ಸ್ವಿಸ್ ಬ್ಯಾಂಕ್ ವಿರುದ್ಧ ಕಿಡಿ
ಕಪ್ಪುಹಣಕ್ಕೆ ಸಂಬಂಧಿಸಿ ಕೇಂದ್ರಕ್ಕೆ ಸುಪ್ರೀಂ ಝಾಡಿಸಿದ ಬೆನ್ನಲ್ಲೇ ಈಗ ಕೇಂದ್ರ ಸಚಿವ ಚಿದಂಬರಂ ಅವರು ಸ್ವಿಜರ್ಲೆಂಡ್ ವಿರುದ್ಧ...
ನವದೆಹಲಿ: ಕಪ್ಪುಹಣಕ್ಕೆ ಸಂಬಂಧಿಸಿ ಕೇಂದ್ರಕ್ಕೆ ಸುಪ್ರೀಂ ಝಾಡಿಸಿದ ಬೆನ್ನಲ್ಲೇ ಈಗ ಕೇಂದ್ರ ಸಚಿವ ಚಿದಂಬರಂ ಅವರು ಸ್ವಿಜರ್ಲೆಂಡ್ ವಿರುದ್ಧ ಕಿಡಿಕಾರಿದ್ದಾರೆ. ಸ್ವಿಸ್ ಬ್ಯಾಂಕುಗಳಲ್ಲಿ ಕಪ್ಪುಹಣ ಇಟ್ಟವರ ಮಾಹಿತಿಗೆ ಎಷ್ಟು ಕೋರಿಕೆ ಸಲ್ಲಿಸಿದರೂ ಅದನ್ನು ಪರಿಗಣಿಸಿಲ್ಲ. ಈ ಬಗ್ಗೆ ಜಿ-20ಯಂತಹ ಅಂತಾರಾಷ್ಟ್ರೀಯ ವೇದಿಕೆಗೆ ದೂರು ನೀಡುವುದಾಗಿ ಎಚ್ಚರಿಸಿದ್ದಾರೆ. ಸ್ವಿಸ್ ಹಣಕಾಸು ಸಚಿವ ಎವಲಿನ್ ವಿಡ್ಮೆರ್ ಶ್ಲಂಫ್ ಅವರಿಗೆ 2 ಪುಟಗಳ ಪತ್ರ ಬರೆದಿರುವ ಚಿದು, ಕಪ್ಪುಹಣಕ್ಕೆ ಸಂಬಂಧಿಸಿ ನಿಮ್ಮ ದೇಶವು ಅಸಹಕಾರ ಮುಂದುವರಿಸಿದರೆ, ನಿಮ್ಮನ್ನು ಅಸಹಕಾರಿ ರಾಷ್ಟ್ರವೆಂದು ಘೋಷಿಸಲು ಮುಂದಾಗುತ್ತೇವೆ ಎಂದು ಎಚ್ಚರಿಸಿದ್ದಾರೆ.