ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಅಷ್ಟ ಭ್ರಷ್ಟರ ಆಸ್ತಿ ದಶ ಕೋಟಿ!

Rashmi Kasaragodu
Updated On : 30 Mar 2014, 10:19 am

ಬೆಂಗಳೂರು: ರಾಜ್ಯದ ಎಂಟು ಭ್ರಷ್ಟ ಸರ್ಕಾರಿ ಅಧಿಕಾರಿಗಳ ನಿವಾಸ, ಕಚೇರಿಗಳ ಮೇಲೆ ದಾಳಿ ನಡೆಸಿರುವ ಲೋಕಾಯುಕ್ತ ಪೊಲೀಸರು 10.65 ಕೋಟಿ ಅಕ್ರಮ ಆಸ್ತಿ ಪತ್ತೆ ಹಚ್ಚಿದ್ದಾರೆ.
ಬಿಬಿಎಂಪಿ ಮುಖ್ಯ ಅಭಿಯಂತರ ನಾಗರಾಜು, ಚಿತ್ರದುರ್ಗ ಹಿರಿಯ ಮೋಟಾರು ವಾಹನ ನಿರೀಕ್ಷಕ ವಿ.ಜೆ.ಶ್ರೀನಿವಾಸಯ್ಯ, ಕೆಎಸ್ಆರ್ಟಿಸಿ ಬೆಂಗಳೂರಿನ ಮುಖ್ಯ ಕಚೇರಿ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರ ಕೆ.ಬಿ. ರಾಮಕೃಷ್ಣಾರೆಡ್ಡಿ, ಬೆಂಗಳೂರು ಶಿಕ್ಷಣ ಇಲಾಖೆ ಶಾಖಾಧಿಕಾರಿ ಕಳಸೇಗೌಡ, ಬಿಡಿಎ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರ ಎಂ.ವಿ. ವಿಜಯ್ ಕುಮಾರ್, ಬೀದರ್ ಕಾರಂಜಾ ನೀರಾವರಿ ಯೋಜನೆ ಕಾರ್ಯ ನಿರ್ವಾಹಕ ಎಂಜಿನಿಯರ್ ಸುಭಾಷ್ ಮರಕುಂದೆ, ಗೋಕಾಕ್ ಹೆಸ್ಕಾಂ ಸಹಾಯಕ ಅಭಿಯಂತರ ವಿಠ್ಠಲ ಬಸಪ್ಪ ಸವದತ್ತಿ, ಬಿಡಿಎ ಸಹಾಯಕ ಅಭಿಯಂತರ ಬಿ.ಎಸ್. ನರಸಿಂಹಮೂರ್ತಿ ಬಲೆಗೆ ಬಿದ್ದ ಭ್ರಷ್ಟರು.
ಇವರಿಗೆ ಸೇರಿದ ಬೆಂಗಳೂರು, ಬೀದರ್, ಬೆಳಗಾವಿ, ಚಿಕ್ಕಬಳ್ಳಾಪುರ, ಚಿತ್ರದುರ್ಗ ಸೇರಿದಂತೆ 21 ಸ್ಥಳಗಳಲ್ಲಿ ಶನಿವಾರ ಏಕಕಾಲದಲ್ಲಿ ದಾಳಿ ನಡೆಸಿ ಸುಮಾರು 10.65 ಕೋಟಿ ಮೌಲ್ಯದ ಅಕ್ರಮ ಆಸ್ತಿ ಪತ್ತೆ ಹಚ್ಚಲಾಗಿದೆ. ಆರೋಪಿಗಳಿಗೆ ಸೇರಿದ ಲಾಕರ್ಗಳು ಮತ್ತು ಬ್ಯಾಂಕ್ ಖಾತೆಗಳ ಶೋಧನಾ ಕಾರ್ಯ ಮುಂದುವರೆದಿದೆ.

ಯಾರ ಬಳಿ ಎಷ್ಟು ಆಸ್ತಿ?  
(ಪ್ರಮುಖವಾದದ್ದು ಮಾತ್ರ)
- ನಾಗರಾಜು, ಮುಖ್ಯ ಅಭಿಯಂತರ, ಬಿಬಿಎಂಪಿ ಬೆಂಗಳೂರು
ಸುಬ್ರಮಣ್ಯಪುರ ಕರಿಷ್ಮಾ ಹಿಲ್ಸ್ ಪ್ರದೇಶದಲ್ಲಿ ಮನೆ 70 ಲಕ್ಷ, ಮೈಸೂರಿನ ವಿಜಯನಗರದಲ್ಲಿ ಕಟ್ಟಡ 11 ಲಕ್ಷ, ಶ್ರೀರಂಗಪಟ್ಟಣದಲ್ಲಿ ನಿವೇಶನ 5 ಲಕ್ಷ, ಹುಳಿಗಾನಹಳ್ಳಿ ಸುತ್ತಮುತ್ತ ವ್ಯವಸಾಯ ಭೂಮಿ 10 ಲಕ್ಷ.  5 ಲಕ್ಷ ಮೌಲ್ಯದ 2 ಕಾರುಗಳು, ಎರಡುವರೆ ಲಕ್ಷ ನಗದು, 300 ಗ್ರಾಂ ಚಿನ್ನಾಭರಣ, ಎರಡುವರೆ ಕೆಜಿ ಬೆಳ್ಳಿ, 33 ಲಕ್ಷ ಮೌಲ್ಯದ ಗೃಹೋಪಯೋಗಿ ವಸ್ತುಗಳು, ಬ್ಯಾಂಕುಗಳಲ್ಲಿರುವ ಠೇವಣೆ 58 ಲಕ್ಷ.

ಅಸಮತೋಲನ ಆಸ್ತಿ ಮೌಲ್ಯ: 2 ಕೋಟಿ. (ಶೇ.125.25)
- ವಿ.ಜಿ.ಶ್ರೀನಿವಾಸಯ್ಯ, ಹಿರಿಯ ಮೋಟಾರು ವಾಹನ ನಿರೀಕ್ಷಕರು ಸಾರಿಗೆ ಇಲಾಖೆ ಚಿತ್ರದುರ್ಗ
ಬೆಂಗಳೂರಿನ ಕತ್ರಿಗುಪ್ಪೆಯಲ್ಲಿ ಡೂಪ್ಲೆಕ್ಸ್ ಮನೆ 46 ಲಕ್ಷ, ಹಾಗೂ ಎಂ.ಎಂ.ಆರ್ ಎಂಬೆಸ್ಸಿಯಲ್ಲಿ ಫ್ಲ್ಯಾಟ್ 58 ಲಕ್ಷ, ಜಯನಗರದಲ್ಲೊಂದು ಫ್ಲ್ಯಾಟ್ 26 ಲಕ್ಷ, ಶ್ರೀನಿವಾಸನಗರದಲ್ಲಿ ಕಟ್ಟಡ 60 ಲಕ್ಷ,  ಬನಶಂಕರಿ 3ನೇ ಹಂತದಲ್ಲಿ ಕಟ್ಟಡ 30 ಲಕ್ಷ, ಕೆ.ಜಿ ನಗರದಲ್ಲಿ ಕಟ್ಟಡ 17 ಲಕ್ಷ, ಮಾಗಡಿಯ ಹುಲಿಕಲ್ನಲ್ಲಿ 6 ಎಕರೆ ಭೂಮಿ ಮತ್ತು ಅದರಲ್ಲಿ ನಿರ್ಮಿಸಿರುವ ಅತಿಥಿಗೃಹದ ಮೌಲ್ಯ 55 ಲಕ್ಷ.
200 ಗ್ರಾಂ ಚಿನ್ನ, ಸ್ವಿಫ್ಚ್ ಹಾಗೂ ವರ್ನಾ ಕಾರುಗಳು, 5 ಲಕ್ಷ ಮೌಲ್ಯದ ಗೃಹೋಪಯೋಗಿ ವಸ್ತುಗಳು ಎಸ್.ಬಿ ಬ್ಯಾಂಕ್ ಮತ್ತು ಆರ್.ಡಿ ಖಾತೆಗಳಲ್ಲಿ 23 ಲಕ್ಷ.
ಅಸಮತೋಲನ ಆಸ್ತಿ ಮೌಲ್ಯ: 2.63 ಕೋಟಿ (ಶೇ.277.68)

- ಕೆ.ಬಿ.ರಾಮಕೃಷ್ಣರೆಡ್ಡಿ, ಎ.ಇ.ಇ ಕೆಎಸ್ಆರ್ಟಿಸಿ ಬೆಂಗಳೂರು
ಹೆಬ್ಬಾಳದಲ್ಲಿ ಮನೆ 33 ಲಕ್ಷ, ಥಣಿಸಂದ್ರದಲ್ಲಿ ಮನೆ 33 ಲಕ್ಷ, ಥಣಿಸಂದ್ರದಲ್ಲಿ ನಿವೇಶನ 10 ಲಕ್ಷ, ಕೆಂಪಾಪುರದಲ್ಲಿ ಕಟ್ಟಡ 15 ಲಕ್ಷ, ದಾಸರಹಳ್ಳಿಯಲ್ಲಿ ಕಟ್ಟಡ 15 ಲಕ್ಷ. 279 ಗ್ರಾಂ ಚಿನ್ನಾಭರಣ, ಎರಡುವರೆ ಲಕ್ಷ ನಗದು, ಮಾರುತಿಓಮ್ನಿ ಕಾರು.
ಅಸಮತೋಲನ ಆಸ್ತಿ ಮೌಲ್ಯ: 73.12 ಲಕ್ಷ(ಶೇ.116)

- ಕಳಸೇಗೌಡ, ಶಾಖಾಧಿಕಾರಿ ಶಿಕ್ಷಣ ಇಲಾಖೆ ಬೆಂಗಳೂರು
ಜೆ.ಪಿ. ನಗರದಲ್ಲಿ ಕಟ್ಟಡ 15 ಲಕ್ಷ, ಎಚ್ಎಸ್ಆರ್ ಬಡಾವಣೆಯಲ್ಲಿ ನಿವೇಶನ 3 ಲಕ್ಷ, ಬನ್ನೇರುಘಟ್ಟ ರಸ್ತೆ ಸರಸ್ವತಿಪುರದಲ್ಲಿ ಕಟ್ಟಡ 60 ಲಕ್ಷ. 551 ಗ್ರಾಂ ಚಿನ್ನಾಭರಣ, ಮೂರುವರೆ ಕೆಜಿ ಬೆಳ್ಳಿ, ಸ್ವಿಫ್ಟ್ ಕಾರು.
ಅಸಮತೋಲನ ಆಸ್ತಿ ಮೌಲ್ಯ: 65.45 ಲಕ್ಷ(ಶೇ.131)
 
- ಎಂ.ವಿ.ವಿಜಯ್ಕುಮಾರ್, ಸಹಾಯಕ ಕಾರ್ಯಪಾಲಕ ಅಭಿಯಂತರ ಬಿಡಿಎ
ಬಿಟಿಎಂ ಬಡಾವಣೆಯಲ್ಲಿ ಮನೆ 40 ಲಕ್ಷ, ನಿವೇಶನ 1.9 ಲಕ್ಷ, ಎನ್.ಎಸ್. ಪಾಳ್ಯದಲ್ಲಿ ಕ್ರಮವಾಗಿ 11 ಲಕ್ಷ, 13.5 ಲಕ್ಷ, 11.4 ಲಕ್ಷ ಮೌಲ್ಯದ 3 ನಿವೇಶನಗಳು ಸೇರಿ ಒಟ್ಟು 5 ನಿವೇಶನಗಳು. ಎನ್.ಎಸ್.ಪಾಳ್ಯದಲ್ಲಿ ಮನೆ 48 ಲಕ್ಷ. 2 ಕಾರು, 2 ದ್ವಿಚಕ್ರ ವಾಹನಗಳು ಎಂಟುವರೆ ಲಕ್ಷ ನಗದು, ಗೃಹೋಪಯೋಗಿ ವಸ್ತುಗಳು 9 ಲಕ್ಷ, ಚಿನ್ನ ಬೆಳ್ಳಿ ವಸ್ತುಗಳು 8 ಲಕ್ಷ.
ಅಸಮತೋಲನ ಆಸ್ತಿ ಮೌಲ್ಯ: 2.06 ಕೋಟಿ (ಶೇ.343.97)

- ಸುಭಾಷ್ ಮರಕುಂದೆ, ಕಾರ್ಯ ನಿರ್ವಾಹಕ ಅಭಿಯಂತರ, ಕಾರಂಜಾ ನೀರಾವರಿ ಯೋಜನೆ, ಬೀದರ್
ಬೀದರ್ನ ಶಿವನಗರದಲ್ಲಿ 35 ಲಕ್ಷ ಮೌಲ್ಯದ 2 ಕಟ್ಟಡಗಳು, ಹಾಗೂ ಬೀದರ್ ಹಾಗೂ ಗುಲ್ಬರ್ಗದ ವಿವಿಧೆಡೆ 27 ಲಕ್ಷ ಮೌಲ್ಯದ ನಿವೇಶನ ಹಾಗೂ ಕಟ್ಟಡಗಳು. 2 ಕಾರುಗಳು, 5 ದ್ವಿಚಕ್ರ ವಾಹನಗಳು, ಗೃಹೋಪಯೋಗಿ ವಸ್ತುಗಳು 10 ಲಕ್ಷ, ಬ್ಯಾಂಕ್ನಲ್ಲಿ ಶಿಲ್ಕು 9 ಲಕ್ಷ.
ಅಸಮತೋಲನ ಆಸ್ತಿ ಮೌಲ್ಯ: 75.35 ಲಕ್ಷ (ಶೇ.110.81)

- ವಿಠ್ಠಲ ಬಸಪ್ಪ ಸವದತ್ತಿ, ಸಹಾಯಕ ಅಭಿಯಂತರ ಹೆಸ್ಕಾಂ ಗೋಕಾಕ್
ಗೋಕಾಕ್ ಹಾಗೂ ಸುತ್ತಮುತ್ತಲಿನ ಗ್ರಾಮಗಳು, ಪ್ರದೇಶಗಳಲ್ಲಿ ನಿವೇಶನಗಳು, ಜಮೀನುಗಳು, ತೋಟದ ಮನೆ ಹಾಗೂ ಕಟ್ಟಡಗಳು ಇದ್ದು ಅವುಗಳ ಮೌಲ್ಯ 72.17 ಲಕ್ಷ. 3 ದ್ವಿಚಕ್ರ ವಾಹನಗಳು, 30 ಲಕ್ಷ ಮೌಲ್ಯದ 1 ಕೆಜಿ ಚಿನ್ನದ ಬಿಸ್ಕತ್, 234 ಗ್ರಾಂ ಚಿನ್ನಾಭರಣ, 10 ಲಕ್ಷ ನಗದು, 23 ವಿಮಾ ಪಾಲಿಸಿಗಳ ಮೌಲ್ಯ 10 ಲಕ್ಷ.
ಅಸಮತೋಲನ ಆಸ್ತಿ ಮೌಲ್ಯ: 1.09 ಕೋಟಿ (ಶೇ.173.51)

- ಬಿ.ಎಸ್. ನರಸಿಂಹಮೂರ್ತಿ, ಸಹಾಯಕ ಎಂಜಿನಿಯರ್ ಬಿಡಿಎ
ಅಮೃತಹಳ್ಳಿಯಲ್ಲಿ ಫ್ಲ್ಯಾಟ್ 30 ಲಕ್ಷ, ಬಾಗೇಪಲ್ಲಿ ಬಳಿ ಔಟ್ ಹೌಸ್ 16 ಲಕ್ಷ, 2 ಎಕರೆ ಜಮೀನು 16 ಲಕ್ಷ, ಇನ್ನೋವಾ ಕಾರು 15 ಲಕ್ಷ, ಗೃಹೋಪಯೋಗಿ ವಸ್ತುಗಳು 12 ಲಕ್ಷ.
ಅಸಮತೋಲನ ಆಸ್ತಿ ಮೌಲ್ಯ: 71.72 ಲಕ್ಷ. (ಶೇ.239)

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement