ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಆಲಿಕಲ್ಲು ಮಳೆ: ಬೆಳೆ ಹಾನಿ ಪರಿಶೀಲಿಸಿದ ಕೇಂದ್ರ ತಂಡ

Mainashree
Updated On : 23 Mar 2014, 10:29 am

ಬಾಗಲಕೋಟೆ/ಯಾದಗಿರಿ/ಬಿಜಾಪುರ
ಆಲಿಕಲ್ಲು ಮಳೆಯಿಂದಾಗಿ ಸಂಭವಿಸಿದ ಬೆಳೆ ಹಾನಿ ಅಧ್ಯಯನಕ್ಕೆ ಆಗಮಿಸಿರುವ ಕೇಂದ್ರ ಅಧ್ಯಯನ ತಂಡಗಳು ಭಾನುವಾರ ಬಾಗಲಕೋಟೆ, ಬಿಜಾಪುರ, ಯಾದಗಿರಿ ಜಿಲ್ಲೆಗಳಿಗೆ ಭೇಟಿ ನೀಡಿ ಪರಿಶೀಲಿಸಿದವು.
ಬಾಗಲಕೋಟೆ ಜಿಲ್ಲೆಯಲ್ಲಿ ಅಕಾಲಿಕ ಆಲಿಕಲ್ಲು ಮಳೆಯಿಂದಾಗಿ ಅಪಾರ ಪ್ರಮಾಣದ ಬೆಳೆಹಾನಿಯಿಂದ ಕಂಗೆಟ್ಟ ರೈತನ ಹೊಲಗಳಿಗೆ ಮಾನುಷ್ ಚೌಧರಿ ನೇತೃತ್ವದ ಕೇಂದ್ರ ತಡ ಭೇಟಿ ನೀಡಿತು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಹಾನಿಯಾದ ತಕ್ಷಣ ಜಿಲ್ಲಾಡಳಿತ ಕೂಡಲೇ ರೈತರ ನೆರವಿಗೆ ಬಂದಿದೆ. ಜಿಲ್ಲಾಧಿಕಾರಿಗಳು, ತೋಟಗಾರಿಕೆ ವಿಶ್ವವಿದ್ಯಾಲಯದ ಪ್ರಯತ್ನ ಸಮಾಧಾನಕರವಾಗಿದೆ. ಕೇಂದ್ರ ನಿಸರ್ಗ ಪ್ರಕೋಪ ನಿಧಿಯ ಮಾರ್ಗದರ್ಶಿ ಆಧರಿಸಿ, ನೆರವು ನೀಡುವ ಬಗ್ಗೆ ಕೇಂದ್ರ ತಂಡ ವರದಿ ಸಲ್ಲಿಸಲಿದೆ' ಎಂದು ಅವರು ತಿಳಿಸಿದರು.
ಇಂಡಿಗೆ ಭೇಟಿ: ಆಲಿಕಲ್ಲು ಮಳೆಯಿಂದ ತೀವ್ರ ಹಾನಿಗೀಡಾಗಿರುವ ಬಿಜಾಪುರ ಜಿಲ್ಲೆಯ ಇಂಡಿ ತಾಲೂಕಿಗೆ ಎನ್‌ಸಿಡಿಸಿ ವ್ಯವಸ್ಥಾಪಕ ನಿರ್ದೇಶಕಿ ವಸುಧಾ ಮಿಶ್ರಾ ನೇತೃತ್ವದ ಅಧಿಕಾರಿಗಳ ತಂಡ, ತಾಲೂಕಿನ ಅಂಜುಟಗಿ, ಬರಡೋಲ, ಹತ್ತಳ್ಳಿ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲಿಸಿತು. ಕೇವಲ ಬೆಳೆ ಹಾನಿ ಮಾತ್ರವಲ್ಲದೆ, ಮನೆಗಳಿಗೆ ಹಾನಿಯಾಗಿರುವುದನ್ನು ಕೂಡಾ ಅಧಿಕಾರಿಗಳು ಗಣನೆಗೆ ತೆಗೆದುಕೊಂಡಿದ್ದಾರೆ. ಅಧಿಕಾರಿಗಳ ಜತೆ ಎಸಿ ಕೃಷ್ಣೇಗೌಡ ತಾಯಣ್ಣವರ್ ಸೇರಿದಂತೆ ಇತರೆ ಅಧಿಕಾರಿಗಳ ಇದ್ದರು. ಇದೇ ವೇಳೆ, ಯಾದಗಿರಿ, ಶಹಾಪುರ ತಾಲೂಕಗಳಿಗೆ ಕೇಂದ್ರ ಗ್ರಾಮೀಣಾಭಿವೃದ್ಧಿ ಇಲಾಖೆ ಸಹಾಯಕ ಆಯುಕ್ತ ಪ್ರಸನ್ನ ವಿ ಸಾಲಿಯಾನ್ ನೇತೃತ್ವದ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲಿಸಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement