ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಅವಕಾಶ ಕೊಟ್ಟರೆ ಕಪ್ಪುಹಣ ವಾಪಸ್ ತರ್ತೇನೆ ಭ್ರಷ್ಟರ ಶಿಕ್ಷಿಸಿ, ಶಿಷ್ಟ ಅಧಿಕಾರಿಗಳ ಸನ್ಮಾನಿಸ್ತೇನೆ

ಕಳೆದ ಚುನಾವಣೆಯಲ್ಲಿನ ಆಡ್ವಾಣಿ..

Mainashree
Updated On : 31 Mar 2014, 4:38 am

ಬಿಜಾಪುರ/ಬೆಳಗಾವಿ/ನಾಂದೇಡ್: ಕಳೆದ ಚುನಾವಣೆಯಲ್ಲಿನ ಆಡ್ವಾಣಿ ಅವರ ಪ್ರಮುಖ ವಿಷಯ ಕಪ್ಪುಹಣ ವಿಚಾರ ಇದೇ ಮೊದಲ ಬಾರಿಗೆ ಮೋದಿ ಕಡೆಯಿಂದ ಸದ್ದು ಮಾಡಿದೆ.
ಬೆಳಗಾವಿಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದ ಅವರು, 60 ತಿಂಗಳ ಆಡಳಿತಕ್ಕೆ ಅವಕಾಶ ನೀಡಿ, ವಿದೇಶದಲ್ಲಿರುವ ಕಪ್ಪು ಹಣ ವಾಪಸ್ ತರ್ತೇವೆ, ಭ್ರಷ್ಟ ಅಧಿಕಾರಿಗಳನ್ನು ಶಿಕ್ಷಿಸಿ, ಪ್ರಾಮಾಣಿಕ ಅಧಿಕಾರಿಗಳನ್ನು ಸನ್ಮಾನಿಸುತ್ತೇವೆ ಎಂದು ಭರವಸೆ ನೀಡಿದರು.
ಕನ್ನಡದಲ್ಲೇ ಯುಗಾದಿ ಶುಭಾಶಯ ಕೋರಿದ ಅವರು, ಮರಾಠಿ ಭಾಷಿಕರಿಗಾಗಿ ಯುಗಾದಿ ಪಡವಾ ಎಂದರು.

ಬೆಳಗಾವಿಯಲ್ಲಿ
-    ಗೋದಾಮುಗಳಲ್ಲಿರುವ ಆಹಾರ ಧಾನ್ಯವನ್ನು ಸುಪ್ರೀಂಕೋರ್ಟೇ ಆದೇಶ ನೀಡಿದ್ದರೂ ಏಕೆ ಹಂಚಿಲ್ಲ.
-    ದೇಶದಲ್ಲಿ ವಿದ್ಯುತ್ ಸಮಸ್ಯೆ ಇದೆ, ಆದರೂ ಗುಜರಾತಿನಲ್ಲಿ 24 ಗಂಟೆಗಳ ಕಾಲ ವಿದ್ಯುತ್ ಹಂಚಿಕೆ ಮಾಡುತ್ತಿದ್ದೇವೆ.
-    ದೇಶವನ್ನು ಮುನ್ನಡೆಸುವುದೇ ಮೋದಿ ಅಜೆಂಡಾ, ಮೋದಿ ತಡೆಯುವುದೇ ಕಾಂಗ್ರೆಸ್ ಅಜೆಂಡಾ

ಬಿಜಾಪುರದಲ್ಲಿ
ಚುನಾವಣೆ ಬಳಿಕ ಕಾಂಗ್ರೆಸ್ ನಿರ್ನಾಮ ಖಚಿತ
-    ಕಳೆದ 10 ವರ್ಷಗಳಲ್ಲಿ ಕಾಂಗ್ರೆಸ್ ಸಾಧನೆ ಕೇವಲ ಭ್ರಷ್ಟಾಚಾರ
-    ದೇಶದಲ್ಲಿ ಇರುವುದು ಮೋದಿ ಅಲೆ, ಬಿಜೆಪಿಯೇ ಗೆಲ್ಲೋದು
-    ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಸುತ್ತಿದ್ದೇನೆ, ಯಾವ ಭಾಗದಲ್ಲೂ ಕಾಂಗ್ರೆಸ್ ಅಲೆಯೇ ಇಲ್ಲ
-    ದೇಶವನ್ನು ಕೊಳ್ಳೆ ಹೊಡೆದವರಿಗೆ ತಕ್ಕ ಶಿಕ್ಷೆಯಾಗಲೇಬೇಕು
-    ಕಾಂಗ್ರೆಸ್‌ನವರು ಮೊದಲು ಹಸ್ತಲಾಘವ ಕೊಡ್ತಾರೆ, ಬಳಿಕ 'ಕೈ'ಯನ್ನೇ ಕೊಡುತ್ತಾರೆ
-    ಯುವಜನಾಂಗವನ್ನು ಕಾಂಗ್ರೆಸ್ ಲೆಕ್ಕಕ್ಕೇ ತೆಗೆದುಕೊಂಡಿಲ್ಲ
-    ಈ ಬಾರಿಯೂ ಕಾಂಗ್ರೆಸ್ 10 ಕೋಟಿ ಯುವಕರಿಗೆ ಉದ್ಯೋಗ ಕೊಡುವುದಾಗಿ ಹೇಳಿದೆ
-    ಹಿಂದಿನ ಬಾರಿಯೂ ಹೀಗೆಯೇ ಹೇಳಿತ್ತು, ಆದರೆ ಈಡೇರಿಲ್ಲ ಅಷ್ಟೇ.
-    ಯುವ ಜನಾಂಗದ ಮೇಲೆ ಕಾಂಗ್ರೆಸ್‌ಗೆ ನಂಬಿಕೆಯೇ ಇಲ್ಲ
-    ಈ ಸರ್ಕಾರದಲ್ಲಿ ಕಬ್ಬು ಬೆಳೆಗಾರರು ಸಾಲದ ಸುಳಿಯಲ್ಲಿದ್ದಾರೆ
-    ಬಿಜೆಪಿಗೆ ಮತ ನೀಡಿದರೆ ಕಬ್ಬು ಬೆಳೆಗಾರರ ಸಂಕಷ್ಟ ನಿವಾರಣೆಯಾಗುತ್ತದೆ.

ಮಹಾರಾಷ್ಟ್ರದಲ್ಲಿ

-    ಭ್ರಷ್ಟಾಚಾರದ ವಿಚಾರದಲ್ಲಿ ರಾಜಿಯೇ ಇಲ್ಲ ಎಂದು ಶಹಜಾದಾ(ರಾಹುಲ್) ಹೇಳುತ್ತಾರೆ. ಆದರೆ ಚವಾಣ್‌ಗೆ ಟಿಕೆಟ್ ನೀಡುತ್ತಾರೆ. ಇದು ನಾಚಿಕೆಗೇಡಿನ ವಿಚಾರ.
-    ಭ್ರಷ್ಟಾಚಾರಿಗಳ ವಿರುದ್ಧ ಕ್ರಮ ಕೈಗೊಳ್ಳುವುದೆಂದರೆ ಅವರಿಗೆ ಟಿಕೆಟ್ ನೀಡುವುದೇ? ಹಾಗಾದರೆ ಕಾಂಗ್ರೆಸ್‌ನಲ್ಲಿ ಎಂತಹ 'ಆದರ್ಶ' ಅಭ್ಯರ್ಥಿಗಳಿರಬಹುದು?
-    ಕಾರ್ಗಿಲ್‌ನ ಹುತಾತ್ಮರ ಪತ್ನಿಯರಿಗೆ ನೀಡಲಾದ ಫ್ಲ್ಯಾಟ್‌ಗಳಲ್ಲೂ ಹಗರಣ ನಡೆಸುವುದೇ?
-    ಕೃಷಿ ಸಚಿವ ಪವಾರ್‌ಗೆ ಕ್ರಿಕೆಟ್ ಬಗ್ಗೆ ಮಾತನಾಡಲು ಗೊತ್ತು. ಆದ್ರೆ ಸಾಯುತ್ತಿರುವ ರೈತರ ಬಗ್ಗೆ ಮಾತನಾಡಲು ಆಗುವುದಿಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement