ನಾನು ರಾಜೀವ್ ಪುತ್ರಿಯೇ
'ನಾನು ರಾಜೀವ್ ಗಾಂಧಿಯ ಪುತ್ರಿಯೇ'. ದೂರದರ್ಶನಕ್ಕೆ ನೀಡಿದ...
ಅಮೇಠಿ/ನವದೆಹಲಿ: 'ನಾನು ರಾಜೀವ್ ಗಾಂಧಿಯ ಪುತ್ರಿಯೇ'. ದೂರದರ್ಶನಕ್ಕೆ ನೀಡಿದ ಸಂದರ್ಶನದಲ್ಲಿ 'ಪ್ರಿಯಾಂಕಾ ನನ್ನ ಮಗಳಿದ್ದಂತೆ' ಎಂಬ ನರೇಂದ್ರ ಮೋದಿ ಹೇಳಿಕೆಗೆ ಪ್ರಿಯಾಂಕಾ ಪ್ರತಿಕ್ರಿಯೆ ಇದು. ಸಂದರ್ಶನದಲ್ಲಿ 'ಸೋನಿಯಾ ಮತ್ತು ರಾಹುಲ್ ನನ್ನ ರಾಜಕೀಯ ವೈರಿಗಳು. ಅವರ ವಿರುದ್ಧ ಮಾತನಾಡುತ್ತೇನೆ. ಆದರೆ ಪ್ರಿಯಾಂಕಾ ವಿರುದ್ಧ ಮಾತಾಡಲು ಇಷ್ಟಪಡುವುದಿಲ್ಲ ಎಂದಿದ್ದರು ಮೋದಿ. ಗುರುವಾರ ಅಮೇಠಿ ಪ್ರಚಾರ ಸಂದರ್ಭ ಸುದ್ದಿಗಾರರು ಮೋದಿ ಹೇಳಿಕೆ ಪ್ರಿಯಾಂಕಾ ಪ್ರತಿಕ್ರಿಸಿದರು. ಇದಕ್ಕೂ ಮುನ್ನ ಮಾತನಾಡಿದ್ದ ಸಚಿವ ಚಿದಂಬರಂ, 'ಮೋದಿ ಪ್ರಿಯಾಂಕಾರನ್ನು ತನ್ನ ಪುತ್ರಿಯಂತೆ ಪರಿಗಣಿಸಿರುವುದಕ್ಕೆ ಖುಷಿಯಾಗಿದೆ. ಆದರೆ, ಮೋದಿಯನ್ನು ಪ್ರಿಯಾಂಕಾ ತಂದೆಯಂತೆ ಪರಿಗಣಿಸಲು ಇಷ್ಟಪಡುತ್ತಾರೋ, ಇಲ್ಲವೋ' ಎಂದಿದ್ದಾರೆ.