ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಬೋನಿಗೆ ಬಿದ್ದ ಐಎಂ ಬಾಸ್ ತಹ್ಸೀನ್ ಅಖ್ತರ್

ಲೋಕಸಭೆ ಚುನಾವಣೆ ವೇಳೆ ರಕ್ತದೋಕುಳಿ ಹರಿಸಬೇಕು, ರಾಜಕೀಯ ಪ್ರಮುಖರು ಸೇರಿ ಸಾವಿರಾರು ಮಂದಿಯ ಪ್ರಾಣ ತೆಗೆಯಬೇಕು ಎಂಬ...

Mainashree
Updated On : 25 Mar 2014, 11:22 am

-ಮೋದಿ ರ್ಯಾಲಿ ಮೇಲಿನ ದಾಳಿ, ಉಗ್ರ ಕೃತ್ಯಗಳ ಸಂಚುಗಾರ
-ಚುನಾವಣೆ ವೇಳೆ ರಕ್ತದೋಕುಳಿ ಹರಿಸುವ ಯತ್ನ ವಿಫಲ
-ಐಎಂನ ಎಲ್ಲ ಪ್ರಮುಖ ಉಗ್ರರೂ ಈಗ ಕಂಬಿಯ ಹಿಂದೆ
-ಭಟ್ಕಳ್ ಬಂಧನ ಬಳಿಕ ಐಎಂ ನೇತೃತ್ವ ವಹಿಸಿದ್ದ ಮೋನು

ನವದೆಹಲಿ:
ಲೋಕಸಭೆ ಚುನಾವಣೆ ವೇಳೆ ರಕ್ತದೋಕುಳಿ ಹರಿಸಬೇಕು, ರಾಜಕೀಯ ಪ್ರಮುಖರು ಸೇರಿ ಸಾವಿರಾರು ಮಂದಿಯ ಪ್ರಾಣ ತೆಗೆಯಬೇಕು ಎಂಬ ಉಗ್ರರ ಯೋಜನೆ ವಿಫಲವಾಗಿದೆ. ಪ್ರಮುಖ ಬೆಳವಣಿಗೆಯೊಂದರಲ್ಲಿ ಇಂಡಿಯನ್ ಮುಜಾಹಿದೀನ್(ಐಎಂ) ಉಗ್ರ ಸಂಘಟನೆಯ ಮುಖ್ಯಸ್ಥ ತಹ್ಸೀನ್ ಅಖ್ತರ್ ಅಲಿಯಾಸ್ ಮೋನುನನ್ನು ಸೆರೆಹಿಡಿಯುವಲ್ಲಿ ದೆಹಲಿ ಪೊಲೀಸರ ವಿಶೇಷ ಘಟಕ ಯಶಸ್ವಿಯಾಗಿದೆ. ಪಟನಾದಲ್ಲಿ ನರೇಂದ್ರ ಮೋದಿ ರ್ಯಾಲಿ ಮೇಲಿನ ದಾಳಿ ಸೇರಿದಂತೆ ದೇಶದಲ್ಲಿ ನಡೆದ ಅನೇಕ ಉಗ್ರ ಕೃತ್ಯಗಳಲ್ಲಿ ಭಾಗಿಯಾಗಿದ್ದ ಅಖ್ತರ್‌ನನ್ನು ಮಂಗಳವಾರ ಪಶ್ಚಿಮ ಬಂಗಾಳದಲ್ಲಿ ಬಂಧಿಸಲಾಗಿದೆ. ಈ ಮೂಲಕ ಐಎಂನ ಎಲ್ಲ ಪ್ರಮುಖ ಉಗ್ರರನ್ನು ಬಂಧಿಸಿದಂತಾಗಿದೆ.
ಎಲ್ಲರೂ ಬಲೆಗೆ: ಭಾರತದಲ್ಲಿ ನಡೆದ ಬಹುತೇಕ ಎಲ್ಲ ಉಗ್ರ ಕೃತ್ಯಗಳ ಹಿಂದಿನ ರೂವಾರಿಗಳು ಈಗ ಸೆರೆಸಿಕ್ಕಿದ್ದಾರೆ. ಅವರೆಂದರೆ, ಐಎಂ ಸಹಸ್ಥಾಪಕ ಯಾಸೀನ್ ಭಟ್ಕಳ್, ತಹ್ಸೀನ್ ಅಖ್ತರ್, ಅಸಾದುಲ್ಲಾ ಅಖ್ತರ್ ಅಲಿಯಾಸ್ ಹಡ್ಡಿ ಹಾಗೂ ಜಿಯಾ ಉರ್ ರೆಹಮಾನ್ ಅಲಿಯಾಸ್ ವಖಾಸ್.
ಮಾಸ್ಟರ್‌ಮೈಂಡ್: ಬಿಹಾರದ ಸಮಸ್ತಿಪುರದ ಕೆಮಿಸ್ಟ್‌ವೊಬ್ಬರ ಪುತ್ರನಾದ ತಹ್ಸೀನ್ ಅಖ್ತರ್ ಹಲವು ಸ್ಫೋಟಗಳ ಮಾಸ್ಟರ್‌ಮೈಂಡ್ ಆಗಿದ್ದ. ವಾರಾಣಸಿ ಸ್ಫೋಟ, ದೆಹಲಿ ಜಾಮಾ ಮಸೀದಿ ಬಳಿ ಕುಕ್ಕರ್ ಬಾಂಬ್ ಸ್ಫೋಟ, ಮುಂಬೈ ಸರಣಿ ಸ್ಫೋಟ, ಪುಣೆ ಸ್ಫೋಟ, ಹೈದರಾಬಾದ್ ಅವಳಿ ಬಾಂಬ್ ಸ್ಫೋಟ, ಜತೆಗೆ ಪಟನಾ ಬಾಂಬ್ ಸ್ಫೋಟ ಪ್ರಕರಣದಲ್ಲೂ ಭಾಗಿಯಾಗಿದ್ದ.

2011
ಜು.2ರಂದು ಮುಂಬೈನಲ್ಲಿ ಸರಣಿ ಸ್ಫೋಟ

2012
ಆ.1ರಂದು ಪುಣೆಯಲ್ಲಿ ಸರಣಿ ಸ್ಫೋಟ
2013
ಫೆ.21ರಂದು ಹೈದರಾಬಾದ್ ಸ್ಫೋಟ


ಈಗ ಕಂಬಿ ಹಿಂದೆ
ಯಾಸೀನ್ ಬಂಧನದ ನಂತರ ಅಖ್ತರ್ ಐಎಂನ ಬಾಸ್ ಆಗಿ ಕಾರ್ಯನಿರ್ವಹಿಸುತ್ತಿದ್ದ. ಭಾರತೀಯ ಭದ್ರತಾ ಸಂಸ್ಥೆಯು ಯಾಸೀನ್ ಹಾಗೂ ಹಡ್ಡಿಯನ್ನು ಬಂಧಿಸಿದ ಸುದ್ದಿ ಹೊರಬಿತ್ತೋ, ತಕ್ಷಣ ಮಂಗಳೂರು ಅಡಗುತಾಣದಿಂದ ಜಾಗ ಖಾಲಿ ಮಾಡುವಂತೆ ವಖಾಸ್ ಮತ್ತು ತಹ್ಸೀನ್‌ಗೆ ರಿಯಾಜ್ ಭಟ್ಕಳ್ ಆದೇಶಿಸಿದ್ದ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement