ದಿಗ್ವಿಜಯ್ ಮಾಡಿದ್ದು ಸರಿ ಅಲ್ಲ: ಪೂಜಾರಿ
'ಪ್ರೀತಿ ಪ್ರಣಯ' ವಿಷಯದಲ್ಲಿ ಕಾಂಗ್ರೆಸ್ ಮುಖಂಡ ದಿಗ್ವಿಜಯ ಸಿಂಗ್ ಮಾಡಿದ್ದು ಸರಿ ಅಲ್ಲ ಎಂದು..
ಮಂಗಳೂರು: 'ಪ್ರೀತಿ ಪ್ರಣಯ' ವಿಷಯದಲ್ಲಿ ಕಾಂಗ್ರೆಸ್ ಮುಖಂಡ ದಿಗ್ವಿಜಯ ಸಿಂಗ್ ಮಾಡಿದ್ದು ಸರಿ ಅಲ್ಲ ಎಂದು ಕಾಂಗ್ರೆಸ್ ಮುಖಂಡ ಜನಾರ್ದನ ಪೂಜಾರಿ ಆರೋಪಿಸಿದ್ದಾರೆ. ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ದಿಗ್ವಿಜಯಸಿಂಗ್ ತಾನು ಮದುವೆಯಾಗುತ್ತೇನೆ ಎಂದು ಒಪ್ಪಿದ್ದಾರೆ. ಆದರೆ ಮೋದಿ ಪತ್ನಿಯನ್ನು ಒಪ್ಪಿಕೊಳ್ಳುವುದಿಲ್ಲ. ಹೀಗೆಂದ ಮಾತ್ರಕ್ಕೆ ನಾನು ದಿಗ್ವಿಜಯ ಸಿಂಗ್ ಕೃತ್ಯವನ್ನು ಬೆಂಬಲಿಸುವುದಿಲ್ಲ. ಮೋದಿ ಪ್ರಧಾನಿ ಅಭ್ಯರ್ಥಿ. ಹೀಗಾಗಿ ಅವರು ಇತರರಿಗೆ ಮಾದರಿಯಾಗಿರಬೇಕು. ಮೋದಿ ತನ್ನ ಹೆಂಡತಿಯನ್ನು ಮನೆಗೆ ಕರೆದುಕೊಂಡು ಹೋಗಲೇಬೇಕು. ಮೋದಿ ಪ್ರಧಾನಿಯಾಗಲಿ, ರಾಷ್ಟ್ರಪತಿಯಾಗಲಿ ಏನೇ ಆಗಲಿ ನಾನಂತೂ ಬಿಡುವುದಿಲ್ಲ ಎಂದರು. ನಿಡ್ಡೋಡಿ ಉಷ್ಣ ವಿದ್ಯುತ್ ಸ್ಥಾವರ ಸ್ಥಾಪನೆ ಸಾಧ್ಯವೇ ಇಲ್ಲ ಎಂದರು.