ಮಲೇಷ್ಯಾ ವಿಮಾನ: 122 ಅವಶೇಷಗಳು ಪತ್ತೆ
ಕೌಲಾಲಂಪುರ: ನಾಪತ್ತೆಯಾಗಿರುವ ಮಲೇಷ್ಯಾ ವಿಮಾನದ ಅವಶೇಷ ಶೋಧಕಾರ್ಯ ಮಹತ್ತರ ಘಟ್ಟ ತಲುಪಿದೆ. ಫ್ರಾನ್ಸ್‌ನ ಉಪಗ್ರಹವೊಂದು ಹಿಂದೂಮಹಾಸಾಗರದಲ್ಲಿ 122 ವಸ್ತುಗಳ ಚಿತ್ರಗಳನ್ನು ಸೆರೆಹಿಡಿದಿದ್ದು, ಇವುಗಳು ಮಲೇಷ್ಯಾ ವಿಮಾನದ ಅವಶೇಷಗಳಾಗಿರಬಹುದು ಎಂದು ಶಂಕಿಸಲಾಗಿದೆ.
1ರಿಂದ 23 ಮೀಟರ್ ಉದ್ದವುಳ್ಳ ಹಲವಾರು ವಸ್ತುಗಳು ಉಪಗ್ರಹ ಚಿತ್ರದಲ್ಲಿ ಸೆರೆಯಾಗಿದೆ. ಇದು ಎಂಎಚ್370 ವಿಮಾನದ್ದೇ ಎಂದು ಖಾತ್ರಿಯಾದ ತಕ್ಷಣ ಆ ಪ್ರದೇಶಕ್ಕೆ ತೆರಳಿ ಶೋಧ ಕಾರ್ಯ ನಡೆಸಲಾಗುತ್ತದೆ ಎಂದು ಮಲೇಷ್ಯಾ ಸಾರಿಗೆ ಸಚಿವ ಹಿಶಾಮುದ್ದೀನ್ ಹುಸೇನ್ ತಿಳಿಸಿದ್ದಾರೆ.