ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಆಧಾರ್‌ಗೆ ಕೋಟಿ ಕೋಟಿ ಖರ್ಚು ತನಿಖೆಗೆ ಅನಂತಕುಮಾರ್ ಆಗ್ರಹ

ನಿರಾಧಾರವಾದ ಗುರುತಿನ ಚೀಟಿ ಆಧಾರ್ ನೋಂದಣಿ ಪತ್ರ ನೀಡಲು...

Mainashree
Updated On : 26 Mar 2014, 1:12 am

ಬೆಂಗಳೂರು: ನಿರಾಧಾರವಾದ ಗುರುತಿನ ಚೀಟಿ ಆಧಾರ್ ನೋಂದಣಿ ಪತ್ರ ನೀಡಲು ಕೇಂದ್ರ ಸಾರ್ವಜನಿಕರ ಸಾವಿರಾರು ಕೋಟಿ ಹಣವನ್ನು ಖರ್ಚು ಮಾಡಿದ್ದು, ಈ ಬಗ್ಗೆ ತನಿಖೆ ಆಗಬೇಕು ಎಂದು ಸಂಸದ ಅನಂತ್‌ಕುಮಾರ್ ಆಗ್ರಹಿಸಿದರು.
'ಅನಂತ ತಾನನಂತವಾಗಿ' ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದರೆ ಆಧಾರ್ ನೋಂದಣಿ ರದ್ದುಪಡಿಸಲಾಗುತ್ತದೆ ಎಂದು ಹೇಳಿದರು.
ಆಧಾರ್ ಅಕ್ರಮ ನೋಂದಣಿ ಎಂದು ನಾವು ಈ ಹಿಂದಿನಿಂದಲೂ ಹೇಳುತ್ತಾ ಬಂದಿದ್ದೆವು. ಅದಕ್ಕೆ ಸರ್ವೋಚ್ಛ ನ್ಯಾಯಾಲಯ ನೀಡಿರುವ ಈ ಆದೇಶ ಈಗ ಪುಷ್ಟಿ ನೀಡಿದಂತಿದೆ. ಹಾಗಾಗಿ ಇನ್ನಾದರೂ ಈ ಆಧಾರ್ ನೋಂದಣಿ ಕೈಬಿಡಬೇಕು ಎಂದು ಹೇಳಿದರು.
ಅಮೇರಿಕ ಹಾಗೂ ಇಂಗ್ಲೆಂಡ್‌ನಲ್ಲಿ ಇಂತಹ ಪದ್ಧತಿ ಕೈಬಿಡಲಾಗಿದ್ದು, ಆಸ್ಟ್ರೇಲಿಯಾದಲ್ಲಿ ರದ್ದುಪಡಿಸಲಾಗಿದೆ. ಹಾಗಾಗಿ ದೇಶದಲ್ಲಿಯೂ ಈ ಪದ್ಧತಿ ಕಡ್ಡಾಯವಾಗಿ ರದ್ದುಪಡಿಸಬೇಕಿದೆ.
ಆಧಾರ್ ನಿರಾಧಾರವಾಗಿರುವುದರಿಂದ ಈ ಬಯೋವುಟ್ರಿಕ್ ಪದ್ಧತಿ ಕಡ್ಡಾಯವಲ್ಲ. ವಿವರನ್ನು ಹಂಚಿಕೊಳ್ಳುವ ವೈಯಕ್ತಿಕ ವಿವರಕ್ಕೆ ಇದು ಧಕ್ಕೆ ತರುತ್ತಿದೆ. ದೇಶದ ಭವಿಷ್ಯ ಹಾಗೂ ಹಿತದೃಷ್ಟಿಯಿಂದ ಒಳಿತಲ್ಲ ಹಾಗಾಗಿ ಈ ನೋಂದಣಿಯನ್ನು ಕೈಬಿಡಬೇಕು ಎಂದು ಒತ್ತಾಯಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement