ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಜಸ್ವಂತ್ ಬೈ? ಆಡ್ವಾಣಿಗೆ ಸೇನೆ ಸೈ

ಟಿಕೆಟ್ ನಿರಾಕರಣೆಗೆ ಒಳಗಾದ ಜಸ್ವಂತ್ ಬೆಂಬಲಕ್ಕೆಸುಷ್ಮಾ ಸ್ವರಾಜ್ ನಿಂತಿದ್ದಾರೆ.

Mainashree
Updated On : 23 Mar 2014, 10:11 am

ನವದೆಹಲಿ: ಬಿಜೆಪಿಯೊಳಗಿನ ಟಿಕೆಟ್ ಕಲಹ ಇನ್ನೂ ಬಗೆಹರಿದಿಲ್ಲ. ಟಿಕೆಟ್ ನಿರಾಕರಣೆಗೆ ಒಳಗಾದ ಜಸ್ವಂತ್ ಸಿಂಗ್ ಬೆಂಬಲಕ್ಕೆ ಲೋಕಸಭೆ ವಿಪಕ್ಷ ನಾಯಕಿ ಸುಷ್ಮಾ ಸ್ವರಾಜ್ ನಿಂತಿದ್ದಾರೆ. ಬಾರ್ಮೆರ್ ಟಿಕೆಟ್ ಹಂಚಿಕೆ ಸಂಬಂಧ ಕೇಂದ್ರೀಯ ಚುನಾವಣಾ ಸಮಿತಿಯಲ್ಲಿ ಚರ್ಚೆ ಆಗಿಲ್ಲ ಎಂದು ಸುಷ್ಮಾ ಸ್ವರಾಜ್ ಹೇಳಿದ್ದಾರೆ.
ಇದರ ನಡುವೆಯೇ ಬಾರ್ಮರ್ ಕ್ಷೇತ್ರದಿಂದ ಟಿಕೆಟ್ ಬೇಕೇ ಬೇಕು ಎಂದು ಹಿರಿಯ ನಾಯಕ ಜಸ್ವಂತ್ ಸಿಂಗ್ ಹಠ ಹಿಡಿದಿದ್ದಾಗ್ಯೂ, ಬೇರೊಬ್ಬರಿಗೆ ಟಿಕೆಟ್ ಕೊಟ್ಟಿರುವುದು ಸಂಘರ್ಷಕ್ಕೆ ಕಾರಣವಾಗಿದೆ. ಭಾನುವಾರ ಬಾರ್ಮರ್‌ಗೆ ತೆರಳಲಿದ್ದೇನೆ, ಬೆಂಬಲಿಗರೊಂದಿಗೆ ಚರ್ಚೆ ನಡೆಸುತ್ತೇನೆ. ಬಳಿಕ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂಬುದು ಜಸ್ವಂತ್ ಸಿಂಗ್ ಅವರ ಖಡಕ್ ಮಾತು. ಮೂಲಗಳ ಪ್ರಕಾರ, ಇದೇ ಕ್ಷೇತ್ರದಿಂದ ಜಸ್ವಂತ್ ಸಿಂಗ್ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ. ಜೊತೆಗೆ ಭಾನುವಾರವೇ ಅವರು ಬಿಜೆಪಿ ಬಿಡಲಿದ್ದಾರೆ ಎಂದು ಹೇಳಲಾಗುತ್ತಿದೆ.

ಇದು ನಕಲಿ ಬಿಜೆಪಿ
'ಬಿಜೆಪಿಯ ಸ್ಥಾಪಕ ಸದಸ್ಯ'ರಲ್ಲೊಬ್ಬರಾಗಿರುವ ಜಸ್ವಂತ್ ಸಿಂಗ್, ಪಕ್ಷದ ನಾಯಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈಗಿರುವುದು ನಕಲಿ ಬಿಜೆಪಿ, ಅಸಲಿಯಲ್ಲವೇ ಅಲ್ಲ ಎಂದಿದ್ದಾರೆ.  ಜಸ್ವಂತ್‌ಗೆ ಸೂಕ್ತ ಸ್ಥಾನ ನೀಡುತ್ತೇವೆ. ಅವರ ಅನುಭವವೇ ಶ್ರೀರಕ್ಷೆ ಎಂದು ರಾಜನಾಥ್, ಅರುಣ್ ಜೇಟ್ಲಿ ಸಮಾಧಾನ  ಪಡಿಸಿದ್ದಾರೆ.
'ಹಗರಣದಲ್ಲಿ ಪಾಲುದಾರನಾಗಿರುವ ವ್ಯಕ್ತಿಯೊಬ್ಬನ ವಿರುದ್ಧ ಸ್ಪರ್ಧಿಸುತ್ತೇನೆ ಎಂದು ಕನಸಲ್ಲೂ ಎಣಿಸಿರಲಿಲ್ಲ. ಎಂಥ ದುರ್ಗತಿ ಬಂತಪ್ಪ...'
- ಮುರಳಿ ಮನೋಹರ ಜೋಶಿ
ಬಿಜೆಪಿ ನಾಯಕ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement