ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಮಹಿಳೆಯರು, ಮುಸ್ಲಿಮರು, ಈ ಬಾರಿಯೂ ಹಿಂದುಳಿದರು!

Rashmi Kasaragodu
Updated On : 28 Mar 2014, 1:04 am

ಈ ಬಾರಿಯೂ ಜಾತಿ ರಾಜಕೀಯ
ಪ್ರತಿ ಬಾರಿಯಂತೆ ಈ ಬಾರಿಯೂ ಬಹುತೇಕ ಪಕ್ಷಗಳು ಜಾತಿ ಆಧಾರದಲ್ಲಿ ಅಭ್ಯರ್ಥಿಗಳನ್ನು ಘೋಷಿಸಿವೆ. ತನ್ನ ಮತ ಬ್ಯಾಂಕ್ ಅನ್ನು ಕಾಪಾಡಿಕೊಳ್ಳುವ ಭರದಲ್ಲಿ ಬಿಜೆಪಿಯು ಮಹಿಳೆಯರಿಗೆ, ಮುಸ್ಲಿಮರಿಗೆ ಅವಕಾಶ ನೀಡಲು ಹಿಂದೇಟು ಹಾಕಿದೆ. ಈ ವಿಚಾರದಲ್ಲಿ ಕಾಂಗ್ರೆಸ್ ಸ್ವಲ್ಪ ಸುಧಾರಿಸಿದ್ದು, ಕಳೆದ ಬಾರಿಗಿಂತ ಈ ಬಾರಿ ಹೆಚ್ಚಿನ ಮಹಿಳೆಯರನ್ನು ಅಭ್ಯರ್ಥಿಗಳನ್ನಾಗಿ ಘೋಷಿಸಿವೆ.


ಇತರೆ ಕ್ಷೇತ್ರಗಳತ್ತ
ಈ ಲೋಕಸಭೆ ಚುನಾವಣೆಯಲ್ಲಿ ರಾಜಕೀಯೇತರ ಕ್ಷೇತ್ರದ ವ್ಯಕ್ತಿಗಳು ಅಭ್ಯರ್ಥಿಗಳ ಪೈಕಿ ಹೆಚ್ಚಿನ ಸ್ಥಾನವನ್ನು ತುಂಬಿದ್ದಾರೆ. ಅಂದರೆ, ಸಿನಿಮಾ ತಾರೆಯರು, ಪತ್ರಕರ್ತರು, ಶಿಕ್ಷಣ ತಜ್ಞರು, ನಿವೃತ್ತ ಅಧಿಕಾರಿಗಳು ರಾಜಕೀಯ ಕಣದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸಿಕೊಂಡಿದ್ದಾರೆ.


ಮಹಿಳೆಯರಿಗೆ ಪ್ರಾಶಸ್ತ್ಯ
ಬಿಜೆಪಿ
ಅಭ್ಯರ್ಥಿಗಳ ಸಂಖ್ಯೆ -35
2009ರಲ್ಲಿದ್ದ ಅಭ್ಯರ್ಥಿಗಳು - 44

ಕಾಂಗ್ರೆಸ್
55

2009ರಲ್ಲಿದ್ದ ಅಭ್ಯರ್ಥಿಗಳು -43


ಆಪ್ -34


---

ಮುಸ್ಲಿಮರಿಗೆ ಪ್ರಾಶಸ್ತ್ಯ


ಬಿಜೆಪಿ   ಅಭ್ಯರ್ಥಿಗಳ ಸಂಖ್ಯೆ -6

ಕಾಂಗ್ರೆಸ್ -29

ಆಪ್ -37

--
ಪತ್ರಕರ್ತರೂ ಕಣಕ್ಕೆ
ಪ್ರಸಕ್ತ ಚುನಾವಣೆಯಲ್ಲಿ ಪ್ರತಾಪ್ಸಿಂಹ ಸೇರಿದಂತೆ ಮೂವರು ಪತ್ರಕರ್ತರನ್ನು ಬಿಜೆಪಿ ಕಣಕ್ಕಿಳಿಸಿದೆ. ಇದೇ ವೇಳೆ ಆಪ್ 6 ಮಂದಿ ಪತ್ರಕರ್ತರಿಗೆ ಟಿಕೆಟ್ ನೀಡಿದೆ. ಜತೆಗೆ, ಮೇಧಾ ಪಾಟ್ಕರ್, ಅಂಜಲಿ ದಮಾನಿಯಾ, ಎಸ್.ಪಿ. ಉದಯಕುಮಾರ್, ಸೋನಿ ಸೋರಿ ಮತ್ತಿತರ ಸಾಮಾಜಿಕ ಹೋರಾಟಗಾರರನ್ನು ಮೊತ್ತಮೊದಲ ಬಾರಿಗೆ ಕಣಕ್ಕಿಳಿಸುವ ಧೈರ್ಯವನ್ನೂ ಕೇಜ್ರಿವಾಲ್ ನೇತೃತ್ವದ ಆಪ್ ತೋರಿದೆ.

ಮಹಿಳಾ ಮಣಿಗಳಿಗಿಲ್ಲ ಆದ್ಯತೆ


81.4 ಕೋಟಿ ಮತದಾರರ ಪೈಕಿ ಶೇ. 49ರಷ್ಟು ಮಂದಿ ಮಹಿಳೆಯರು. ಆದರೆ ಶೇ.11ರಷ್ಟು ಮಹಿಳೆಯರು ಮಾತ್ರವೇ ಈ ಬಾರಿ ಟಿಕೆಟ್ ಗಿಟ್ಟಿಸಿಕೊಂಡಿದ್ದಾರೆ. ಅಂದರೆ ಪಕ್ಷಗಳು ಮಹಿಳೆಯರ ಬಗ್ಗೆ ಈ ಬಾರಿಯೂ ಅಸಡ್ಡೆ ತೋರಿವೆ. 2009ರ ಚುನಾವಣೆಯಲ್ಲಿ 44 ಮಂದಿ ಮಹಿಳೆಯರನ್ನು ಕಣಕ್ಕಿಳಿಸಿದ್ದ ಬಿಜೆಪಿ ಈ ಬಾರಿ ಕೇವಲ 37 ಮಂದಿಗಷ್ಟೇ ಟಿಕೆಟ್ ನೀಡಿದೆ. ಕಾಂಗ್ರೆಸ್ ಪಕ್ಷ ಕಳೆದ ಬಾರಿ 43 ಮಂದಿಗೆ ಟಿಕೆಟ್ ನೀಡಿದ್ದು, ಈ ಸಲ 55 ಮಂದಿ ಮಹಿಳೆಯರನ್ನು ಕಣಕ್ಕಿಳಿಸಿದೆ. ವಿಶೇಷವೆಂದರೆ ಆಮ್ ಆದ್ಮಿ ಪಕ್ಷ ಬರೋಬ್ಬರಿ 34 ಮಹಿಳಾಮಣಿಗಳಿಗೆ ಟಿಕೆಟ್ ನೀಡಿದೆ. ಈ ಬಾರಿಯ ಚುನಾವಣೆಯಲ್ಲಿ ಬಾಲಿವುಡ್ ನಟಿಯರಿಗೂ ಪಕ್ಷಗಳು ಮಣೆ ಹಾಕಿವೆ. ಆಪ್ನಿಂದ ಗುಲ್ ಪನಾಗ್, ಬಿಜೆಪಿಯಿಂದ ಕಿರಣ್ ಖೇರ್, ಹೇಮಮಾಲಿನಿ ಹಾಗೂ ಕಾಂಗ್ರೆಸ್ನಿಂದ ನಗ್ಮಾ ಮತ್ತು ಮೌಸಮ್ ನೂರ್ ಚುನಾವಣಾ ಕಣಕ್ಕೆ ರಂಗು ನೀಡಿದ್ದಾರೆ.


ಮುಸ್ಲಿಮರಿಗಿಲ್ಲ ಮಣೆ



ಈ ಬಾರಿ ಹೆಚ್ಚಿನ ರಾಜಕೀಯ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ಮುಸ್ಲಿಮರು ವಿಫಲರಾಗಿದ್ದಾರೆ. ಮುಸ್ಲಿಮರನ್ನು ಓಲೈಸಲು ಪ್ರಯತ್ನಿಸುತ್ತಿರುವ ಬಿಜೆಪಿ ಕೇವಲ 6 ಮುಸ್ಲಿಮರಿಗೆ ಮಾತ್ರವೇ ಟಿಕೆಟ್ ನೀಡಿದೆ. ಈ ವಿಚಾರದಲ್ಲಿ ಆಪ್ ಮುನ್ನಡೆ ಸಾಧಿಸಿದ್ದು, ಬರೋಬ್ಬರಿ 37 ಮಂದಿ ಮುಸ್ಲಿಮರನ್ನು ಕಣಕ್ಕಿಳಿಸಿದೆ. ಆಪ್ಗೆ ಹೋಲಿಸಿದರೆ ಕಾಂಗ್ರೆಸ್ ಕೂಡ ಹಿಂದೆ ಬಿದ್ದಿದ್ದು 29 ಮಂದಿ ಮುಸ್ಲಿಮರಿಗೆ ಟಿಕೆಟ್ ನೀಡಿದೆ. ಅವರಲ್ಲಿ ಪ್ರಮುಖರೆಂದರೆ, ಸಲ್ಮಾನ್ ಖುರ್ಷಿದ್, ಮೊಹಮ್ಮದ್ ಕೈಫ್ ಮತ್ತು ನಗ್ಮಾ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement