ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಅಮೇಠಿಯಿಂದ ಸ್ಮೃತಿ ಇರಾನಿ ಕಣಕ್ಕಿಳಿಸುವ ಸಾಧ್ಯತೆ

ಅಮೇಠಿಯಿಂದ ಸ್ಮೃತಿ ಇರಾನಿ, ರಾಯ್ ಬರೇಲಿಯಿಂದ ಉಮಾಭಾರತಿ...

Rashmi Kasaragodu
Updated On : 28 Mar 2014, 10:26 am

ಕನ್ನಡಪ್ರಭ ಪ್ರತಿನಿಧಿಯಿಂದ
ನವದೆಹಲಿ: ಅಮೇಠಿಯಿಂದ ಸ್ಮೃತಿ ಇರಾನಿ, ರಾಯ್ ಬರೇಲಿಯಿಂದ ಉಮಾಭಾರತಿ...
ಅಶೋಕ ರಸ್ತೆಯಲ್ಲಿರುವ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಹರಿದಾಡುತ್ತಿರುವ ಅನಧಿಕೃತ ಮಾಹಿತಿ ನಂಬಬಹುದಾದರೆ, ಇವರಿಬ್ಬರು ರಾಹುಲ್ ಮತ್ತು ಸೋನಿಯಾ ವಿರುದ್ಧ ಸ್ಪರ್ಧಿಸಲಿದ್ದಾರೆ.  ವಾರಾಣಸಿಯಿಂದ ಮೋದಿ ವಿರುದ್ಧ ಕಾಂಗ್ರೆಸ್ ಪ್ರಬಲ ಅಭ್ಯರ್ಥಿಯನ್ನು ಹಾಕಿದರೆ ಬಿಜೆಪಿ ಕೂಡ ಸೋನಿಯಾ, ರಾಹುಲ್ ವಿರುದ್ಧ ಪ್ರಬಲ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಚಿಂತನೆ ನಡೆಸಿದೆ.
ಆದರೆ, ಬಿಜೆಪಿ ಇದುವರೆಗೆ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಜತೆಗೆ ಸುದ್ದಿಯನ್ನು ನಿರಾಕರಿಸಿಯೂ ಇಲ್ಲ. ರಾಹುಲ್ಗಾಂಧಿ ಕಾಂಗ್ರೆಸ್ ಉಪಾಧ್ಯಕ್ಷ. ಸ್ಮೃತಿ ಇರಾನಿ ಕೂಡಾ ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷೆ. ಇಬ್ಬರೂ ಯುವ ಮುಂದಾಳುಗಳು. ಭಾಷಣದಲ್ಲಿ ರಾಹುಲ್ಗಾಂಧಿಯನ್ನು ಮೀರಿಸುವ ಸಾಮರ್ಥ್ಯ ಸ್ಮೃತಿ ಇರಾನಿ ಅವರಿಗಿದೆ. ಹೀಗಾಗಿ ಸ್ಮೃತಿ ಇರಾನಿ ಅವರನ್ನು ಕಣಕ್ಕಿಳಿಸುವ ಬಗ್ಗೆ ಪರಿಗಣಿಸಲು ಬಿಜೆಪಿ ವರಿಷ್ಠರು ನಿರ್ಧರಿಸಿದ್ದಾರೆನ್ನಲಾಗಿದೆ. ಗುಜರಾತ್ನಿಂದ ರಾಜ್ಯಸಭಾ ಸದಸ್ಯೆ ಆಗಿರುವ ಸ್ಮೃತಿ ಇರಾನಿ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಆಪ್ತ ಗುಂಪಿನ ಸದಸ್ಯರಲ್ಲೊಬ್ಬರು.
ರಾಹುಲ್ ಗಾಂಧಿ ವಿರುದ್ಧ ಪ್ರಬಲ ಅಭ್ಯರ್ಥಿ ತಲಾಶ್ ಮಾಡುತ್ತಿದ್ದ ವೇಳೆ, ಸ್ಮೃತಿ ಇರಾನಿ ಕಣಕ್ಕಿಳಿಸುವ ಪ್ರಸ್ತಾಪ ಮಾಡಲಾಗಿದೆ. ಈ ಪ್ರಸ್ತಾಪಕ್ಕೆ ಬಹುತೇಕ ನಾಯಕರು ಸಮ್ಮತಿಸಿದ್ದಾರೆ. ಈ ಬಗ್ಗೆ ಸ್ಮೃತಿ ಇರಾನಿಗೂ ಮಾಹಿತಿ ನೀಡಿ ಸ್ಪರ್ಧೆಗೆ ಸಿದ್ಧವಾಗುವಂತೆ ಸೂಚಿಸಲಾಗಿದೆ. ಆದರೆ, ಅಮೇಠಿ ಕ್ಷೇತ್ರದಲ್ಲಿ ಸ್ಮೃತಿ ಇರಾನಿ ಅವರನ್ನು ಕಣಕ್ಕಿಳಿಸಿದರೆ, ಅವರು ಗೆಲ್ಲಬಹುದಾದ ಬೇರೆ ಕ್ಷೇತ್ರ ಕೈತಪ್ಪಿ ಹೋಗಬಹುದಾದ ಸಾಧ್ಯತೆಗಳ ಬಗ್ಗೆಯೂ ಪಕ್ಷದ ವರಿಷ್ಠರು ಚಿಂತಿಸುತ್ತಿದ್ದಾರೆ.
ಸೋನಿಯಾ ವಿರುದ್ಧ ಉಮಾ
ಸೋನಿಯಾಗಾಂಧಿ ಅವರ ವಿರುದ್ಧ ಉಮಾಭಾರತಿ ಕಣಕ್ಕಿಳಿಸುವಂತೆ ಯೋಗಾ ಗುರು ಬಾಬಾ ರಾಮ್ದೇವ್ ನೀಡಿದ್ದ ಸಲಹೆಯನ್ನು ಪಕ್ಷ ಪರಿಗಣಿಸಿದೆ ಎನ್ನಲಾಗುತ್ತಿದೆ. ಉಮಾ ಭಾರತಿಗೆ ಈಗಾಗಲೇ ಝಾನ್ಸಿ ಕ್ಷೇತ್ರದಿಂದ ಟಿಕೆಟ್ ಘೋಷಣೆ ಮಾಡಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement