ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಬಿಸಿಸಿಐಗೆ ಸುನಿಲ್ ಹೆಸರೇ ಬಂತು ಏಕೆ?

ಐಪಿಎಲ್ ಫಿಕ್ಸಿಂಗ್ ಹಗರಣದ ಹಿನ್ನೆಲೆಯಲ್ಲಿ ಬಿಸಿಸಿಐ ಅಧ್ಯಕ್ಷ ಎನ್. ಶ್ರೀನಿವಾಸನ್ ರಾಜಿನಾಮೆ ಕೊಟ್ಟದ್ದಾಯ್ತು, ಆದರೆ ಸುಪ್ರೀಂ...

Rashmi Kasaragodu
Updated On : 29 Mar 2014, 11:03 am

ನವದೆಹಲಿ: ಐಪಿಎಲ್ ಫಿಕ್ಸಿಂಗ್ ಹಗರಣದ ಹಿನ್ನೆಲೆಯಲ್ಲಿ ಬಿಸಿಸಿಐ ಅಧ್ಯಕ್ಷ ಎನ್. ಶ್ರೀನಿವಾಸನ್ ರಾಜಿನಾಮೆ ಕೊಟ್ಟದ್ದಾಯ್ತು, ಆದರೆ ಸುಪ್ರೀಂ ಕೋರ್ಟ್ ಇಂಥ ಆದೇಶ ನೀಡಬಹುದೇ ಎಂಬ ಚರ್ಚೆ ಆರಂಭವಾಗಿದೆ. ಬಿಸಿಸಿಐ ಚುನಾಯಿತ ಸಂಸ್ಥೆ. ಇದರ ಅಧ್ಯಕ್ಷರನ್ನು ತೆಗೆದು ಹಾಕಬಹುದೇ ವಿನಃ ಇಂಥವರೇ ಅಧ್ಯಕ್ಷರಾಗಬೇಕು ಎಂದು ಸೂಚಿಸಬಹುದೇ ಎಂಬ ಕುರಿತು ಜಿಜ್ಞಾಸೆ ಆರಂಭವಾಗಿದೆ.  ಕೆಲ ಟ್ವಿಟರಾರ್ಥಿಗಳು ಈ ಕುರಿತಂತೆ ಪ್ರಶ್ನೆ ಕೇಳಿದ್ದಾರೆ. ಸೀಮಾ ಗೋಸ್ವಾಮಿ ಎಂಬ ಟ್ವಿಟರಾರ್ಥಿಯೊಬ್ಬರು ಇಂಥ ಪ್ರಶ್ನೆ ಎತ್ತಿದ್ದು, ಕಾನೂನು ತಜ್ಞರು ಉತ್ತರಿಸಬೇಕು ಎಂದಿದ್ದಾರೆ.
ಹೆಸರು ಬಂದದ್ದು ಹೇಗೆ?: ಗುರುವಾರವಷ್ಟೇ ಕೋರ್ಟ್ ಗವಾಸ್ಕರ್ ಹೆಸರನ್ನು ಪ್ರಸ್ತಾಪಿಸಿತ್ತು. ಇದೇ ಮಧ್ಯಂತರ ಆದೇಶದಲ್ಲೂ ಪ್ರತಿಫಲಿಸಿತು. ಅವರನ್ನೇ ನೇಮಿಸಲಾಯಿತು. ಸಚಿನ್, ಗಂಗೂಲಿ, ಕುಂಬ್ಳೆ, ದ್ರಾವಿಡ್ ರಂಥವರನ್ನು ಮಾತನಾಡಿಸಬೇಕು ಎಂಬ ವಕೀಲ ಹರೀಶ್‌ಸಾಳ್ವೆ ವಾದ ಆಲಿಸಿದ ನ್ಯಾ. ಪಾಟ್ನಾಯಕ್ ಅವರು ಗವಾಸ್ಕರ್ ಎಲ್ಲಿ ಎಂದು ಪ್ರಶ್ನಿಸಿದರು. ಅಲ್ಲದೆ ನ್ಯಾ. ಪಾಟ್ನಾಯಕ್ ಕಾಲೇಜು ದಿನಗಳಲ್ಲಿ ಕ್ರಿಕೆಟ್ ಬಗ್ಗೆ ಆಸಕ್ತಿ ಇದ್ದುದರಿಂದಲೂ ಗವಾಸ್ಕರ್ ಹೆಸರು ತೇಲಿಬಂತು ಎಂದು ಹೇಳಲಾಗಿದೆ.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement