ಮೋದಿಗೆ ಬೆಂಬಲ
ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಯವರಿಗೆ ಕರ್ನಾಟಕದಿಂದ ಸತತ ಎರಡು ಬಾರಿ ರಾಜ್ಯಸಭೆಗೆ ಆಯ್ಕೆಗೊಂಡಿರುವ ಸಂಸತ್ ...
ಬೆಂಗಳೂರು: ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಯವರಿಗೆ ಕರ್ನಾಟಕದಿಂದ ಸತತ ಎರಡು ಬಾರಿ ರಾಜ್ಯಸಭೆಗೆ ಆಯ್ಕೆಗೊಂಡಿರುವ ಸಂಸತ್ ಸದಸ್ಯ ರಾಜೀವ್ ಚಂದ್ರಶೇಖರ್ ಬೆಂಬಲ ಘೋಷಿಸಿದ್ದಾರೆ. 'ಸ್ಪಷ್ಟ ಮತ್ತು ನಿರ್ಣಾಯಕ ನೀತಿನಿರೂಪಣೆಗಳು ಮತ್ತು ಆಡಳಿತಾತ್ಮಕ ಸುಧಾರಣೆಗಳ ಮೂಲಕ ಇಂದು ಎದುರಾಗಿರುವ ಸವಾಲುಗಳಿಂದ ದೇಶವನ್ನು ಯಶಸ್ವಿಯಾಗಿ ಮನ್ನಡೆಸಬಲ್ಲ ಸಾಮರ್ಥ್ಯವಿರುವ ಮೋದಿಯವರನ್ನು ನಾನು ಬೆಂಬಲಿಸುತ್ತೇನೆ' ಎಂದು ರಾಜೀವ್ ಹೇಳಿದ್ದಾರೆ.
'ಮೋದಿ ನಿಜವಾದ ಸಾಧಕ ಮತ್ತು ಸವಾಲುಗಳನ್ನು ಧೈರ್ಯದಿಂದ ಸ್ವೀಕರಿಸುವ ಗುಣವನ್ನು ನಿರೂಪಿಸಿರುವ ಧೀಮಂತ' ಎಂದಿದ್ದಾರೆ ಚಂದ್ರಶೇಶರ್.