ಥಳಿಸಿ ದೇಹದ ಮೇಲೆ ನರ್ತನ!
ಜಿಲ್ಲೆಯಲ್ಲಿ ನೈತಿಕ ಪೊಲೀಸ್ಗಿರಿ ಮತ್ತೆ ಮರುಕಳಿಸಿದೆ. ಅಲ್ಪಸಂಖ್ಯಾತ ಕೋಮಿನ...
ಮಂಗಳೂರು: ಜಿಲ್ಲೆಯಲ್ಲಿ ನೈತಿಕ ಪೊಲೀಸ್ಗಿರಿ ಮತ್ತೆ ಮರುಕಳಿಸಿದೆ. ಅಲ್ಪಸಂಖ್ಯಾತ ಕೋಮಿನ ಯುವತಿ ಜತೆ ಮಾತನಾಡಿದ್ದಕ್ಕಾಗಿ ಇಬ್ಬರು ಹಿಂದೂ ಯುವಕರ ಮೇಲೆ ಅಮಾನುಷ ಹಲ್ಲೆ ನಡೆಸಲಾಗಿದೆ.
ಹಲ್ಲೆಯ ಬಳಿಕ ಆ ಯುವಕರ ದೇಹದ ಮೇಲೆ ದುಷ್ಕರ್ಮಿಗಳು ನರ್ತಿಸಿದ್ದು, ಇಬ್ಬರನ್ನೂ ಮರಕ್ಕೆ ಕಟ್ಟಿ ಹೊಡೆದರೆನ್ನಲಾಗಿದೆ. ಯುವಕರ ರಕ್ಷಣೆಗೆ ಬಂದವ ರನ್ನೂ ಥಳಿಸಿ ಜೀಪನ್ನು ನದಿಗೆ ದೂಡಿದ್ದಾರೆ. ನಾಲ್ವರು ಗಾಯಗೊಂಡಿದ್ದು, ಐವರನ್ನು ಬಂಧಿಸಲಾಗಿದೆ.
ಬಂಟ್ವಾಳ ತಾಲೂಕು ವಿಟ್ಲ ಸಮೀಪದ ಕಂಬಳಬೆಟ್ಟು ದರ್ಗಾ ಬಳಿಯ ಜಾಕಿಮೂಲೆ ಉರುಸ್ನಲ್ಲಿ ಮುಸ್ಲಿಂ ಯುವತಿಯರ ಜತೆ ಹಿಂದೂ ಯುವಕರು ಮಾತನಾಡಿದ್ದೇ ಇಷ್ಟೆಲ್ಲ ಘಟನೆಗೆ ಕಾರಣ.
ಪ್ರಕರಣದ ವಿವರ: ಮಂಗಳವಾರ ಸಂಜೆ ಬೈಕ್ನಲ್ಲಿ ಬಂದ ಯುವಕರಿಬ್ಬರು ಪರಿಚಿತ ಮುಸ್ಲಿಂ ಯುವತಿ ಜತೆ ಮಾತನಾಡುತ್ತಿದ್ದರು. ಇದನ್ನು ನೋಡಿದ ಸಂಘಟನೆಯೊಂದರ ಸದಸ್ಯರು ಹಲ್ಲೆ ನಡೆಸಿದ್ದರು. ಯುವಕರನ್ನು ರಕ್ಷಿಸಲೆಂದು ರಾತ್ರಿ ಜೀಪ್ನಲ್ಲಿ ಬರುತ್ತಿದ್ದಲಿಂಗಪ್ಪ ಗೌಡ, ಶಶಿ, ಲೋಕೇಶ್ಗೆ ಗಾಯಗಳಾಗಿವೆ. ಸಲಾಕೆ ಬಳಸಿ ಕರುಣಾಕರ ನಾಯ್ತೊಟ್ಟು ಎಂಬುವರ ತಲೆಗೆ ಹಲ್ಲೆ ನಡೆಸಿ, ಕೈಯನ್ನು ಕಡಿದಿರುವುದಾಗಿ ಆರೋಪಿಸಲಾಗಿದೆ. ಲಿಂಗಪ್ಪ ಗೌಡ, ಶಶಿ, ಲೋಹಿತ್ ಮೇಲೆ ಮನ ಬಂದಂತೆ ಥಳಿಸಿದ್ದು ಅವರು ತೀವ್ರವಾಗಿ ಗಾಯಗೊಂಡಿದ್ದಾರೆ. ವಿಟ್ಲ ಕಡೆಯಿಂದ ಮನೆಗೆ ಬೈಕ್ನಲ್ಲಿ ಅದೇ ರಸ್ತೆ ಮೂಲಕ ಬರುತ್ತಿದ್ದ ರವಿ (ಲೋಕೇಶ್ ಸಹೋದರ) ಅವರನ್ನು ರಸ್ತೆಗೆ ದೂಡಿದ ತಂಡ ಹಲ್ಲೆಗೆ ಮುಂದಾಗಿದ್ದು, ಆತನ ಬೈಕ್ಗೆ ಬೆಂಕಿ ಹಚ್ಚಿದ್ದಾರೆ. ಜತೆಗೆ, ಜೀಪನ್ನು ಹೊಳೆಯ ಬದಿಗೆ ದೂಡಿ, ಜೀಪಿನಲ್ಲಿ ವಾಪಸು ಮರಳದಂತೆ ಎಚ್ಚರಿಕೆ ನೀಡಿ ತೆರಳಿದ್ದಾರೆ ಎಂದು ಹೇಳಲಾಗಿದೆ.
ಮುಂಜಾಗ್ರತಾ ಕ್ರಮವಾಗಿ 2 ಪೊಲೀಸ್ ತುಕಡಿಯನ್ನು ನಿಯೋಜಿಸಲಾಗಿದೆ. ನೆಕ್ಕರೆ ಕಂಬಳಬೆಟ್ಟು ನಿವಾಸಿ ಇಸುಬು (32), ವಿಟ್ಲ ಮುಡ್ನೂರು ಗ್ರಾಮದ ಹಳದಿನಗರ ನಿವಾಸಿ ಅಬ್ದುಲ್ ರಜಾಕ್ (27), ಅಬ್ದುಲ್ ಬಷೀರ್ (26), ಕಂಬಳಬೆಟ್ಟು ಶಾಂತಿನಗರ ನಿವಾಸಿ ಅಬ್ದುಲ್ ಮಜೀದ್ (30), ಕಂಬಳಬೆಟ್ಟು ಶಾಂತಿನಗರ ನಿವಾಸಿ ಅಬ್ದುಲ್ ಸತ್ತಾರ್ (38) ಅವರನ್ನು ನ್ಯಾಯಾಲಯದಲ್ಲಿ ಹಾಜರುಪಡಿಸಲಾಗಿದೆ. ಮನ್ಸೂರ್, ರಫೀಕ್, ಅಬೂಬಕ್ಕರ್, ಮುನ್ನಾ ಮತ್ತು ಇತರರ ವಿರುದ್ಧ ಪ್ರಕರಣ ದಾಖಲಾಗಿದೆ.