ಹಿರಿಯ ನಟಿ ನಂದಾ ಇನ್ನಿಲ್ಲ
ಬಾಲಿವುಡ್‌ನ ಹಿರಿಯ ನಟಿ ನಂದಾ (75) ಮಂಗಳವಾರ ಬೆಳಗ್ಗೆ ಮುಂಬೈನಲ್ಲಿ ನಿಧನರಾದರು. 60 ಹಾಗೂ 70ರ ದಶಕದಲ್ಲಿ ಬಾಲಿವುಡ್...
ಮುಂಬೈ: ಬಾಲಿವುಡ್‌ನ ಹಿರಿಯ ನಟಿ ನಂದಾ (75) ಮಂಗಳವಾರ ಬೆಳಗ್ಗೆ ಮುಂಬೈನಲ್ಲಿ ನಿಧನರಾದರು. 60 ಹಾಗೂ 70ರ ದಶಕದಲ್ಲಿ ಬಾಲಿವುಡ್ ಸಿನಿಮಾ ರಂಗವನ್ನು ಆಳಿದ್ದ ನಟಿ ನಂದಾ ಅಂಧೇರಿಯಲ್ಲಿನ ತಮ್ಮ ನಿವಾಸದಲ್ಲಿ ತೀವ್ರ ಹೃದಯಾಘಾತದಿಂದ ಕೊನೆಯುಸಿರೆಳೆದರು.
ನಂದಾ ಅವರು 'ಹಮ್ ದೋನೋ', 'ಗುಮ್ನಾಮ್', 'ಜಬ್ ಜಬ್ ಫೂಲ್ ಖಿಲೇ' ಸೇರಿದಂತೆ 50ಕ್ಕೂ ಹೆಚ್ಚು ಚಿತ್ರಗಳಲ್ಲಿ ಮನೋಜ್ಞವಾಗಿ ಅಭಿನಯಿಸಿ ಮನೆಮಾತಾಗಿದ್ದರು.
ಅಶೋಕ್ ಕುಮಾರ್, ಕಿಶೋರ್ ಕುಮಾರ್, ದೇವಾನಂದ್, ರಾಜೇಶ್ ಖನ್ನಾ, ಶಶಿ ಕಪೂರ್‌ರಂತಹ ಬಾಲಿವುಡ್‌ನ ಪ್ರಮುಖ ನಟರ ಜತೆಯೂ ನಂದಾ ಅಭಿನಯಿಸಿದ್ದರು. ಒಟ್ಟಾರೆಯಾಗಿ 1960ರಿಂದ 1973ರವರೆಗೆ ಬಾಲಿವುಡ್ ಅನ್ನು ಆಳಿದ ಕೀರ್ತಿಯೂ ಅವರಿಗೆ ಸಲ್ಲುತ್ತದೆ. ಆಂಚಲ್ ಚಿತ್ರಕ್ಕಾಗಿ
ಉತ್ತಮ ಪೋಷಕನಟಿ ಪ್ರಶಸ್ತಿ ಸಿಕ್ಕಿತ್ತು.