸಿಂಗ್, ಮುಲಾಯಂ, ಮಾಯಾವತಿ ಅವರಂಥ ದಿಗ್ಗಜರ ಸ್ಪರ್ಧೆಗಷ್ಟೇ ಅಲ್ಲ, ನೆಹರೂ- ಗಾಂಧಿ ಕುಟುಂಬದ ಸ್ಪರ್ಧೆಗೂ ಸಾಕ್ಷಿಯಾಗುತ್ತಿದೆ. ಈ ಕುಟುಂಬದ ನಾಲ್ವರು ಘಟಾನುಘಟಿ ನಾಯಕರ ರಾಜಕೀಯ ಭವಿಷ್ಯವನ್ನು ಉತ್ತರಪ್ರದೇಶ ನಿರ್ಧರಿಸಲಿದೆ.
ಅಮ್ಮ, ಮಗ ಸ್ಪರ್ಧೆ: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ರಾಯ್‌ಬರೇಲಿಯಿಂದ, ಪುತ್ರ ಹಾಗೂ ಪಕ್ಷದ ಉಪಾಧ್ಯಕ್ಷ ರಾಹುಲ್‌ಗಾಂಧಿ ಅಮೇಠಿಯಿಂದ, ಬಿಜೆಪಿ ನಾಯಕಿ ಮನೇಕಾ ಗಾಂಧಿ ಪಿಲಿಭಿಟ್‌ನಿಂದ ಹಾಗೂ ಪುತ್ರ ವರುಣ್‌ಗಾಂಧಿ ಸುಲ್ತಾನ್‌ಪುರದಿಂದ ಸ್ಪರ್ಧಿಸುತ್ತಿದ್ದಾರೆ.
ಮನೇಕಾ ಮತ್ತು ವರುಣ್ ಬಿಜೆಪಿಯಿಂದ ಸ್ಪರ್ಧಿಸುತ್ತಿದ್ದರೂ ಇವರ್ಯಾರೂ ಸೋನಿಯಾ ಮತ್ತು ರಾಹುಲ್ ವಿರುದ್ಧ ಪ್ರಚಾರ ನಡೆಸುವುದಿಲ್ಲ. ಅವರ ಕ್ಷೇತ್ರದತ್ತ ತಲೆಹಾಕುವುದೂ ಇಲ್ಲ. ಇನ್ನು ಸೋನಿಯಾ ಹಾಗೂ ರಾಹುಲ್ ಕೂಡ ಮನೇಕಾ ಮತ್ತು ವರುಣ್ ವಿರುದ್ಧ ಮಾತೆತ್ತುವುದಿಲ್ಲ. ಅಜ್ಜಿ ಇಂದಿರಾಗಾಂಧಿ ಅವಧಿಯಿಂದ ಈ ಎರಡೂ ಕುಟುಂಬಗಳ ನಡುವೆ ಭಿನ್ನಾಭಿಪ್ರಾಯ ಮುಂದುವರಿದುಕೊಂಡು ಬಂದಿದ್ದರೂ ಮರಿ ಗಾಂಧಿಗಳು ಮಾತ್ರ ಉತ್ತಮ ಬಾಂಧವ್ಯ ಇಟ್ಟುಕೊಂಡಿದ್ದಾರೆ.
ಮನೇಕಾ ಸೀನಿಯರ್: ಈ ನಾಲ್ವರಲ್ಲಿ ದಿ. ಸಂಜಯ್‌ಗಾಂಧಿ ಪತ್ನಿ ಮನೇಕಾ ಗಾಂಧಿ ಅವರೇ ರಾಜಕೀಯದಲ್ಲಿ ಸೀನಿಯರ್. ಮನೇಕಾ 25 ವರ್ಷಗಳಿಂದ ರಾಜಕೀಯದಲ್ಲಿದ್ದಾರೆ. ಇನ್ನೊಂದು ಕಡೆ ಸೋನಿಯಾ ರಾಜಕೀಯ ಪ್ರವೇಶಿಸಿದ್ದೇ 1998ರಲ್ಲಿ. ರಾಹುಲ್ ಗಾಂಧಿ ಮೊದಲ ಚುನಾವಣೆ ಎದುರಿಸಿದ್ದು 2004ರಲ್ಲಾದರೆ, ವರುಣ್‌ಗಾಂಧಿ 2009ರಲ್ಲಿ ಲೋಕಸಭೆಗೆ ಸ್ಪರ್ಧಿಸಿ ಗೆದ್ದಿದ್ದಾರೆ.
ಅಕ್ಕಪಕ್ಕದ ಕ್ಷೇತ್ರ
ರಾಹುಲ್ ಗಾಂಧಿ ಸ್ಪರ್ಧಿಸುತ್ತಿರುವ ಅಮೇಠಿಗೆ ಹೊಂದಿಕೊಂಡತೆಯೇ ಇದೆ ಸುಲ್ತಾನ್‌ಪುರ. ಈ ಕ್ಷೇತ್ರದಿಂದ ವರುಣ್‌ಗಾಂಧಿ ಸ್ಪರ್ಧಿಸುತ್ತಿದ್ದಾರೆ. ಇದು ಎರಡೂ ಕ್ಷೇತ್ರಗಳ ಜನರಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ಜನ ಕೈಬಿಟ್ಟಿಲ್ಲ
ಉತ್ತರಪ್ರದೇಶದ ಜನತೆಗೆ ನೆಹರೂ- ಗಾಂಧಿ ಕುಟುಂಬದವರು ಹೊರಗಿನವರು. ಆದರೆ, ಇಲ್ಲಿನ ಜನತೆ ಮಾತ್ರ ನೆಹರೂ- ಗಾಂಧಿ ಕುಟುಂಬವನ್ನು ಕೈಬಿಟ್ಟಿಲ್ಲ. ಇಂದಿರಾಗಾಂಧಿ ಕಾಲದಿಂದಲೂ ಇಲ್ಲಿನ ಜನ ನೆಹರೂ- ಗಾಂಧಿ ಕುಟುಂಬದ ಸದಸ್ಯರನ್ನು ಆರಿಸಿ ಕಳುಹಿಸಿಕೊಡುತ್ತಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement