ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಕಣದಲ್ಲಿ 559 ಹುರಿಯಾಳು, ಕೊನೇ ದಿನ 225 ನಾಮಪತ್ರ

ಮಾಜಿ ಮುಖ್ಯಮಂತ್ರಿಗಳಾದ ಎಚ್.ಡಿ. ಕುಮಾರ್ಸ್ವಾಮಿ, ಡಿ.ವಿ. ಸದಾನಂದಗೌಡ,..

Mainashree
Updated On : 27 Mar 2014, 2:07 am

ಬೆಂಗಳೂರು: ಮಾಜಿ ಮುಖ್ಯಮಂತ್ರಿಗಳಾದ ಎಚ್.ಡಿ. ಕುಮಾರ್ಸ್ವಾಮಿ, ಡಿ.ವಿ. ಸದಾನಂದಗೌಡ, ಕಾಂಗ್ರೆಸ್ ಮತ್ತು ಬಿಜೆಪಿಯ ಹಿರಿಯ ನಾಯಕರಾದ ಜನಾರ್ದನ ಪೂಜಾರಿ, ರಮೇಶ್ ಜಿಗಜಿಣಿಗಿ ಸೇರಿದಂತೆ 225 ಹುರಿಯಾಳುಗಳು ಬುಧವಾರ ಲೋಕಸಭಾ ಚುನಾವಣಾ ಕಣಕ್ಕಿಳಿದಿದ್ದಾರೆ.
ನಾಮಪತ್ರ ಸಲ್ಲಿಕೆಗೆ ಕೊನೆ ದಿನವಾದ ಬುಧವಾರ ಮಧ್ಯಾಹ್ನ 3ಗಂಟೆವರೆಗೆ ರಾಜ್ಯದ 28 ಕ್ಷೇತ್ರಗಳಿಂದ 225 ಅಭ್ಯರ್ಥಿಗಳಿಂದ 380 ನಾಮಪತ್ರಗಳು ಸಲ್ಲಿಸಿಕೆಯಾಗಿವೆ. ಇದರೊಂದಿಗೆ ಚುನಾವಣಾ ಸಮರಕ್ಕೆ ಧುಮುಕುವವರ ಸಂಖ್ಯೆ ಅಂತಿಮ ಘಟ್ಟಕ್ಕೆ ಬಂದಂತಾಗಿದೆ.
ಆದರೆ ಮಾರ್ಚ್ 29ರಂದು ನಾಮಪತ್ರ ಹಿಂತೆಗೆದುಕೊಳ್ಳಲು ಕೊನೆ ದಿನವಾಗಿದ್ದು, ಅಂದು ಕಣದಲ್ಲಿ ಉಳಿಯುವ ಅಭ್ಯರ್ಥಿಗಳ ಸ್ಪಷ್ಟ ಚಿತ್ರಣ ಸಿಗಲಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಅನಿಲ್ಕುಮಾರ್ ಝಾ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಕೊನೆ ದಿನ ಸಲ್ಲಿಕೆಯಾದ ನಾಮಪತ್ರಗಳೂ ಸೇರಿದಂತೆ ರಾಜ್ಯದಲ್ಲಿ ಈತನಕ 559 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು, 845 ನಾಮಪತ್ರಗಳನ್ನು ಸ್ವೀಕರಿಸಲಾಗಿದೆ ಎಂದೂ ಅವರು ಹೇಳಿದರು.

ಪ್ರಮುಖರು
-    ಕುಮಾರಸ್ವಾಮಿ(ಜೆಡಿಎಸ್)
-    ಡಿ.ವಿ. ಸದಾನಂದಗೌಡ(ಬಿಜೆಪಿ)
-    ಜನಾರ್ದನ ಪೂಜಾರಿ(ಕಾಂಗ್ರೆಸ್)
-    ರಮೇಶ್ ಜಿಗಜಿಣಗಿ(ಬಿಜೆಪಿ)
-    ಪ್ರಕಾಶ್ ಹುಕ್ಕೇರಿ (ಕಾಂಗ್ರೆಸ್)
-    ಸುರೇಶ್ ಅಂಗಡಿ (ಬಿಜೆಪಿ)
-    ಬಿ.ಟಿ. ಲಲಿತಾ ನಾಯಕ್ (ಎಎಪಿ)
-    ಭಗವಾನ್ ನಾಯಕ್ (ಕಾಂಗ್ರೆಸ್)
-    ಪ್ರಶಾಂತ್ ದೇಶಪಾಂಡೆ (ಕಾಂಗ್ರೆಸ್)
-    ಸಲೀಂ ಅಹಮ್ಮದ್ (ಕಾಂಗ್ರೆಸ್)
-    ಬಿ.ಎನ್.ಬಚ್ಚೇಗೌಡ (ಬಿಜೆಪಿ)
    ಜಿ.ವಿ.ಶ್ರೀರಾಮರೆಡ್ಡಿ (ಸಿಪಿಐಎಂ)
    ಸಿ.ನಾರಾಯಣಸ್ವಾಮಿ (ಕಾಂಗ್ರೆಸ್)
    ನಳಿನ್ಕುಮಾರ್ ಕಟೀಲು (ಬಿಜೆಪಿ)
    ಬಿ. ಶ್ರೀರಾಮುಲು(ಬಿಜೆಪಿ)
    ಹನುಮಂತಪ್ಪ(ಕಾಂಗ್ರೆಸ್)

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement