ದೇಣಿಗೆ: ಕ್ರಮಕ್ಕೆ ಆದೇಶ
ವಿದೇಶಿ ಮೂಲದ ಕಂಪನಿಯಿಂದ ದೇಣಿಗೆ ಪಡೆದ ಪ್ರಕರಣಕ್ಕೆ ಸಂಬಂಧಿಸಿ ಬಿಜೆಪಿ ಹಾಗೂ ಕಾಂಗ್ರೆಸ್ ವಿರುದ್ಧ ಆರು ತಿಂಗಳೊಳಗೆ ಕ್ರಮ...
ನವದೆಹಲಿ: ವಿದೇಶಿ ಮೂಲದ ಕಂಪನಿಯಿಂದ ದೇಣಿಗೆ ಪಡೆದ ಪ್ರಕರಣಕ್ಕೆ ಸಂಬಂಧಿಸಿ ಬಿಜೆಪಿ ಹಾಗೂ ಕಾಂಗ್ರೆಸ್ ವಿರುದ್ಧ ಆರು ತಿಂಗಳೊಳಗೆ ಕ್ರಮ ಕೈಗೊಳ್ಳುವಂತೆ ದೆಹಲಿ ಹೈಕೋರ್ಟ್ ಶುಕ್ರವಾರ ಆದೇಶಿಸಿದೆ. ಬ್ರಿಟನ್ ಮೂಲದ ವೇದಾಂತ ರಿಸೋರ್ಸಸ್ನ ಸಹಸಂಸ್ಥೆಗಳಿಂದ ಹಣ ಪಡೆಯುವ ಮೂಲಕ ಈ ಎರಡೂ ಪಕ್ಷಗಳು ಕಾನೂನು ಉಲ್ಲಂಘಿಸಿವೆ ಎಂದು ನ್ಯಾ. ಪ್ರದೀಪ್ ನಂದರಾಜೋಗ್ ಮತ್ತು ಜಯಂತ್ ನಾಥ್ ಅವರ ಪೀಠ ಹೇಳಿದೆ.