ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಅತ್ಯಾಚಾರಕ್ಕೆ ಯತ್ನಿಸಿ ಬೆತ್ತಲಾದ ಪಿಎಸ್ಐ ನದಾಫ್

ಖಡೇಬಜಾರ್ ಪೊಲೀಸ್ ಠಾಣೆಯ ಪಿಎಸ್ಐ ಎ.ಕೆ. ನದಾಫ್ ನಗರದ ವಸತಿಗೃಹವೊಂದರಲ್ಲಿ ಗುರುವಾರ ಯುವತಿಯ ಮೇಲೆ ...

Rashmi Kasaragodu
Updated On : 28 Mar 2014, 12:39 pm

ಬೆಳಗಾವಿ: ಖಡೇಬಜಾರ್ ಪೊಲೀಸ್ ಠಾಣೆಯ ಪಿಎಸ್ಐ ಎ.ಕೆ. ನದಾಫ್ ನಗರದ ವಸತಿಗೃಹವೊಂದರಲ್ಲಿ ಗುರುವಾರ ಯುವತಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸುತ್ತಿದ್ದ ಸಂದರ್ಭದಲ್ಲೇ ಸಾರ್ವಜನಿಕರ ಕೈಗೆ ಸಿಕ್ಕಿ ಬಿದ್ದಿದ್ದಾರೆ.
ಸಾರ್ವಜನಿಕರ ಕೈಗೆ ನಗ್ನವಾಗಿಯೇ ಸಿಕ್ಕುಬಿದ್ದಿದ್ದು, ಹಿರಿಯ ಪೊಲೀಸ್ ಅಧಿಕಾರಿಗಳು ಅವರನ್ನು ಸೇವೆಯಿಂದ ಅಮಾನತುಗೊಳಿಸಿದ್ದಾರೆ. ನೊಂದ ಯುವತಿ ಪಿಎಸ್ಐ ಕೆಲಸ ಮಾಡುತ್ತಿದ್ದ ಖಡೇಬಜಾರ್ ಪೊಲೀಸ್ ಠಾಣೆಯಲ್ಲೇ ದೂರು ನೀಡಿದ್ದಾಳೆ.
ಪರಿಸ್ಥಿತಿಯ ಒತ್ತಡಕ್ಕೆ ಸಿಲುಕಿದ ಯುವತಿಯನ್ನು ಪಿಎಸ್ಐ ಪದೇಪದೆ ಬ್ಲ್ಯಾಕ್ಮೇಲ್ ಮಾಡುತ್ತಿದ್ದುದಲ್ಲದೇ ಹಿಂದೆ ಆರು ಬಾರಿ ಅತ್ಯಾಚಾರವನ್ನೂ ಎಸಗಿದ್ದರು. ಈತನ ಕಿರುಕುಳದಿಂದ ಬೇಸತ್ತ ಯುವತಿ ತಿಂಗಳ ಹಿಂದೆ ತನ್ನ ಸ್ವಂತ ಊರು ಕಾರವಾರದಲ್ಲಿ ಆತ್ಮಹತ್ಯೆಗೂ ಯತ್ನಿಸಿದ್ದಳು. ಆದರೆ ಕೊನೆಗೆ ಅಲ್ಲಿನ ಸಮಾಜ ಸೇವಕರು ಧೈರ್ಯ ತುಂಬಿ, ಬೆಂಬಲ ನೀಡಿ ಪೊಲೀಸ್ ಅಧಿಕಾರಿಯ ನೀಚ ಕೃತ್ಯವನ್ನು ಎಲ್ಲರೆದುರು ಬಿಚ್ಚಿಡಲು ಮುಂದಾದರು. ಗುರುವಾರ ನಗರದ ವಸತಿಗೃಹವೊಂದಕ್ಕೆ ಯುವತಿಯನ್ನು ಪಿಎಸ್ಐ ಆಹ್ವಾನಿಸಿದ್ದಾಗ, ಮೊದಲೇ ಮಾಡಿದ ಯೋಜನೆಯಂತೆ ಬಲೆಗೆ ಬೀಳಿಸಲಾಗಿದೆ. ಸಂತ್ರಸ್ತ ಯುವತಿ ನಗರದ ಕಾಲೇಜೊಂದರಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದಾಳೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement