ರಂಗನತಿಟ್ಟಿನಲ್ಲಿ ಸೆರೆಸಿಕ್ಕ ಹಂಸ
ರಾಜ್ಯದಲ್ಲಿ ಚುನಾವಣಾ ಕಾವು, ಇನ್ನೊಂದೆಡೆ ಬಿಸಿಲಿನ ಬೇಗೆ. ವಿವಿಧ ರಾಜಕೀಯ ಪಕ್ಷಗಳ ನಾಯಕರು ಇವೆರಡರ ತಾಪವನ್ನೂ ಸಹಿಸಿಕೊಂಡು ಅಬ್ಬರದ ಪ್ರಚಾರದಲ್ಲಿ ತೊಡಗಿದ್ದಾರೆ. ಇತ್ತ ರಾಜ್ಯಪಾಲ ಹಂಸರಾಜ ಭಾರದ್ವಾಜ್ ಎಲ್ಲಾ ರಾಜಕೀಯ ವಿಚಾರಗಳನ್ನೂ ಬದಿಗಿಟ್ಟು ವಿಹಾರಕ್ಕಾಗಿ ರಂಗನತಿಟ್ಟಿಗೆ ಶನಿವಾರ ಬಂದಿದ್ದರು. ಪರಿಸರದ ದೃಶ್ಯಕಾವ್ಯದ ನಡುವೆ ಹಕ್ಕಿಗಳ ಕಲರವವನ್ನು ಕೇಳಿಕೊಂಡು ಆನಂದ ಅನುಭವಿಸುತ್ತಿರುವ ಅಪರೂಪದ ದೃಶ್ಯ ಕನ್ನಡ ಪ್ರಭ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ ಅವರ ಕ್ಯಾಮೆರಾ ಕಣ್ಣಿಗೆ ಸಿಕ್ಕಿದ್ದು ಹೀಗೆ...