ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಯಾವ ಸಮಸ್ಯೆ ಪ್ರಮುಖ

Mainashree
Updated On : 30 Mar 2014, 11:14 am

ಹೇಗೆ ನಡೆಯಿತು ಸರ್ವೆ?
ಜನವರಿ ಮೊದಲ ವಾರದಿಂದ ಮಾರ್ಚ್ ಮೊದಲ ವಾರದ ವರೆಗೆ ದೇಶಾದ್ಯಂತ 380 ಲೋಕಸಭಾ ಕ್ಷೇತ್ರಗಳಲ್ಲಿ ಈ ಸರ್ವೆ ನಡೆಸಲಾಗಿದೆ. ಪ್ರತಿ ಕ್ಷೇತ್ರದಿಂದ 300 ಮಂದಿಯ ಅಭಿಪ್ರಾಯ ಪಡೆಯಲಾಗಿದೆ. ಒಟ್ಟಾರೆ 1,14,000 ಸ್ಯಾಂಪಲ್ ಸಂಗ್ರಹಿಸಲಾಗಿದೆ.


ಸದ್ಯದ ಸ್ಥಿತಿಯಲ್ಲಿ ದೇಶಾದ್ಯಂತ ದುರಾಡಳಿತದ ವಿರುದ್ಧ ಅಲೆಯಿದೆ. ಈ ಚುನಾವಣೆ ದೇಶದ ಪರಿಸ್ಥಿತಿಯನ್ನು ಬದಲಾಯಿಸಲಿದೆ. ಸರ್ವೆ ಏನು ಹೇಳುತ್ತೋ, ಬಿಡುತ್ತೋ ಆದರೆ ನರೇಂದ್ರ ಮೋದಿ, ಬಿಜೆಪಿ ಮತ್ತು ಎನ್‌ಡಿಎ ಗೆಲವು ಸಾಧಿಸುವುದು ಖಚಿತ.
- ಮುಖ್ತಾರ್ ಅಬ್ಬಾಸ್ ನಖ್ವಿ, ಬಿಜೆಪಿ ಉಪಾಧ್ಯಕ್ಷ

ಮೋದಿಯೇ ಪ್ರಧಾನಿಯಾಗಲಿ
ಸಮೀಕ್ಷೆಯಲ್ಲಿ ದೇಶಾದ್ಯಂತ ನರೇಂದ್ರ ಮೋದಿ ಅಲೆ ಇರುವುದು ಮತ್ತೊಮ್ಮೆ ಸ್ಪಷ್ಟವಾಗಿದೆ. ದೇಶಾದ್ಯಂತ ಶೇ. 43ರಷ್ಟು ಮಂದಿ ಪ್ರಧಾನಿ ಹುದ್ದೆಗೆ ಮೋದಿ ಅವರೇ ಸೂಕ್ತ ಎಂದಿದ್ದಾರೆ. ದೇಶದ ಮುಂದಿನ ಸರ್ಕಾರದ ಭವಿಷ್ಯವನ್ನು ನಿರ್ಧರಿಸುವ ಪ್ರಮುಖ ಕ್ಷೇತ್ರವಾದ ಉತ್ತರ ಭಾರತದಲ್ಲಿ ಶೇ.48ರಷ್ಟು ಮಂದಿ ಮೋದಿ ಪರ ಬೆಂಬಲ ವ್ಯಕ್ತಪಡಿಸಿದ್ದರೆ, ಶೇ.27ರಷ್ಟು ಮಂದಿಯಷ್ಟೆ ರಾಹುಲ್ ಪ್ರಧಾನಿಯಾಗಲಿ ಎಂದು ಹೇಳಿದ್ದಾರೆ. ಇನ್ನು ಮಧ್ಯಪ್ರದೇಶ, ಛತ್ತೀಸ್‌ಗಡ ಮತ್ತು ರಾಜಸ್ಥಾನವನ್ನೊಳಗೊಂಡ ಮಧ್ಯ ಭಾರತದಲ್ಲಿ ಶೇ. 45.4ರಷ್ಟು ಮಂದಿ ಮೋದಿ ಬೆಂಬಲಿಸಿದ್ದರೆ, ಶೇ. 29ರಷ್ಟು ಮಂದಿಯಷ್ಟೆ ರಾಹುಲ್‌ಗೆ ಜೈ ಅಂದಿದ್ದಾರೆ. ಪಶ್ಚಿಮ ಭಾರತದಲ್ಲಿ ಅತಿ ಹೆಚ್ಚು ಮಂದಿ ಮೋದಿಯಿಂದ ಪ್ರಭಾವಿತರಾದಂತಿದೆ. ಶೇ. 57 ಮಂದಿ ಮೋದಿ ಪರ ನಿಂತಿದ್ದರೆ, ಶೇ. 24.4ರಷ್ಟು ಮಂದಿಯಷ್ಟೆ ರಾಹುಲ್ ಪರ ಒಲವು ತೋರಿದ್ದಾರೆ. ಇನ್ನು ಪೂರ್ವ ಭಾರತದಲ್ಲೂ ಮೋದಿ ಜನಪ್ರಿಯತೆಯಲ್ಲಿ ಮುಂದಿದ್ದಾರೆ. ಆದರೆ, ಈ ಭಾಗದಲ್ಲಿ ರಾಹುಲ್ ಮತ್ತು ಮೋದಿ ನಡುವಿನ ಅಂತರ ಜಾಸ್ತಿಯೇನೂ ಇಲ್ಲ. ಶೇ. 34.3ರಷ್ಟು ಮಂದಿ ಮೋದಿ ಪರವಾಗಿದ್ದರೆ, ರಾಹುಲ್‌ರನ್ನು ಶೇ. 31.1ರಷ್ಟು ಮಂದಿ ಬೆಂಬಲಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement