ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

15 ಪದವಿಗಳ ಒಡೆಯ ಲೋಕಸಭಾ ಕಣಕ್ಕೆ

ಒಂದಲ್ಲ, ಎರಡಲ್ಲ... ಬರೋಬ್ಬರಿ 15 ಪದವಿ! ತಮ್ಮ 31ನೇ ವಯಸ್ಸಿನಲ್ಲಿಯೇ ಈ ಸಾಧನೆ!

Mainashree
Updated On : 27 Mar 2014, 10:54 am

ಕೊಪ್ಪಳ: ಒಂದಲ್ಲ, ಎರಡಲ್ಲ... ಬರೋಬ್ಬರಿ 15 ಪದವಿ! ತಮ್ಮ 31ನೇ ವಯಸ್ಸಿನಲ್ಲಿಯೇ ಈ ಸಾಧನೆ!  ಕೊಪ್ಪಳ ಪಕ್ಷೇತರ ಅಭ್ಯರ್ಥಿ ನಾಗರಾಜ ಎಚ್. ನರಕಲದಿನ್ನಿ ಈ ಸಾಧಕ.  ಮೂಲತಃ ರಾಯಚೂರು ಜಿಲ್ಲೆಯ ನರಕಲದಿನ್ನಿ ಗ್ರಾಮದವರು. ತಮ್ಮ ಜಿಲ್ಲೆಯಲ್ಲಿ ಶಿಕ್ಷಣ ಸಂಸ್ಥೆ ಜತೆಗೆ ಮುಕ್ತ ವಿವಿ ಅಧ್ಯಯನ ಕೇಂದ್ರಗಳನ್ನೂ ಪ್ರಾರಂಭಿಸಿದ್ದಾರೆ. ಈಗ ಶಿಕ್ಷಣ ಕ್ಷೇತ್ರದಲ್ಲಿ ಬದಲಾವಣೆ ತರುವ ಮತ್ತು ಜಾತ್ಯತೀತ ಸಮಾಜ ನಿರ್ಮಾಣದ ಕನಸು ಹೊತ್ತು ಚುನಾವಣೆ ಅಖಾಡಕ್ಕೆ ಧುಮುಕಿದ್ದಾರೆ. ಬಿಎ, ಬಿ.ಇಡಿ, ಕನ್ನಡ, ಇಂಗ್ಲೀಷ್, ಹಿಂದಿ, ಇತಿಹಾಸ, ಶಿಕ್ಷಣ, ಸೈಕಾಲಜಿಗಳಲ್ಲಿ ಸ್ನಾತಕೋತ್ತರ ಪದವಿ, ಎಂಎಸ್ ಡಬ್ಲ್ಯೂ, ಎಂಬಿಎ, ಬಿಎಲ್ಐಎಸ್ಸಿ, ಎಲ್.ಎಲ್.ಬಿ ಅವರ ಡಿಗ್ರಿಗಳಲ್ಲಿ ಪ್ರಮುಖ. 'ಚಿಕ್ಕ ವಯಸ್ಸಿನಲ್ಲಿ ಇಷ್ಟೊಂದು ಪದವಿ ಗಳಿಸುವುದು ಸಾಧ್ಯವಾ' ಎಂದು ಕೇಳಿದರೆ, 'ಶ್ರಮಪಟ್ಟು ಅಧ್ಯಯನ ಮಾಡಿದ್ದೇನೆ. ಹೀಗಾಗಿಯೇ ಇಷ್ಟೆಲ್ಲ ಪದವಿ ಸಾಧ್ಯವಾಯಿತು' ಎನ್ನುತ್ತಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement