ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಧ್ರುವ, ಕಟೀಲ್ ಅತ್ಯುತ್ತಮ ಸಂಸದರು

Rashmi Kasaragodu
Updated On : 28 Mar 2014, 2:33 am


ನವದೆಹಲಿ: ಸಂಸದೀಯ ಪಟುಗಳ ಸಾಧನೆ ಆಧರಿಸಿ ಇಂಡಿಯಾ ಟುಡೆ ಸಿದ್ಧಪಡಿಸಿದ ಅತ್ಯುತ್ತಮ ಸಂಸದೀಯ ಪಟುಗಳ ಪಟ್ಟಿಯಲ್ಲಿ ಚಾಮರಾಜನಗರದ ಸಂಸದ ಧ್ರುವನಾರಾಯಣ್ ದೇಶದಲ್ಲಿ 5ನೇ ಸ್ಥಾನಪಡೆದಿದ್ದಾರೆ.
ದಕ್ಷಿಣ ಕನ್ನಡದ ಬಿಜೆಪಿ ಸಂಸದ ನಳಿನ್ ಕುಮಾರ್ ಕಟೀಲ್ 24ನೇ ಸ್ಥಾಗಳಿಸಿದ್ದಾರೆ. ಇನ್ನು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಸಂಸದ ಡಿ.ಬಿ. ಚಂದ್ರೇಗೌಡ ಈ ಪಟ್ಟಿಯಲ್ಲಿ 43ನೇ ಸ್ಥಾನದಲ್ಲಿದ್ದಾರೆ. ದಿ ಸತರ್ಕ್ ನಾಗರಿಕ ಸಂಘಟನೆ, ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ನ ಜತೆಗೂಡಿ ಇಂಡಿಯಾ ಟುಡೆ ನಡೆಸಿದ ಸಮೀಕ್ಷೆಯಂತೆ ಈ ರ್ಯಾಂಕ್ ನೀಡಲಾಗಿದೆ. ಸಂಸದರ ಹಾಜರಾತಿ, ಕ್ಷೇತ್ರದಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ಆಧರಿಸಿ ಈ ಪಟ್ಟಿ ಸಿದ್ಧಪಡಿಸಲಾಗಿದೆ.
ಕಟ್ಟಿ ಲಾಸ್ಟ್: ಕರ್ನಾಟಕದ 28 ಸಂಸದರಲ್ಲಿ ಚಿಕ್ಕೋಡಿಯ ರಮೇಶ್ ಕಟ್ಟಿ ಕೊನೆಯ ಸ್ಥಾನದಲ್ಲಿದ್ದಾರೆ. ಕಟ್ಟಿ ಅವರಿಗೆ ಈ ಪಟ್ಟಿಯಲ್ಲಿ 363ನೇ ಸ್ಥಾನ ನೀಡಲಾಗಿದೆ. ನಂತರದ ಸ್ಥಾನ ಉತ್ತರ ಕನ್ನಡ ಸಂಸದ ಅನಂತ ಕುಮಾರ್ ಹೆಗ್ಡೆ(322ನೇ ಸ್ಥಾನ) ಅವರಿಗೆ ಸಲ್ಲುತ್ತದೆ. ಇನ್ನು ಹಿರಿಯ ಸಂಸದ, ಜೆಡಿಎಸ್ ರಾಷ್ಟ್ರಾಧ್ಯಕ್ಷ ಎಚ್.ಡಿ.ದೇವೇಗೌಡ 310ನೇ ಸ್ಥಾನ
ಪಡೆದಿದ್ದಾರೆ. ಇದೇ ರೀತಿ ಕಳಪೆ ಸಾಧನೆ ತೋರಿದವರ ಪಟ್ಟಿಯಲ್ಲಿ ಬಳ್ಳಾರಿ ಸಂಸದೆ ಜೆ. ಶಾಂತಾ(307), ರಾಯಚೂರು ಸಂಸದ ಎಸ್. ಪಕ್ಕೀರಪ್ಪ (282), ತುಮಕೂರು ಸಂಸದ ಜಿ.ಎಸ್. ಬಸವರಾಜನ್  (269) ಕೂಡ ಇದ್ದಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement