ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ರಕ್ಷಣಾ ಸಿಬ್ಬಂದಿಗೆ ಮತಇಂದು ಸುಪ್ರೀಂ ವಿಚಾರಣೆ

Mainashree
Updated On : 23 Mar 2014, 11:47 am

ನವದೆಹಲಿ: ಸೇವೆ ಸಲ್ಲಿಸುವ ಸ್ಥಳದಲ್ಲೇ ಸೈನಿಕರಿಗೆ ಚುನಾವಣಾ ಹಕ್ಕು ಇಲ್ಲದಿರುವುದನ್ನು ಪ್ರಶ್ನಿಸಿ ಸಂಸದ ರಾಜೀವ್ ಚಂದ್ರಶೇಖರ್  ಸಲ್ಲಿಸಿರುವ ಅರ್ಜಿಯ ವಿಚಾರಣೆ ಸೋಮವಾರ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಗೆ ಬರಲಿದೆ. ಈ ಬಗ್ಗೆ ಅವರು ಒಂದು ಲಕ್ಷ ಸಹಿಯುಳ್ಳ ಮನವಿಯನ್ನು ಶೀಘ್ರವೇ ಕೇಂದ್ರ ಚುನಾವಣಾ ಆಯೋಗಕ್ಕೆ ಸಲ್ಲಿಸಲಿದ್ದಾರೆ. ಈ ನಿಟ್ಟಿನಲ್ಲಿ ಎಲ್ಲರೂ ಸಹಕರಿಸಬೇಕೆಂದು ಅವರು ಮನವಿ ಮಾಡಿದ್ದಾರೆ.
ರಕ್ಷಣಾ ಸಿಬ್ಬಂದಿಗೆ ನಿಯೋಜನೆ ಸ್ಥಳದಲ್ಲೇ ಮತದಾನದ ಹಕ್ಕು ಎಂಬ ಪ್ರಸ್ತಾಪಕ್ಕೆ ಕೇಂದ್ರ ಪ್ರಬಲ ವಿರೋಧ ವ್ಯಕ್ತಪಡಿಸಿದೆ. ಕೆಲ ಭದ್ರತಾ ಕಾರಣಗಳಿಂದಾಗಿ ಅದು ಸಾಧ್ಯವಿಲ್ಲ ಎಂದು ಪ್ರತಿಪಾದಿಸುತ್ತಿದೆ. ತನ್ನ ನಿರ್ಧಾರವನ್ನು ಕೋರ್ಟ್‌ನಲ್ಲಿ ಬಹಿರಂಗಪಡಿಸಲಿದೆ. ಇಂಥಾ ಕ್ರಮದಿಂದಾಗಿ ಯಾವ ಸ್ಥಳದಲ್ಲಿ ಎಷ್ಟು ಸಿಬ್ಬಂದಿ ಇದ್ದಾರೆ ಎಂಬ ವಿಚಾರ ಬಹಿರಂಗವಾಗುತ್ತದೆ ಎನ್ನುವುದು ಅದರ ಆತಂಕ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement