ಗುಜರಾತ್ ಮಾದರಿಗೆ ರಾಗಾ ಆಕ್ರೋಶ
ಅತ್ತ ಮೋದಿ ಕಾಂಗ್ರೆಸ್ ವಿರುದ್ಧ ಹರಿಹಾಯುತ್ತಿದ್ದರೆ ಇತ್ತ ಪಕ್ಷದ ಉಪಾಧ್ಯಕ್ಷ ರಾಹುಲ್ಗಾಂಧಿ ಬಿಜೆಪಿ..
ಬಿಸ್ವನಾಥ್ ಚರೈಲಿ(ಅಸ್ಸಾಂ): ಅತ್ತ ಮೋದಿ ಕಾಂಗ್ರೆಸ್ ವಿರುದ್ಧ ಹರಿಹಾಯುತ್ತಿದ್ದರೆ ಇತ್ತ ಪಕ್ಷದ ಉಪಾಧ್ಯಕ್ಷ ರಾಹುಲ್ಗಾಂಧಿ ಬಿಜೆಪಿ ಗುಜರಾತ್ ಮಾದರಿ ಕುರಿತು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
- ಗುಜರಾತ್ ಮಾದರಿಯಿಂದ ಕೆಲವು ಕಂಪನಿಗಳಿಗಷ್ಟೇ ಅನುಕೂಲ. ರೈತರಿಂದ ಬಲವಂತ ಭೂಮಿ ಕಿತ್ತುಕೊಳ್ಳಲಾಗಿದೆ.
- 2004ರಲ್ಲಿ ಬಿಜೆಪಿಯ ಇಂಡಿಯಾ ಶೈನಿಂಗ್ ಬಲೂನ್ ಅನ್ನು ಬಡ ಜನರು ಸ್ಫೋಟಿಸಿದ್ದರು. 2009ರಲ್ಲೂ ಮಾಧ್ಯಮಗಳು ಕಾಂಗ್ರೆಸ್ ಸರ್ಕಾರ ರಚಿಸುವುದಿಲ್ಲ ಎಂದು ಹೇಳಿದ್ದವು. ಆದರೆ, ಆಗಲೂ ಜನ ಬಲೂನ್ ಅನ್ನು ಸ್ಫೋಟಿಸಿದ್ದರು.
- ಈ ಬಾರಿ ಪೂರ್ಣ ಗಾಳಿ ತುಂಬಿದ ಬಲೂನ್ ಅನ್ನು ಹಾರಿ ಬಿಡಲಾಗಿದೆ. ಇದು ಮೂರು ಪಟ್ಟು ಹೆಚ್ಚು ಶಬ್ದದೊಂದಿಗೆ ಸ್ಫೋಟಗೊಳ್ಳಲಿದೆ.