ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ರಾಮನಾಮ ಜಪ ಕೈಬಿಟ್ಟಿತೇ ಆರೆಸ್ಸೆಸ್?

ಆರೆಸ್ಸೆಸ್ 'ರಾಮನಾಮ' ಜಪ ಕೈಬಿಟ್ಟು, ಅಭಿವೃದ್ಧಿ ಮಂತ್ರ ಪಠಿಸುತ್ತಿದೆಯೇ? ಲೋಕಸಭಾ..

Mainashree
Updated On : 31 Mar 2014, 4:38 am

-ಮೋದಿಗೆ 43% ಮಂದಿ ಬೆಂಬಲ

ನವದೆಹಲಿ:
ಆರೆಸ್ಸೆಸ್ 'ರಾಮನಾಮ' ಜಪ ಕೈಬಿಟ್ಟು, ಅಭಿವೃದ್ಧಿ ಮಂತ್ರ ಪಠಿಸುತ್ತಿದೆಯೇ? ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಲೋಕ್ ಸಾರಥಿ ಫೌಂಡೇಷನ್ ಜತೆಗೂಡಿ ಆರೆಸ್ಸೆಸ್ ಮುಖವಾಣಿ ಆರ್ಗನೈಸರ್ ನಿಯತಕಾಲಿಕೆ ನಡೆಸಿದ ಸಮೀಕ್ಷೆ ಇಂಥದ್ದೊಂದು ಅನುಮಾನ ಹುಟ್ಟುಹಾಕಿದೆ.
ಅಭಿವೃದ್ಧಿ ಹಾಗೂ ಉತ್ತಮ ಆಡಳಿತ ಮತದಾರರ ಪಾಲಿಗೆ ಈ ಬಾರಿ ಪ್ರಮುಖ ಆದ್ಯತೆ ಆಗಿರಲಿದೆ ಎಂಬುದನ್ನು ಈ ಚುನಾವಣಾ ಪೂರ್ವ ಸಮೀಕ್ಷೆ ಸಾರಿ ಹೇಳಿದೆ. ಆದರೆ, ರಾಮಮಂದಿರ ವಿಚಾರ ಕುರಿತು ಪತ್ರಿಕೆ ಹಾಗೂ ಸಮೀಕ್ಷೆ ಮೌನ ವಹಿಸಿವೆ. ಈ ಮೂಲಕ ರಾಮಮಂದಿರದ ಅಲೆಯ ಮೇಲೆ ಸವಾರಿ ಮಾಡುವ ಕಾಲ ಮುಗಿಯಿತು. ಈ ಬಾರಿಯ ಚುನಾವಣೆಯಲ್ಲಿ 'ಅಭಿವೃದ್ಧಿಯ ಮಂತ್ರ' ಪಠಣದಿಂದಲೇ ಮತದಾರರನ್ನು ಸೆಳೆಯುವ ಪ್ರಯತ್ನ ನಡೆಯಲಿದೆ ಎನ್ನುವ ಸಂದೇಶವನ್ನು ಆರೆಸ್ಸೆಸ್ ರವಾನಿಸಿದಂತಾಗಿದೆ.
ಈ ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ಅಭಿವೃದ್ಧಿ ವಿಚಾರಗಳಾದ ಉದ್ಯೋಗಾವಕಾಶ, ವಿದ್ಯುತ್, ರಸ್ತೆಗಳು ಮತ್ತು ಆರೋಗ್ಯ ಸೇವೆಗಳಿಗಷ್ಟೇ ಹೆಚ್ಚಿನ ಆದ್ಯತೆ ನೀಡಲಾಗಿದೆ. ಒಂದು ರೀತಿಯಲ್ಲಿ ಇದು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ ಅಭಿವೃದ್ಧಿಯ ಮಂತ್ರವನ್ನು ಪ್ರತಿಧ್ವನಿಸುವಂತಿದೆ.

ಮಹಿಳೆಯರಿಗೆ ರಾಹುಲ್ ಇಷ್ಟ
ಉತ್ತರ ಭಾರತದಲ್ಲಿ ಪುರುಷ ಮತ್ತು ಮಹಿಳೆಯರಿಬ್ಬರೂ ಪ್ರಧಾನಿ ಹುದ್ದೆಗೆ ನರೇಂದ್ರ ಮೋದಿ ಅವರೇ ಸೂಕ್ತ ಎಂದಿದ್ದಾರೆ. ಆದರೆ, ಪುರುಷರಿಗಿಂತ ಹೆಚ್ಚು ಮಂದಿ ಮಹಿಳೆಯರು ರಾಹುಲ್ ಅನ್ನು ಮೆಚ್ಚಿಕೊಂಡಿದ್ದಾರೆ.


ಚುನಾವಣೆ ವೇಳೆ ಆರೆಸ್ಸೆಸ್ ಯಾವುದೇ ಸಮೀಕ್ಷೆ ನಡೆಸುವುದಿಲ್ಲ. ಈ ಸಮೀಕ್ಷೆ ನಡೆಸಿದ್ದು ಆರ್ಗನೈಸರ್. ಇದನ್ನು ಆರೆಸ್ಸೆಸ್ ಸಮೀಕ್ಷೆ ಎಂದು ಹೇಳುವುದು ಸರಿಯಲ್ಲ.
- ರಾಮ್ ಮಾಧವ್ ಆರೆಸ್ಸೆಸ್ ವಕ್ತಾರ
ದೇಶದ ಜನ ದೇವಸ್ಥಾನ ಮತ್ತು ಮಸೀದಿ ಎರಡನ್ನೂ ಗೌರವಿಸುತ್ತಾರೆ ಎನ್ನುವುದನ್ನು ನಾವು ಯಾವಾಗಲೂ ಹೇಳುತ್ತಿರುತ್ತೇವೆ. ದೇವಸ್ಥಾನ ಮತ್ತು ಮಸೀದಿ ನಡುವೆ ಪ್ರತ್ಯೇಕತೆ ಬೆಳೆಸುವುದು ಆರೆಸ್ಸೆಸ್ ಮತ್ತು ಬಿಜೆಪಿ ಕೆಲಸ.
- ರಶೀದ್ ಅಳ್ವಿಕಾಂಗ್ರೆಸ್ ನಾಯಕ

ಉತ್ತರ ಭಾರತ
ಮೋದಿ    48.6%
ರಾಹುಲ್    27%
ಕೇಜ್ರಿವಾಲ್    4.7%
ಮುಲಾಯಂ    6.4%
ಮಾಯಾವತಿ    5.2%
ಇತರರು    8.2%

ಕೇಂದ್ರ ಭಾರತ
ಮೋದಿ    45.4%
ರಾಹುಲ್    29%
ಕೇಜ್ರಿವಾಲ್    14.3%
ಮುಲಾಯಂ    2.4%
ಮಾಯಾವತಿ    2.2%
ಇತರರು    6.7%

ಪೂರ್ವ ಭಾರತ
ಮೋದಿ    34.3%
ರಾಹುಲ್    31.1%
ಮಮತಾ    14.2%
ಬುದ್ಧದೇವ್    12.3%
ಇತರರು    8.1%

ಪಶ್ಚಿಮ ಭಾರತ
ಮೋದಿ    57%
ರಾಹುಲ್    24%
ಕೇಜ್ರಿವಾಲ್    4%
ಶರದ್ ಪವಾರ್    10.2%
ಇತರರು    4.4%

ದಕ್ಷಿಣ ಭಾರತ
ಮೋದಿ    33.3%
ರಾಹುಲ್    33.8%
ಕೇಜ್ರಿವಾಲ್    4.3%
ಜಯಲಲಿತಾ    15.8%
ಇತರರು    10.8%

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement