ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ರಮ್ಯಾ 'ಕೈ'ಗೆ ರೋಲ್ ಮಾಡೆಲ್

ಕಾಂಗ್ರೆಸ್ ಜಾಹೀರಾತಿನಲ್ಲಿ ಇನ್ನು ಮುಂದೆ ಮಂಡ್ಯ ಕ್ಷೇತ್ರದ ಸಂಸದೆ ರಮ್ಯಾ ಅವರೇ ರೋಲ್ ಮಾಡೆಲ್...! ಹೌದು...

Mainashree
Updated On : 24 Mar 2014, 1:35 am

 ಕನ್ನಡಪ್ರಭ ಪ್ರತಿನಿಧಿಯಿಂದ
ನವದೆಹಲಿ:
ಕಾಂಗ್ರೆಸ್ ಜಾಹೀರಾತಿನಲ್ಲಿ ಇನ್ನು ಮುಂದೆ ಮಂಡ್ಯ ಕ್ಷೇತ್ರದ ಸಂಸದೆ ರಮ್ಯಾ ಅವರೇ ರೋಲ್ ಮಾಡೆಲ್...!
ಹೌದು, ಇಂಥದ್ದೊಂದು ಮಹತ್ವದ ಜವಾಬ್ದಾರಿ ರಮ್ಯಾ ಹೆಗಲೇರಿದೆ. ಇದಕ್ಕಾಗಿಯೇ ದಿಢೀರನೇ ನವದೆಹಲಿಗೆ ಆಗಮಿಸಿದ್ದಾರೆ. ಎಐಸಿಸಿ ತಯಾರಿಸುತ್ತಿರುವ ಜಾಹೀರಾತು ಚಿತ್ರೀಕರಣದಲ್ಲಿ ಅವರು ಪಾಲ್ಗೊಂಡಿದ್ದಾರೆ.  ಇದು ಯುವಕರಿಗಾಗಿಯೇ ತಯಾರಿಸಲಾಗುತ್ತಿರುವ ಜಾಹೀರಾತು. ಯುಪಿಎ ಸರ್ಕಾರದ ಸಾಧನೆಗಳನ್ನು ಜನರಿಗೆ ಮುಟ್ಟಿಸುವ ಕೆಲಸವನ್ನು ಕಾಂಗ್ರೆಸ್ ಈ ಜಾಹೀರಾತಿನ ಮೂಲಕ ಮಾಡಲಿದೆ.
ಈ ಜಾಹೀರಾತಿನಲ್ಲಿ ರಮ್ಯಾ ಅವರದ್ದೇ ಪ್ರಧಾನ ಪಾತ್ರ. ಇದು ಪ್ರಸಾರವಾದ ನಂತರ ಯುವ ಕಾಂಗ್ರೆಸ್‌ನ ಪ್ರಮುಖ ನೇತಾರರಲ್ಲಿ ರಮ್ಯಾ ಅವರೂ ಒಬ್ಬರಾಗಲಿದ್ದಾರೆ. ರಮ್ಯಾ ಜೊತೆಗೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ಸಚಿನ್ ಪೈಲಟ್, ಮುರಳಿ ದೇವೊರಾ ಸೇರಿದಂತೆ 10 ಮಂದಿ ಯುವಕರು ಪಾಲ್ಗೊಂಡಿದ್ದಾರೆ ಎಂದು ಮೂಲಗಳು ಹೇಳಿವೆ.  ಮುಖ್ಯವಾಗಿ ಸಾರಿಗೆ ಸಂಪರ್ಕ, ದೂರ ಸಂಪರ್ಕ(ಮೊಬೈಲ್, ಇಂಟರ್‌ನೆಟ್, ಎಟಿಎಂ, ಮೆಟ್ರೋ, ಏರ್‌ಪೋರ್ಟ್, ಹೈಟೆಕ್ ಆಸ್ಪತ್ರೆ, ಶಾಲೆ) ಸೇರದಂತೆ ಅತ್ಯಾಧುನಿಕ ಮೂಲಭೂತ ಸೌಲಭ್ಯಗಳನ್ನು ಯುಪಿಎ ಸರ್ಕಾರ ದೇಶಕ್ಕೆ ನೀಡಿದ್ದನ್ನು ಯುವಕರ ಮನಸೆಳೆಯುವಂತೆ ಚಿತ್ರೀಕರಿಸಲಾಗಿದೆ.


26ಕ್ಕೆ ನಾಮಪತ್ರ
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ರಮ್ಯಾ, ತಾವು ಮಾರ್ಚ್ 26ರಂದು ನಾಮಪತ್ರ ಸಲ್ಲಿಸುವುದಾಗಿ ತಿಳಿಸಿದ್ದಾರೆ. ಯುಪಿಎ ಸರ್ಕಾರದ ಸಾಧನೆಗಳನ್ನು ಮುಂದಿಟ್ಟುಕೊಂಡು ನಾವು ಮತ ಕೇಳುತ್ತೇವೆ. ರಾಹುಲ್‌ಗಾಂಧಿ ನೇತೃತ್ವವನ್ನು ಯುವಜನತೆ ಅಷ್ಟೇ ಅಲ್ಲ ಹಿರಿಯರೂ ಬೆಂಬಲಿಸುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಪ್ರಚಾರಕ್ಕೆ ಅಂಬರೀಷ್ ಅವರನ್ನು ಆಹ್ವಾನಿಸುವ ಕುರಿತ ಪ್ರಶ್ನೆಗೆ ಉತ್ತರಿಸಿದ ರಮ್ಯಾ, ನಮಗೆ ಅಂಬರೀಷ್ ಅವರ ಆರೋಗ್ಯದ ಬಗ್ಗೆ ಕಾಳಜಿ ಇದೆ. ಅವರು ಚೇತರಿಸಿಕೊಳ್ಳಬೇಕು. ಅವರ ಆಶೀರ್ವಾದ ಯಾವಾಗಲೂ ನನ್ನ ಮೇಲೆ ಇದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement