ರಾಜನಾಥ್ ಗದ್ಲ
ನವದೆಹಲಿ: ಮೊದಲೇ ಗೊಂದಲದ ಗೂಡಾಗಿರುವ ಬಿಜೆಪಿಯ ಸಂಕಷ್ಟವನ್ನು ಪಕ್ಷದ ಅಧ್ಯಕ್ಷ ರಾಜನಾಥ್ ಸಿಂಗ್ ಮತ್ತಷ್ಟು ಹೆಚ್ಚಿಸಿದ್ದಾರೆ. 'ಅಬ್ ಕಿ ಬಾರ್ ಬಿಜೆಪಿ ಸರ್ಕಾರ್' ಎಂದು ಮಧ್ಯಾಹ್ನ ಟ್ವೀಟ್ ಮಾಡಿದ್ದ ರಾಜನಾಥ್ ಸಿಂಗ್ ಇದಾದ 15 ನಿಮಿಷದಲ್ಲೇ ಅದನ್ನು ಹಿಂಪಡೆದಿದ್ದಾರೆ. 'ಅಬ್ ಕಿ ಬಾರ್ ಮೋದಿ ಸರ್ಕಾರ್' ಎಂದು ಮರು ಟ್ವೀಟ್ ಮಾಡಿದ್ದಾರೆ. ರಾಜನಾಥ್ ವರ್ತನೆ ಸಾಮಾಜಿಕ ಜಾಲ ತಾಣಗಳಲ್ಲಿ ತೀವ್ರ ಚರ್ಚೆಗೆ ಗುರಿಯಾಗಿದೆ.