ಲೋಕ ಕದನಕ್ಕೆ ಅಖಾಡ ಸಿದ್ಧ
ರಾಜ್ಯದ ಲೋಕಸಭೆ ಚುನಾವಣೆಗಾಗಿ ನಾಮಪತ್ರ ಸಲ್ಲಿಕೆಯ ಅವಕಾಶ ಬುಧವಾರಕ್ಕೆ ಮುಗಿದಿದೆ. ಪ್ರಮುಖ 3 ಪಕ್ಷಗಳ ಅಭ್ಯರ್ಥಿಗಳ ವಿವರವನ್ನು ಕ್ಷೇತ್ರ ಸಮೇತ ನೀಡಲಾಗಿದೆ. ಒಂದು ರೀತಿಯಲ್ಲಿ ಅಧಿಕೃತ ಮಹಾಯುದ್ಧ ಗುರುವಾರದಿಂದ ಆರಂಭವಾಗಲಿದೆ.
ನ್ಯಾ. ಚಂದ್ರಶೇಖರಯ್ಯ ಕಣಕ್ಕೆ
ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಹಾಗೂ ನಿವೃತ್ತ ಉಪಲೋಕಾಯುಕ್ತ ಚಂದ್ರಶೇಖರಯ್ಯ ಬುಧವಾರ ನಾಮಪತ್ರ ಸಲ್ಲಿಸಿದ್ದಾರೆ. ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಅವರು, 'ರಾಜಕೀಯ ಪ್ರವೇಶಿಸಿ ಸಮಾಜಸೇವೆ ಮಾಡುವ ಆಸೆ ಇತ್ತು. ಎರಡು ತಿಂಗಳ ಹಿಂದೆ ಜೆಡಿಎಸ್‌ನಲ್ಲಿ ಮೈಸೂರಿನಿಂದಲೇ ನನ್ನ ಹೆಸರು ಚಾಲ್ತಿಯಲ್ಲಿತ್ತು. ಜಾಫರ್ ಷರೀಫ್ ಹೆಸರು ಪ್ರಸ್ತಾಪವಾದ ಬಳಿಕ ಬೆಂಗಳೂರು ಸೆಂಟ್ರಲ್‌ನಿಂದ ಸ್ಪರ್ಧಿಸುವಂತೆ ವರಿಷ್ಠರು ಸೂಚಿಸಿದ್ದರು' ಎಂದು ಹೇಳಿದರು.
225 ಬುಧವಾರ ನಾಮಪತ್ರ ಸಲ್ಲಿಸಿದವರು
380 ನಾಮಪತ್ರಗಳ ಸಲ್ಲಿಕೆ
559 ಒಟ್ಟಾರೆ ಸಲ್ಲಿಕೆಯಾದ ನಾಮಪತ್ರ
15,85,224 ಹೊಸದಾಗಿ ಸಲ್ಲಿಸಿದ ಮತದಾರರು
4,46,43,877 ರಾಜ್ಯದಲ್ಲಿ ಇದ್ದ ಮತದಾರರ ಸಂಖ್ಯೆ
4.62 ಕೋಟಿ ರಾಜ್ಯದ ಮತದಾರರ ಸಂಖ್ಯೆ
ಬೆಂ. ದಕ್ಷಿಣದಲ್ಲಿ ವಿವಿಪ್ಯಾಟ್
ಮತದಾರರು ತಾವು ಚಲಾಯಿಸಿದ ಮತ ಯಾರಿಗೆ ಲಭ್ಯವಾಗಿದೆ ಎಂದು ತಿಳಿಯುವ ನೂತನ ವ್ಯವಸ್ಥೆ ವಿವಿ ಪ್ಟಾಟ್ ಯಂತ್ರವನ್ನು ಈ ಬಾರಿ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಪ್ರಯೋಗಿಸಲಾಗುತ್ತಿದೆ ಎಂದು ಅವರು ಹೇಳಿದರು. ವೋಟರ್ ವೆರಿಫೈಯಬಲ್ ಪೇಪರ್ ಆಡಿಟ್ ಟ್ರೈಯಲ್ (ವಿವಿ ಪ್ಯಾಟ್) ಎಂಬ ಹೆಸರಿನ ಈ ಯಂತ್ರವನ್ನು ಮತಯಂತ್ರಕ್ಕೆ ಅಳವಡಿಸಲಾಗುತ್ತದೆ. ಮತದಾರ ಮತಗಟ್ಟೆಯಲ್ಲಿ ಮತ ಚಲಾಯಿಸಿದ ತಕ್ಷಣ ವಿವಿ ಪ್ಯಾಟ್ ಯಂತ್ರದಲ್ಲಿ ಒಂದು ಚೀಟಿ ಮೇಲೆ ಬಂದು ಕಾಣಿಸುತ್ತದೆ ಎಂದರು. ಈ ಯಂತದಲ್ಲಿ 6 ಸೆಕೆಂಡ್‌ವರೆಗೆ ಮತದಾರನಿಗೆ ಮಾತ್ರ ಕಾಣುವ ಚೀಟಿಯಲ್ಲಿ ಅಭ್ಯರ್ಥಿ ಹೆಸರು, ಕ್ರಮಸಂಖ್ಯೆ ಮತ್ತು ಗುರುತು ಮುದ್ರಣವಾಗಿರುತ್ತದೆ. ಆಗ ಮತದಾರ ತಾನು ಯಾರಿಗೆ ಮತದಾನ ಮಾಡಿದ್ದೇನೆ ಎಂದು ಖಾತರಿಯಾಗುತ್ತದೆ ಎಂದರು.
ಶಿವರಾಂ ಕಣಕ್ಕೆ
ಜೆಡಿಎಸ್ ಕಣಕ್ಕೆ ಇಳಿಸಿದ ಇನ್ನೊಬ್ಬ ಅಚ್ಚರಿಯ ಅಭ್ಯರ್ಥಿ ಎಂದರೆ ನಿವೃತ್ತ ಐಎಎಸ್ ಅಧಿಕಾರಿ ಕೆ.ಶಿವರಾಂ. ಅವರು ಬಿಜಾಪುರದಲ್ಲಿ ಪಕ್ಷದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. 'ಬಿಜಾಪುರ ನನಗೆ ತವರುಮನೆ. ಇಲ್ಲಿ ಉಪವಿಭಾಗಾಧಿಕಾರಿಯಾಗಿ, ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿಯಾಗಿ ಹಲವು ಜನಪರ ಕೆಲಸ ಮಾಡಿದ್ದೇನೆ. ಕ್ಷೇತ್ರ ನನಗೆ ಹೊಸದಲ್ಲ' ಎಂದು ಹೇಳಿದರು.
15 ಲಕ್ಷ ಹೊಸ ಮತದಾರರು
ಮತದಾರರ ನೋಂದಣಿಗೆ ಕೊನೆಯ ದಿನವಾದ ಮಾ.16ರ ಹಿಂದಿನ ಒಂದು ವಾರದಲ್ಲಿ ರಾಜ್ಯಾದ್ಯಂತ 15 ಲಕ್ಷ ಹೊಸ ಮತದಾರರು ನೋಂದಣಿಯಾಗಿದ್ದಾರೆ ಎಂದು ಅನಿಲ್‌ಕಮಾರ್ ಝಾ ಹೇಳಿದ್ದಾರೆ. ಈ ತನಕ ರಾಜ್ಯದಲ್ಲಿ 4,46,43,877 ಮತದಾರರು ಮಾತ್ರ ಇದ್ದರು. ಆದರೆ ಆಯೋಗ ಇತ್ತೀಚಿಗೆ ನೋಂದಣಿ ಅಭಿಯಾನ ನಡೆಸಿ ಮಾರ್ಚ್ 16ರವರೆಗೆ ಅರ್ಜಿಗಳನ್ನು ಸ್ವೀಕರಿಸಿತ್ತು. ಇದರ ಪರಿಣಾಮ ಈತನಕ 15,85,224ಮಂದಿ ಹೊಸದಾಗಿ ಅರ್ಜಿ ಸಲ್ಲಿಸಿ ನೋಂದಣಿಯಾಗಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಮತದಾರರ ಸಂಖ್ಯೆ ಈಗ 4.62ಕೋಟಿಗಳಾಗಿವೆ.
ಮತದಾರ ಆಮಿಷಕ್ಕೆ ದೋಸೆ ತವಾ!
ಅಭ್ಯರ್ಥಿಗಳ ಮತದಾರರಿಗೆ ದೋಸೆ ತವಾ ಮತ್ತು ಬಾಣಲೆಗಳನ್ನೂ ಆಮಿಷವಾಗಿ ನೀಡುತ್ತಾರೆ ಎನ್ನುವುದನ್ನು ಚುನಾವಣಾ ಆಯೋಗ ಪತ್ತೆ ಮಾಡಿದೆ. ಬೆಳಗಾವಿಯಲ್ಲಿ ಕೆಲವರು ಮತದಾರರಿಗೆ ನೀಡುವುದಕ್ಕಾಗಿ ದೋಸೆ ಹಾಕುವ ತವಾ ಮತ್ತು ತಿಂಡಿತಿನಿಸು ಮಾಡುವ ಬಾಣಲೆಗಳನ್ನೂ ಕೊಂಡೋಯ್ಯುವಾಗ ಆಯೋಗದ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾರೆ. ಹೀಗಾಗಿ ಆಯೋಗದ ಅಧಿಕಾರಿಗಳು ನಡೆಸಿದ ಕಾರ್ಯಚರಣೆಯಲ್ಲಿ ಒಟ್ಟು 100 ಪ್ಲಾಸ್ಕ್‌ಗಳು, 100 ತವಾ, 100 ಬಾಣಲೆ ಮತ್ತು ಶಾಲಾ ಬ್ಯಾಗ್‌ಗಳು, ಛತ್ರಿಗಳನ್ನೂ ವಶಪಡಿಸಿಕೊಳ್ಳಲಾಗಿದೆ.
ಇದೇ ವೇಳೆ ಚಿಕ್ಕಬಳ್ಳಾಪುರದಲ್ಲಿ 13.2ಲಕ್ಷ ಮೌಲ್ಯದ ಸೀರೆಗಳೂ ಸಿಕ್ಕಿವೆ. ಬೆಳಗಾವಿಯಲ್ಲಿ 20ಸಾವಿರ (21ಲಕ್ಷ ಮೌಲ್ಯ) ಮದ್ಯ ಹಾಗೂ ಚಿಂಚೋಳಿ ಮತ್ತು ರಾಯಚೂರಿನಲ್ಲಿ 220 ಲೀಟರ್ ಮದ್ಯ ಸಾಗಣೆ ಪತ್ತೆ ಮಾಡಲಾಗಿದೆ ಎಂದು ಅನಿಲ್‌ಕುಮಾರ್ ಝಾ ವಿವರಿಸಿದರು. ಬೆಳಗಾವಿಯಲ್ಲಿ 27ಲಕ್ಷ, ಮೂಡಬಿದಿರೆಯಲ್ಲಿ 4ಲಕ್ಷ, ಧಾರವಾಡದಲ್ಲಿ 3.2ಲಕ್ಷ ನಗದು ವಶಪಡಿಸಿಕೊಳ್ಳಲಾಗಿದೆ ಎಂದೂ ಅವರು ಹೇಳಿದ್ದಾರೆ.
ಬಿಜಾಪುರ
ಕೆ.ಎಸ್. ಶಿವರಾಂ
ಜಿಗಜಿಣಗಿ
ಪ್ರಕಾಶ್ ರಾಥೋಡ್
ಚಿಕ್ಕೋಡಿ
ರಮೇಶ್ ಕತ್ತಿ
ಶ್ರೀಮಂತ
ಪ್ರಕಾಶ್ ಹುಕ್ಕೇರಿ
ಬೀದರ್
ಭಗವಂತ ಖೂಬಾ
ಬಂಡೆಪ್ಪ ಕಾಶೆಂಪುರ
ಧರ್ಮಸಿಂಗ್
ಗುಲ್ಬರ್ಗ
ಬೆಳಮಗಿ
ಗೂಳಪ್ಪ ಗುಂಡಪ್ಪ
ಖರ್ಗೆ
ಬಾಗಲಕೋಟೆ
ಗದ್ದಿಗೌಡರ
ರವಿ
ಅಜಯಕುಮಾರ್
ಧಾರವಾಡ
ಪ್ರಹ್ಲಾದ ಜೋಶಿ
ಹನುಮಂತಪ್ಪ
ವಿ. ಕುಲಕರ್ಣಿ
ಬೆಳಗಾವಿ
ಸುರೇಶ್ ಅಂಗಡಿ
ನಸೀರ್
ಲಕ್ಷ್ಮಿ
ರಾಯಚೂರು
ಶಿವನಗೌಡ
ದೇವೇಂದ್ರಪ್ಪ
ಬಿ.ವಿ.ನಾಯಕ
ಚಿತ್ರದುರ್ಗ
ಜನಾರ್ದನಸ್ವಾಮಿ
ಗೂಳಿಹಟ್ಟಿ
ಚಂದ್ರಪ್ಪ
ಬಳ್ಳಾರಿ
ಬಿ.ಶ್ರೀರಾಮುಲು
ರವೀಂದ್ರಕುಮಾರ್
ಹನುಮಂತಪ್ಪ
ಕೊಪ್ಪಳ
ಸಂಗಣ್ಣ ಕರಡಿ
ಯಾರೂ ಇಲ್ಲ
ಬಸವರಾಜ
ಹಾವೇರಿ
ಶಿ. ಉದಾಸಿ
ರವಿ
ಸಲೀಂ ಅಹ್ಮದ್
ಉತ್ತರ ಕನ್ನಡ
ಅ. ಹೆಗ್ಡೆ
ಶಿವನಾಂದ ನಾಯ್ಕ
ಪ್ರಶಾಂತ್
ಶಿವಮೊಗ್ಗ
ಯಡಿಯೂರಪ್ಪ
ಗೀತಾ
ಭಂಡಾರಿ
ದಾವಣಗೆರೆ
ಜಿ.ಎಂ. ಸಿದ್ದೇಶ್
ಮಹಿಮ ಪಟೇಲ್
ಮಲ್ಲಿಕಾರ್ಜುನ
ಮಂಗಳೂರು
ಕಟೀಲ್
ಹೊಂದಾಣಿಕೆ
ಪೂಜಾರಿ